ಒಂದು ಬಾರಿ ಚಾರ್ಜ್ ಮಾಡಿದ್ರೆ 1,773 ಕಿ.ಮಿ ಮೈಲೇಜ್- ಇದು ಪ್ರೊಟೆರಾ ಎಲೆಕ್ಟ್ರಿಕ್ ಬಸ್ ಸ್ಪೆಷಲ್..!!

Written By:

2030ರ ವೇಳೆಗೆ ಶೇ.100 ರಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಉದ್ದೇಶ ಹೊಂದಲಾಗಿದ್ದು, ಈ ಹಿನ್ನಲೆ ಅಮೆರಿಕದ ಪ್ರತಿಷ್ಠಿತ ಆಟೋ ಉತ್ಪಾದನಾ ಸಂಸ್ಥೆ ಪ್ರೊಟೆರಾ ನಿರ್ಮಾಣ ಮಾಡುತ್ತಿರುವ ವಿಶೇಷ ಬಸ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಸದ್ಯ ಆಟೋ ಉತ್ಪಾದನಾ ವಲಯದಲ್ಲಿ ಪ್ರತಿ ಚಾರ್ಜಿಂಗ್ ಮೇಲೆ ಎಷ್ಟು ಪ್ರಮಾಣದ ಮೈಲೇಜ್ ನೀಡುತ್ತದೆ ಎಂಬುವುದರ ಮೇಲೆ ಎಲೆಕ್ಟ್ರಿಕ್ ಎಂಜಿನ್ ಸಾಮರ್ಥ್ಯವನ್ನು ಅಳೆಯುವ ಪರಿಪಾಠವಿದ್ದು, ಪ್ರೊಟೆರಾ ನಿರ್ಮಾಣದ ಎಲೆಕ್ಟ್ರಿಕ್ ಬಸ್‌ಗಳು ಬರೋಬ್ಬರಿ 1,773 ಕಿಮಿ ಮೈಲೇಜ್ ಸಾಮರ್ಥ್ಯವನ್ನು ಹೊಂದುವ ಮೂಲಕ ಆಟೋ ಉತ್ಪಾದನಾ ವಲಯವನ್ನೇ ನಿಬ್ಬೆರಗಾಗುವಂತೆ ಮಾಡಿದೆ.

Recommended Video
Datsun rediGO Gold 1.0-Litre Launched In India - DriveSpark
ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಈ ಹಿಂದೆ ಅಮೆರಿಕ ಮತ್ತೊಂದು ದೈತ್ಯ ಆಟೋ ಉತ್ಪಾದನಾ ಸಂಸ್ಥೆಯಾದ ಟೆಸ್ಲಾ ಕೂಡಾ ಇದೇ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮೂಲಕ ಪ್ರತಿ ಚಾರ್ಜಿಂಗ್‌ಗೆ 550ಕಿಮಿ ಮೈಲೇಜ್ ಸಾಮರ್ಥ್ಯದ ಬ್ಯಾಟರಿಗಳನ್ನು ಉತ್ಪಾದನೆ ಮಾಡಿತ್ತು. ಆದ್ರೆ ಇದೀಗ ಪ್ರೊಟೆರಾ ನಿರ್ಮಾಣದ ಎಲೆಕ್ಟ್ರಿಕ್ ಬಸ್‌ಗಳನ್ನು ಹೊಸ ಚರ್ಚೆಗೆ ಕಾರಣವಾಗಿವೆ.

ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಇನ್ನು ಪ್ರೊಟೆರಾ ಸಂಸ್ಥೆಯು ಈಗಾಗಲೇ ಎಲೆಕ್ಟ್ರಿಕ್ ಬಸ್ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳಗೆ ತನ್ನ ಸೇವೆಯನ್ನು ಒದಗಿಸುವ ಮೂಲಕ ಇದೀಗ ಹೊಸ ಆವಿಷ್ಕಾರವು ಇಡಿ ಆಟೋ ಉದ್ಯಮವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಪ್ರಸಕ್ತ ಆಟೋ ಮಾರುಕಟ್ಟೆಯಲ್ಲಿಯೇ ಇದೊಂದು ಐತಿಹಾಸಿಕ ಆವಿಷ್ಕಾರವಾಗಿದ್ದು, ಪ್ರೊಟೆರಾ ನಿರ್ಮಾಣದ ಇ2 ಮ್ಯಾಕ್ಸ್ ಹೆಸರಿನ ಬಸ್ ಆವೃತ್ತಿಯಲ್ಲಿ ಸುಧಾರಿತ ಮಾದರಿಯ ಎಲೆಕ್ಟ್ರಿಕ್ ಎಂಜಿನ್ ಮಾದರಿಯನ್ನು ಬಳಕೆ ಮಾಡಿದೆ.

ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಈ ಹಿನ್ನೆಲೆ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೂಡಾ ನೆಡೆಸಿರುವ ಪ್ರೊಟೆರಾ ಸಂಸ್ಥೆಯು, ಪೂರ್ಣ ಪ್ರಮಾಣದ ಬ್ಯಾಟರಿ ಬಳಕೆ ಮಾಡುವ ಉದ್ದೇಶದಿಂದ ಧೀರ್ಘ ಕಾಲದ ಪ್ರಯಾಣ ಮಾಡಿ ಮೈಲೇಜ್ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಿ ಯಶಸ್ವಿಯಾಗಿದೆ.

ಒಂದೇ ಚಾರ್ಜ್‌ನಲ್ಲಿ 1,773ಕಿ.ಮಿ ಮೈಲೇಜ್ ನೀಡುತ್ತೆ ಪ್ರೊಟೆರಾ ಬಸ್

ಹೀಗಾಗಿ ಸದ್ಯ ಪ್ರೊಟೆರಾ ನಿರ್ಮಾಣ ಮಾಡಿರುವ ಎಲೆಕ್ಟ್ರಿಕ್ ಬಸ್‌ಗಳನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಅಮೆರಿಕದಲ್ಲಿ ಅಷ್ಟೇ ಅಲ್ಲದೇ ಜಾಗತಿಕ ಮಾರುಕಟ್ಟೆಯಲ್ಲೂ ಪ್ರೊಟೆರಾ ಎಲೆಕ್ಟ್ರಿಕ್ ಬಸ್‌ಗಳು ಖರೀದಿಗೆ ಲಭ್ಯವಾಗಲಿವೆ.

English summary
Read in Kannada about Proterra's electric bus can go 1,772 kms on single charge.
Story first published: Thursday, September 28, 2017, 16:33 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark