ಪೋರ್ಷೆ 911 ಜಿಟಿ3 ಬಿಡುಗಡೆ- ಬೆಲೆ ರೂ. 2.31 ಕೋಟಿ
ಸೂಪರ್ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ತನ್ನ ಬಹುನೀರಿಕ್ಷಿತ 911 ಜಿಟಿ3 ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆಯೂ ಎಕ್ಸ್‌ಶೋರಂಗಳ ಬೆಲೆ ಪ್ರಕಾರ ರೂ.2.31 ಕೋಟಿಗೆ ಖರೀದಿಸಬಹುದಾಗಿದೆ.
Recommended Video

ಸೂಪರ್ ಕಾರು ಉತ್ಪಾದನಾ ಸಂಸ್ಥೆಯಾದ ಪೋರ್ಷೆ ತನ್ನ ಬಹುನೀರಿಕ್ಷಿತ 911 ಜಿಟಿ3 ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಕಾರಿನ ಬೆಲೆಯೂ ಎಕ್ಸ್‌ಶೋರಂಗಳ ಬೆಲೆ ಪ್ರಕಾರ ರೂ.2.31 ಕೋಟಿಗೆ ಖರೀದಿಸಬಹುದಾಗಿದೆ.

ಈ ಹಿಂದೆ 2016ರ ಜಿನೆವಾ ಆಟೋ ಮೇಳದಲ್ಲಿ 911 ಜಿಟಿ3 ಕಾರು ಮಾದರಿಯನ್ನು ಪ್ರದರ್ಶನಗೊಳಿಸಿದ್ದ ಪೋರ್ಷೆ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ವಿಶೇಷ ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಳಿಸಿದೆ.

ಹೀಗಾಗಿಯೇ ಹಿಂದಿನ ಮಾದರಿಗಳಿಂತ ಹೊಸ ಆವೃತ್ತಿಯ ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಜೊತೆಗೆ ಸುರಕ್ಷಾ ತಂತ್ರಜ್ಞಾನಗಳಿಗೆ ಹೆಚ್ಚಿನ ಗಮನಹರಿಸಿರುವುದು 911 ಜಿಟಿ3 ಆಯ್ಕೆಯೂ ಸೂಕ್ತವೆನಿಸಿದೆ.

ಎಂಜಿನ್ ಸಾಮರ್ಥ್ಯ
4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಪೆಟ್ರೋಲ್ ಎಂಜಿನ್ ಒದಗಿಸಲಾಗಿದ್ದು, 493-ಬಿಎಚ್‌ಪಿ ಮತ್ತು 460 ಎನ್ಎಂ ಉತ್ಪಾದನೆಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಇದರೊಂದಿಗೆ ಈ ಹಿಂದಿನ ಮಾದರಿಗಳಿಂತ 15 ಕೆ.ಜಿ ತೂಕವನ್ನು ಕಡಿತ ಮಾಡಲಾಗಿದ್ದು, ಕೇವಲ 3.4 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾದ ಸಾಮರ್ಥ್ಯವನ್ನು ಅಳವಡಿಕೆ ಮಾಡಲಾಗಿದೆ.

ಈ ಮೂಲಕ ಪ್ರತಿ ಗಂಟೆಗೆ 320 ಕಿಮಿ ಕ್ರಮಿಸಬಲ್ಲ ಶಕ್ತಿಯನ್ನು ಹೊಂದಿರುವ ಪೋರ್ಷೆ 911 ಜಿಟಿ3, ವೇಗದ ಕಾರು ಪ್ರಯಾಣವನ್ನು ಅತ್ಯಂತ ಸೂಕ್ಷ್ಮವಾಗಿ ನಿಯಂತ್ರಣ ಮಾಡಬಲ್ಲ ಡ್ಯಾಂಪರ್ ಮತ್ತು ಡೈನಾಮಿಕ್ ಎಂಜಿನ್ ಮೌಂಟ್ ಅನ್ನು ಅಳವಡಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹಲವು ವಿಶೇಷ ತೆಗಳಿಂದ ಕೂಡಿರುವ ಪೋರ್ಷೆ 911 ಜಿಟಿ3 ಸೂಪರ್ ಕಾರು ಆಯ್ಕೆದಾರರಿಗೆ ಅತ್ಯುತ್ತಮ ಮಾದರಿಯಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಂಪು ಮತ್ತು ಹಳದಿ ಬಣ್ಣ ಸೇರಿ ಮತ್ತೇರಡು ಹೊಸ ಬಣ್ಣದ ಆಯ್ಕೆಯು ಲಭ್ಯವಿದೆ.


Click it and Unblock the Notifications








