ಬರುತ್ತೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

Written By:

ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಾರು ತಯಾರಕ ಕಂಪನಿ ಟೊಯೊಟಾ ಭವಿಷ್ಯದ ಪರ್ಯಾಯ ಇಂಧನದ ಬಗ್ಗೆ ಹೆಚ್ಚು ಹೆಚ್ಚು ಗಮನ ಹರಿಸಿದ್ದು, ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಸೋಲಾರ್ ಮೇಲ್ಛಾವಣಿ ಹೊಂದಿರುವ ಕಾರು ಉತ್ಪಾದನೆಯನ್ನು ಮಾಡ ಹೊರಟಿರುವ ಟೊಯೊಟಾ ಕಂಪನಿಯೊಂದಿಗೆ ಕೈ ಜೋಡಿಸಿರುವ ಎಲೆಕ್ಟ್ರಾನಿಕ್ಸ್ ಮತ್ತು ಗೃಹ ಉತ್ಪನ್ನ ದೈತ್ಯ ಪ್ಯಾನಸೋನಿಕ್, ಕಾರಿನ ಸೋಲಾರ್ ರೂಫ್ ಅಭಿವೃದ್ಧಿಪಡಿಸುತ್ತಿದ್ದು 180 ವಾಟ್ಸ್ ನಷ್ಟು ವಿದ್ಯುತ್ ಉತ್ಪಾದಿಸಲಿದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಕಾರಿನ ಮೇಲ್ಛಾವಣಿಗೆ ಸೋಲಾರ್ ವಿದ್ಯುತ್ಕೋಶ ಅಳವಡಿಕೆಯಿಂದಾಗಿ ಹೆಚ್ಚಿನ ಮಟ್ಟದ ಶಕ್ತಿ ದೊರಕುವುದಲ್ಲದೆ, ಕಡಿಮೆ ಇಂಧನ ವ್ಯಯವಾಗುತ್ತದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಈ ನಿಟ್ಟಿನಲ್ಲಿ ಈಗಾಗಲೇ ಹೆಚ್ಚಿನ ವಾಹನ ತಯಾರಕ ಕಂಪನಿಗಳು ಜಾಗೃತರಾಗಿದ್ದು, ಟೊಯೊಟಾ ಮೊಟ್ಟ ಮೊದಲ ಬಾರಿಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸುತ್ತಿರುವುದು ಸಂತೋಷಕರ ಸಂಗತಿ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಪ್ಯಾನಸೋನಿಕ್ ಯೋಜನೆ ಬಗ್ಗೆ ಹಲವು ಬಾರಿ ಸಮೀಕ್ಷೆ ನೆಡೆಸಿದ್ದು, ಕಾರಿನ ಮೇಲ್ಛಾವಣಿಗೆ ಸೋಲಾರ್ ವಿದ್ಯುತ್ಕೋಶ ಅಳವಡಿಸುವ ಅಂತಿಮ ಹಂತದ ಕಾರ್ಯಕ್ಕೆ ಸಿದ್ಧಗೊಳ್ಳುತ್ತಿದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಟೊಯೊಟಾ ಕಾರು ಸೋಲಾರ್ ಪ್ಲಗ್ ಇನ್ ಪ್ಲೇ ಹೈಬ್ರಿಡ್ ತಂತ್ರಜ್ಞಾನ ಹೊಂದಿದ್ದು, ಇದರಿಂದಾಗಿ ಮನೆ ಹೊರಗಡೆ ನಿಲ್ಲಿಸಿರುವ ಸಮಯದಲ್ಲಿ ಚಾರ್ಜ್ ಆಗುವುದಲ್ಲದೆ ಒಮ್ಮೆ ಚಾರ್ಜ್ ಆದ ವಾಹನ ಸರಿ ಸುಮಾರು 3.7 ಮೈಲಿಗಳಷ್ಟು ದೂರ ಕ್ರಮಿಸಬಲ್ಲದು.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಪ್ಲಗ್ ಇನ್ ಪ್ಲೇ ಹೈಬ್ರಿಡ್ ತಂತ್ರಜ್ಞಾನ ಕಾರಿನ ಆಕಾರವನ್ನು ಯಾವುದೇ ರೀತಿಯಲ್ಲೂ ಬದಲಾವಣೆ ಮಾಡದೆ ಹೆಚ್ಚಿನ ಬಲ ತುಂಬುವುದರಲ್ಲಿ ಅನುಮಾನವಿಲ್ಲ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಹೊಸದಾಗಿ ಬರುತ್ತಿರುವ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು 180 ವಾಟ್ಸ್ ನಷ್ಟು ಹೆಚ್ಚಿನ ಶಕ್ತಿ ಪಡೆದುಕೊಳ್ಳಲಿದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಆಕ್ರಣಮಕಾರಿ ಆಕಾರ ಹೊಂದಿರುವ ಟೊಯೊಟಾ ಪ್ರಯಸ್ ಹೈಬ್ರಿಡ್ ಕಾರು, 1.8-ಲೀಟರ್ ನಾಲ್ಕು ಸಿಲಿಂಡರ್ ವಿವಿಟಿ ಎಂಜಿನ್ ಹೊಂದಿದ್ದು, ಜೊತೆಗೆ ವಿದ್ಯುತ್ ಚಾಲಿತ ಮೋಟಾರ್ ಹೊಂದಿರಲಿದೆ.ಆಂತರಿಕ ದಹನ ಕ್ರಿಯೆ ಎಂಜಿನ್ ಹೊಂದಿರುವ ಟೊಯೊಟಾ ಪ್ರಯಸ್, 142ಎನ್ಎಂ ತಿರುಗುಬಲದಲ್ಲಿ 94 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬರಲಿದೆ ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು

ಸೋಲಾರ್ ರೂಫ್ ಹೊಂದಿರುವ ಟೊಯೊಟಾ ಪ್ರಯಸ್ ಕಾರು ವಿದ್ಯುತ್ ಚಾಲಿತ ಮೋಟಾರ್ ಮತ್ತು ಆಂತರಿಕ ಎಂಜಿನ್ ಎರಡು ಸೇರಿ 120ರಷ್ಟು ಅಶ್ವಶಕ್ತಿ ಪಡೆಯಲಿದೆ.

ನೀವೇನಾದರೂ ಪರಿಸರ ಸ್ನೇಹಿ ಕಾರಿನ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರೆ ಈ ಕೆಳಗಿನ ಕಾರಿನ ಚಿತ್ರಗಳ ಮೇಲೆ ಒಮ್ಮೆ ಕಣ್ಣಾಡಿಸಿ...

Read more on ಟೊಯೊಟಾ toyota
English summary
Panasonic's new solar roof for the Toyota Prius Prime is capable of generating up to 180 watts of power.
Story first published: Monday, March 6, 2017, 12:28 [IST]
Please Wait while comments are loading...

Latest Photos