ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

Written By:

ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನು ಆಧರಿಸಿ ಮುಂದಿನ ತಿಂಗಳಿನಿಂದ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ದಿನವೂ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತೀರ್ಮಾನ ಕೈಗೊಂಡಿದೆ.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಕಳೆದ ವಾರ, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಒಂದುಗೂಡಿ, ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರದ ಮುಂದಿಟ್ಟಿದ್ದವು.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಸದ್ಯ ಮೊದಲ ಹಂತದಲ್ಲಿ ಪುದುಚೇರಿ, ವೈಜಾಕ್, ಉದಯ್‌ಪುರ್, ಜಮಶೇಡ್‌ಪುರದಲ್ಲಿ ಮತ್ತು ಚಂಡಿಘರ್ ನಗರಗಳಲ್ಲಿ ಪ್ರತಿದಿನವೂ ಪರಿಷ್ಕರಣೆ ನೆಡೆಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಎಲ್ಲರಿಗೂ ತಿಳಿದಿರುವಂತೆ, ಚಿನ್ನ, ಬೆಳ್ಳಿ ಬೆಲೆಗಳನ್ನು ಪ್ರತಿದಿನವೂ ಪರಿಷ್ಕರಿಸಲಾಗುತ್ತಿದ್ದು, ಇದೇ ರೀತಿಯ ನಿಯಮವನ್ನು ಇಂಧನ ಬೆಲೆ ಪರಿಷ್ಕರಣೆಗೂ ತರಲು ಈ ಮೊದಲೇ ಕಂಪನಿಗಳು ನಿರ್ದರಿಸಿದ್ದವು.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಸದ್ಯ ಐದು ನಗರಗಳಲ್ಲಿ ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುವ ಈ ಪ್ರತಿ ದಿನ ತೈಲ ದರ ಪರಿಷ್ಕರಣೆ ನಿರ್ಣಯದಿಂದಾಗಿ ಪೆಟ್ರೋಲಿಯಂ ಸಂಸ್ಥೆಗಳಿಗೆ ಲಾಭವಾದಲ್ಲಿ ಭಾರತದ ಎಲ್ಲೆಡೆ ವಿಸ್ತರಿಸಲು ಸಂಸ್ಥೆಗಳು ಮುಂದಾಗಲಿವೆ.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ತೈಲ ಕಂಪನಿಗಳು ಹೊಸ ವ್ಯವಸ್ಥೆ ಜಾರಿಯ ಕುರಿತಾಗಿ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕಳೆದ ವಾರ ಚರ್ಚೆ ನೆಡೆಸಿದ್ದರಲ್ಲದೆ, ಇದರಿಂದಾಗುವ ಪ್ರಯೋಜನಗಳನ್ನು ಸವಿವರವಾಗಿ ತಿಳಿಸಿದ್ದರು.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

15 ದಿನಗಳಿಗೆ ಒಮ್ಮೆ ತೈಲ ದರ ಪರಿಷ್ಕರಣೆಯಾಗುತ್ತಿರುವುದರಿಂದ ತೈಲ ಮಾರುಕಟ್ಟೆ ಸಂಸ್ಥೆಗಳಿಗೆ ನಷ್ಟ ಉಂಟಾಗುತ್ತಿದ್ದು, ಈ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪ್ರತಿದಿನ ದರ ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಇನ್ಮೇಲೆ ಇಂಧನ ಬೆಲೆ ಜಾಸ್ತಿ ಅಥವಾ ಕಮ್ಮಿ ಆಯ್ತು ಅಂತ ಗೊತ್ತೇ ಆಗಲ್ಲ !! ಹೇಗೆ ಅಂತೀರಾ ?

ಈ ರೀತಿ ಮಾಡುವುದರಿಂದ ಮತ್ತೊಂದು ಕಂಪನಿಗಳಿಗೆ ಲಾಭವೇನೆಂದರೆ ಪ್ರತಿ ದಿನ ಪೈಸೆಗಳ ಲೆಕ್ಕದಲ್ಲಿ ಏರಿಕೆ ಅಥವಾ ಇಳಿಕೆಯಾಗುವುದರಿಂದ ಗ್ರಾಹಕರು ಇಂಧನದ ಬಗ್ಗೆ ಹೆಚ್ಚು ಗಮನ ಕೊಡದೆ ಇರುವ ಸಾಧ್ಯತೆ ಹೆಚ್ಚಿದೆ.

English summary
Read in Kannada about Petrol and Diesel prices to be revised daily From May-1. Get more details about Petrol and Diesel prices to be revise, oil company's decission, central govt approve and more.
Story first published: Wednesday, April 12, 2017, 17:10 [IST]
Please Wait while comments are loading...

Latest Photos