ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

Written By:

'ಹ್ಯಾಪಿ ವಿತ್ ನಿಸ್ಸಾನ್' ಅಭಿಯಾನದ ಏಳನೆಯ ಆವೃತ್ತಿಯ ಭಾಗವಾಗಿ ನಿಸ್ಸಾನ್ ಇಂಡಿಯಾ ತನ್ನ 'ನೀರಿಲ್ಲದೆ ಕಾರು ಸ್ವಚ್ಛಗೊಳಿಸುವಿಕೆ' ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ಹೌದು, ನಿಸ್ಸಾನ್ ವಾಹನ ತಯಾರಕ ಸಂಸ್ಥೆಯು ಭಾರತದಲ್ಲಿ ತನ್ನ 'ಹ್ಯಾಪಿ ವಿತ್ ನಿಸ್ಸಾನ್' ಅಭಿಯಾನವನ್ನು ಈಗಾಗಲೇ ಯಶಸ್ವಿಯಾಗಿ ಕಾರ್ಯಗತ ನೆಡೆಸುವತ್ತ ಹೆಜ್ಜೆ ಹಾಕಿದ್ದು, ತನ್ನ ಈ ಅಭಿಯಾನದ ಏಳನೆಯ ಆವೃತ್ತಿಯಾಗಿ ನೀರಿಲ್ಲದೆ ಕಾರು ಸ್ವಚ್ಛಗೊಳಿಸುವಿಕೆ ಎಂಬ ಯೋಜನೆಗೆ ಚಾಲನೆ ನೀಡಿದೆ.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ಬಾಲಿವುಡ್ ನಟ ಮತ್ತು ನಿಸ್ಸಾನ್ ಕಂಪನಿಯ ಬ್ರಾಂಡ್ ರಾಯಭಾರಿಯು ಆಗಿರುವಂತಹ ಸುಶಾಂತ್ ಸಿಂಗ್ ರಜಪೂತ್ ಅವರು ಗುರಂಗಾವ್‌ನಲ್ಲಿರುವ ಸಂಸ್ಥೆಯ ಮಾರಾಟ ಮಳಿಗೆಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ಆಗಸ್ಟ್ 17ರಿಂದ 24ರವರೆಗೆ ದೇಶದಾದ್ಯಂತ ಇರುವಂತಹ 148 ನಿಸ್ಸಾನ್ ಮತ್ತು ಮತ್ತು ಡಾಟ್ಸನ್ ವಿತರಕ ಮಳಿಗೆಗಳಲ್ಲಿ ಈ 'ಹ್ಯಾಪಿ ವಿತ್ ನಿಸ್ಸಾನ್' ಅಭಿಯಾನದ ಏಳನೇ ಆವೃತ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಕಂಪನಿ ತಿಳಿಸಿದೆ.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ನೀರನ್ನು ಉಪಯೋಗಿಸದೆ ಕೇವಲ ದ್ರಾವಣವನ್ನು ಬಳಸಿ ಕಾರನ್ನು ತೊಳೆಯುವ ವಿಶಿಷ್ಟ ರೀತಿಯ ಅಭಿಯಾನ ಇದಾಗಿದ್ದು, ನೀರು ಉಪಯೋಗಿಸಲು ಇಷ್ಟ ಪಡದ ಗ್ರಾಹಕರು ಈ ವಿಧಾನವನ್ನು ಬಳಸಬಹುದಾಗಿದೆ.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ಕಾರು ತೊಳೆಯುವ ಕಾರ್ಯಕ್ಕೆ ಯಾವುದೇ ರೀತಿಯ ನೀರಿನ ಅಗತ್ಯವಿರುವುದಿಲ್ಲ ಎಂಬ ವಿಚಾರ ಹೆಚ್ಚು ಖುಷಿ ಕೊಡಲಿದ್ದು, ಇದರಿಂದಾಗಿ ವರ್ಷಕ್ಕೆ ಸುಮಾರು 130 ದಶಲಕ್ಷ ಲೀಟರ್ ನೀರನ್ನು ಉಳಿಸಬಹುದು ಎಂಬ ಅಂದಾಜು ಮಾಹಿತಿ ಇದ್ದು, ಈ ರೀತಿಯ ಪರಿಸರ ಸ್ನೇಹಿ ಕಾರ್ಯಕ್ರಮ ಕೈಗೊಂಡ ನಿಸ್ಸಾನ್ ಸಂಸ್ಥೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ನೀರು ಬಳಸದೆ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಸ್ಸಾನ್

ನೀರು ರಹಿತ ಕಾರು ಸ್ವಚ್ಛಗೊಳಿಸುವ ಕಾರ್ಯಕ್ರಮದ ಜೊತೆಗೆ, ನಿಸ್ಸಾನ್ ತನ್ನ ನೆಟ್ವರ್ಕ್ ಅನ್ನು ಹೆಚ್ಚಿಸುವ ಸಲುವಾಗಿ ಪೆಟಿಎಂ ಜೊತೆ ಸಹಭಾಗಿತ್ವವನ್ನು ಪ್ರಕಟಿಸಿದ್ದು, ಗ್ರಾಹಕರಿಗೆ ಹಣರಹಿತ ವ್ಯವಹಾರಗಳ ಪ್ರಯೋಜನವನ್ನು ಮುಂಬರುವ ದಿನಗಳಲ್ಲಿ ನೀಡಲಿದೆ.

English summary
Nissan India launched its 'waterless car cleaning' initiative, part of the seventh edition of the 'Happy with Nissan' service campaign for its customers in India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark