ಮಹೀಂದ್ರಾ ಎಕ್ಸ್‌ಯುವಿ500 ಹಿಂದಿಕ್ಕುತ್ತಾ ಹೊಸ ಮಾದರಿಯ ರೆನಾಲ್ಟ್ ಕಾಪ್ಟರ್?
ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿದ್ದು, ಅದಕ್ಕೂ ಮುನ್ನ ಹೊಸ ಕಾರು ಜನಪ್ರಿಯ ಮಹೀಂದ್ರಾ ಎಕ್ಸ್‌ಯುವಿ 500 ಹಿಂದಿಕ್ಕುವ ಬಗ್ಗೆ ಸುಳಿವು ನೀಡಿದೆ.
ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿದ್ದು, ಅದಕ್ಕೂ ಮುನ್ನ ಹೊಸ ಕಾರು ಜನಪ್ರಿಯ ಮಹೀಂದ್ರಾ ಎಕ್ಸ್‌ಯುವಿ 500 ಹಿಂದಿಕ್ಕುವ ಬಗ್ಗೆ ಸುಳಿವು ನೀಡಿದೆ.

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಟರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

ಈ ಬಗ್ಗೆ ಮಾತನಾಡಿರುವ ರೆನಾಲ್ಟ್ ಇಂಡಿಯಾ ಸಿಇಒ ಸುಮಿತ್ ಸಾನ್ವಿ, ಭಾರತೀಯ ಮಾರುಕಟ್ಟೆಯಲ್ಲಿ ಕಾಪ್ಟರ್ ಮಾರಾಟಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಲಾಗಿದ್ದು, ಅದು ಮಹೀಂದ್ರಾ ಎಕ್ಸ್‌ಯುವಿ500 ಸೇರಿದಂತೆ ಜೀಪ್ ಕಂಪಾಸ್ ಮಾರಾಟವನ್ನು ಹಿಂದಿಕ್ಕುವಲ್ಲಿ ಯಾವುದೇ ಅನುಮಾನವಿಲ್ಲ' ಎಂದಿದ್ದಾರೆ.

ಇದಲ್ಲದೇ ಚೆನ್ನೈನಲ್ಲಿರುವ ರೆನಾಲ್ಟ್ ಕಾರು ಉತ್ಪಾದನಾ ಘಟಕದಲ್ಲೇ ಕಾಪ್ಟರ್ ಅಂತಿಮ ರೂಪ ಪಡೆಯಲಿದ್ದು, ಉತ್ತಮ ಬೆಲೆಗಳು ಮತ್ತು ವೈಶಿಷ್ಟ್ಯತೆಗಳು ಭಾರತೀಯ ಗ್ರಾಹಕರನ್ನು ಸೆಳೆಯದೇ ಇರಲಾರವು ಎಂದಿದ್ದಾರೆ.
Recommended Video


ಎಂಜಿನ್
ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಹೀಗಾಗಿ ಪೆಟ್ರೋಲ್ ಆವೃತ್ತಿಯು 102-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಅಂತೆಯೇ ಆಯಿಲ್ ಬರ್ನರ್ ಎಂಜಿನ್ ಮಾದರಿಯು 83.8-ಬಿಎಚ್‌ಪಿ ಮತ್ತು 108-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಇನ್ನು ಹೊಸ ಕಾರಿನಲ್ಲಿ ಹಗಲಿನ ವೇಳೆ ಬೆಳಗುವ ಎಲ್ಇಡಿ ದೀಪ ಮತ್ತು ಸುತ್ತುವರಿಯಲ್ಪಟ್ಟ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ವ್ಯವಸ್ಥೆ ಇರಿಸವಾಗಿದ್ದು, ಬೆಲೆ ನಿಗದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಬರೋಬ್ಬರಿ 3 ಸಾವಿರ ಡಿಲರ್ಸ್‌ಗಳ ಮೂಲಕ ಅತಿದೊಡ್ಡ ಮಾರಾಟ ಜಾಲವನ್ನು ಹೊಂದಿರುವ ರೆನಾಲ್ಟ್ ಸಂಸ್ಥೆಯು ಹೊಸ ಮಾದರಿಯ ಕಾಪ್ಟರ್ ಮಾರಾಟದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದು, ನೇರವಾಗಿ ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಹ್ಯುಂಡೈ ಕ್ರೆಟಾ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.


Click it and Unblock the Notifications