ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಸಾಕಷ್ಟು ಹಳೆಯ ಆವೃತಿಯಾದ ಮಹೀಂದ್ರಾ ಸಂಸ್ಥೆಯ cವಾಹನ ಈಗಲೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹಲವು ವರ್ಷಗಳಿಂದ ಅತ್ಯಧಿಕ ಮಾರಾಟವಾದ ಯುಟಿಲಿಟಿ ವೆಹಿಕಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

By Girish

ಸಾಕಷ್ಟು ಹಳೆಯ ಆವೃತಿಯಾದ ಮಹೀಂದ್ರಾ ಸಂಸ್ಥೆಯ ಬೊಲೆರೊ ವಾಹನ ಈಗಲೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಹಲವು ವರ್ಷಗಳಿಂದ ಅತ್ಯಧಿಕ ಮಾರಾಟವಾದ ಯುಟಿಲಿಟಿ ವೆಹಿಕಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಯಾವೆಲ್ಲಾ ಅಂಶಗಳು ಮಹೀಂದ್ರಾ ಸಂಸ್ಥೆಯ ಈ ಬೊಲೆರೊ ಕಾರನ್ನು ಮಾರುಕಟ್ಟೆಯಲ್ಲಿ ಅಗ್ರ 10 ಮಾರಾಟದ ಕಾರುಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆಯುವಂತೆ ಮಾಡಿವೆ ಎಂಬ ಪ್ರೆಶ್ನೆ ಎಲ್ಲರಲ್ಲಿಯೂ ಖಂಡಿತ ಇರುತ್ತದೆ. ಬೊಲೆರೊ ಜನಪ್ರಿಯತೆಯ ಹಿಂದಿನ ಕಾರಣ ಏನು? ಎಂಬ ಪ್ರೆಶ್ನೆಗೆ ಉತ್ತರ ಹುಡುಕುವ ಒಂದಿಷ್ಟು ಪ್ರಯತ್ನ ಇಲ್ಲಿದೆ. ಮುಂದೆ ಓದಿ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಒರಟು ಸ್ವಭಾವ :

ಬೊಲೆರೊ ವಾಹನವು ತನ್ನ ಒರಟು ಸ್ವಭಾವಕ್ಕೆ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದು, ಈ ಕಾರನ್ನು ತೊಟ್ಟಿಯಂತೆ ನಿರ್ಮಿಸಲಾಗಿದೆ ಎನ್ನಬಹುದು. ವಾಹನದ ಒರಟುತವು ಗ್ರಾಹಕರಿಗೆ, ವಿಶೇಷವಾಗಿ ವಾಹನವು ಬಹಳ ಜನಪ್ರಿಯವಾಗಿರುವ ಗ್ರಾಮೀಣ ಪ್ರದೇಶಗಳಿಗೆ ತುಂಬಾ ಉಪಯುಕ್ತವಾಗಿದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಒರಟಾದ ಬೊಲೆರೊ ಕಾರಿನ ಒಳಭಾಗದಲ್ಲಿ ಯಾವುದೇ ರೀತಿಯ ಮಿತಿ ಅಥವಾ ಗಡಿರೇಖೆಯಿಲ್ಲದೆ ಲೋಡ್ ಮಾಡಬಹುದಾಗಿದೆ. ಈ ವಿಶೇಷತೆಯು ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬಲೆರೊವನ್ನು ಹೆಚ್ಚು ಜನಪ್ರಿಯಗೊಳಿಸುತ್ತದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಕಡಿಮೆ ನಿರ್ವಹಣೆ :

ಬೊಲೆರೊ ಕಾರನ್ನು ನಿರ್ವಹಿಸಲು ಅಗ್ಗವಾಗಿದೆ ಮತ್ತು ಈ ಕಾರಿನ ಬಿಡಿಭಾಗಗಳು ಕಡಿಮೆ ಬೆಲೆಗೆ ದೊರಕುವುದರಿಂದ ಗ್ರಾಹಕರ ಸ್ನೇಹಿ ಎನ್ನಬಹುದಾಗಿದೆ. ಜಟಿಲವಲ್ಲದ ಎಂಜಿನಿಯರಿಂಗ್ ಮತ್ತು ಸುಧಾರಿತ ಎಲೆಕ್ಟ್ರಾನಿಕ್ ಸೇವೆಯು ಕಾರಿನ ಜನಪ್ರಿಯತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿರುವದಂತು ಖಂಡಿತ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ವಿಶ್ವಾಸಾರ್ಹ ವಾಹನ :

ಬೊಲೆರೊ ದೀರ್ಘಾವಧಿಯ ಪ್ರಯಾಣಕ್ಕೆ ಹೇಳಿ ಮಾಡಿಸಿದ ವಾಹನವಾಗಿದ್ದು, ಹೆಚ್ಚು ದೂರ ಪ್ರಯಾಣವನ್ನು ಸುಖಕರವಾಗಿ ಮಾಡಬಹುದಾಗಿದೆ. ಪರೀಕ್ಷಿಸಿರುವ m2DICR ಮತ್ತು Boleros ಶಕ್ತಗೊಳಿಸುವ DI ಎಂಜಿನ್ ಈ ಕಾರಿನ ಹೃದಯ ಭಾಗ ಎನ್ನಬಹುದು.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಮಹೀಂದ್ರಾ ಇಂಜಿನಿಯರುಗಳು ಬೊಲೆರೊ ಎಂಜಿನ್ ಅನ್ನು ಹೆಚ್ಚು ಬಲವಾಗಿ ಅಭಿವೃದ್ಧಿಪಡಿಸಿದ್ದು, ಇತ್ತೀಚಿನ ತಂತ್ರಜ್ಞಾನವನ್ನು ಪಡೆದು ಮತ್ತಷ್ಟು ಉನ್ನತ ಮಟ್ಟಕ್ಕೆ ಈ ಕಾರು ಹೋಗಿದೆ ಎನ್ನಬಹುದು. ಮಹೀಂದ್ರಾ ಬಲೆರೊ ಕಾರು ಎಂಎಚ್ಆಕ್ ಡಿ 70 ಎಂಜಿನ್ ಪಡೆದುಕೊಂಡಿದೆ, ಈ ಡಿಐ ಮತ್ತು ಎಂ 2 ಡಿಐಸಿಆರ್ ಎಂಜಿನ್ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

Recommended Video

[Kannada] 2017 Honda CBR650F Launched In India - DriveSpark
ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಕೈಗೆಟುಕುವ ಬೆಲೆ :

ಮಹೀಂದ್ರಾ ಬಲೆರೊ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ ಮತ್ತು ಹಣಕ್ಕೆ ಉತ್ತಮ ಮೌಲ್ಯವಾಗಿದೆ. ಬೊಲೆರೊ 4X4 ಡ್ರೈವ್‌ನೊಂದಿಗೆ ಸ್ಥಿರತೆಯನ್ನು ಕಾಯ್ದುಕೊಂಡಿರುವ ಅಗ್ಗದ ವಾಹನಗಳಲ್ಲಿ ಒಂದಾಗಿದೆ. ಬಲೆರೊ ಕಾರಿನ ಮೂಲ ಬೆಲೆ ರೂ. 6.61 ಲಕ್ಷವಿದ್ದು, ಹತ್ತಿರದ ಸ್ಪರ್ಧಿಯಾದ ಟಾಟಾ ಸುಮೊ ಗೋಲ್ಡ್ ಕಾರಿಗಿಂತ ರೂ. 40,000 ಅಗ್ಗವಾಗಿದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಸಾಮರ್ಥ್ಯ :

ಏಣಿಯ ರೀತಿಯ ಪ್ಲಾಟ್‌ಫಾರಂ ಆಧಾರದ ಮೇಲೆ ಈ ಕಾರನ್ನು ತಯಾರಿಸಲಾಗಿದ್ದು, ಯಾವುದೇ ರೀತಿಯ ಭಾರವನ್ನು ನಿರ್ವಹಿಸುವಷ್ಟು ಒರಟಾಗಿದೆ. ಅಲ್ಲದೆ, ಬೊಲೆರೊ 4X4 ಡ್ರೈವ್ ಸಿಸ್ಟಮ್ ಆಯ್ಕೆಯನ್ನು ಪಡೆಯುತ್ತದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಬೊಲೆರೊ 4X2 ಮಾದರಿಗಳು ಹಿಂಭಾಗದ ಚಕ್ರಗಳ ಚಾಲನೆಯಾಗಿದ್ದು, ಈ ಕಾರುಗಳು ಕೆಟ್ಟ ರಸ್ತೆಗಳ ಮೇಲೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ. ಬೊಲೆರೊ ಸಹ ಲೀಫ್ ಸ್ಪ್ರಿಂಗ್ಗಳನ್ನು ಹಿಂದಿನ ಆಕ್ಸಲ್ನಲ್ಲಿ ಹೊಂದಿದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಸ್ವತಃ ಒಂದು ದೊಡ್ಡ ಬ್ರ್ಯಾಂಡ್ :

ಬೊಲೆರೊ ವಾಹನವು ಗ್ರಾಮೀಣ ಪ್ರದೇಶಗಳಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಈ ಕಾರು ಬಹಳ ವರ್ಷಗಳಿಂದಲೂ ಸಹ ಭಾರತೀಯ ರಸ್ತೆಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಸ್ವತಃ ಒಂದು ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ. ಬೊಲೆರೊ ಹೆಸರು ಅನೇಕ ನಗರಗಳಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದೆ ಎನ್ನಬಹುದು.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಬಹುಮುಖ ಅಂಶಗಳು :

ಮಹೀಂದ್ರಾ ಬೊಲೆರೊ ಕಾರನ್ನು ಭಾರತದಲ್ಲಿ ವಿವಿಧ ರೀತಿಯ ವಿನ್ಯಾಸಗಳಲ್ಲಿ ಲಭ್ಯವಲಿದ್ದು, ಸಾಮಾನ್ಯ 7-ಆಸನ ಬೊಲೆರೊ ಮತ್ತು ವಾಣಿಜ್ಯ ಉಪಯೋಗಕ್ಕೆ ಬಳಸುವಂತಹ ಬೊಲೆರೊ ವಾಹನಗಳು ಹೆಚ್ಚು ಖ್ಯಾತಿ ಪಡೆದುಕೊಂಡಿವೆ. ಮಹೀಂದ್ರಾ ಮ್ಯಾಕ್ಸಿ ಟ್ರಕ್ ಎಂದು ಕರೆಯಲ್ಪಡುವ ಮಾರುಕಟ್ಟೆಯಲ್ಲಿ ಬಹುಮುಖವಾದ ಪಿಕಪ್ ಟ್ರಕ್ ಶೈಲಿಯ ಬೊಲೆರೊ ವಾಹನ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮಹೀಂದ್ರಾ ಬೊಲೆರೊ ವಾಹನ ಎಲ್ರಿಗೂ ಅಚ್ಚು ಮೆಚ್ಚು !! ಯಾಕೆ ಗೊತ್ತೆ ?

ಇಷ್ಟೆಲ್ಲಾ ಕಾರಣಗಳಿಂದ ಬೊಲೆರೊ ವಾಹನವು ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ರೀತಿಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ ಎನ್ನಬಹುದು.

More from DriveSpark

Article Published On: Saturday, October 28, 2017, 11:28 [IST]
English summary
The ageing Mahindra Bolero is still extremely popular in the market. The Bolero remained the highest selling UV for many years before new vehicles have taken over the position. However, Mahindra still manages to keep the Bolero in the top 10 selling positions in the market. What exactly the reason behind the popularity of the Bolero? Let’s find out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+