Subscribe to DriveSpark

ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರು ಬಿಡುಗಡೆಯಾಗಲಿದೆ

Written By:

ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಲು ಸಜ್ಜಾಗಿದೆ.

ಬಲಭಾಗದಲ್ಲಿ ಡ್ರೈವ್ ಮಾಡುವಂತಹ ವಿನ್ಯಾಸ ಪಡೆದುಕೊಡನಿರುವ ಮೊಟ್ಟ ಮೊದಲ ರೆನಾಲ್ಟ್ ಕ್ಯಾಪ್ಟರ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ರೆನಾಲ್ಟ್ ಸಂಸ್ಥೆ ಮುಂದಾಗಿದ್ದು, ಈ ಕಾರು ಸದ್ಯದ ಮಟ್ಟಿಗೆ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹೈಪ್ ಉಂಟು ಮಾಡಿರುವುದಂತೂ ಸತ್ಯ.

ಕಳೆದ ವರ್ಷ ಮಾಸ್ಕೋದಲ್ಲಿ ಈ ಕಾರು ಮೊದಲು ಬಾರಿಗೆ ಅನಾವರಣಗೊಂಡಿದ್ದು, ಪ್ರಸ್ತುತ ರಷ್ಯಾ ಮತ್ತು ಕೆಲವು ದಕ್ಷಿಣ ಅಮೇರಿಕನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

ಭಾರತದಲ್ಲಿ 'ಕಾಪ್ಟರ್' ಎಂದು ಹೆಸರಿನೊಂದಿಗೆ ಬಿಡುಗಡೆಗೊಳ್ಳಲಿರುವ ಈ ಕಾರು, ರಷ್ಯಾದಲ್ಲಿ 'ಕಪ್ಪುರ್' ಎಂದು ಹೆಸರನ್ನು ಪಡೆದುಕೊಂಡು ಈ ಕ್ರಾಸ್ಒವರ್ ಮಾರಾಟವಾಗುತ್ತಿದೆ.

ಈ ಹಿಂದಿನ ವರದಿಯಂತೆ ಈ ಕಾಪ್ಟರ್ ಕಾರು ಡಸ್ಟರ್‌ನ ಎಂಓ ಪ್ಲಾಟ್‌ಫಾರಂ ಆಧಾರಿತವಾಗಿದ್ದು, ಈ ಕಾರು ಮುಂಬರುವ ನಿಸ್ಸಾನ್ ಕಿಕ್ಸ್ ಕ್ರಾಸ್ಒವರ್ ಕಾರಿನ ಅಂಶಗಳನ್ನು ಸಹ ಒಳಗೊಂಡಿರಲಿದೆ.

ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದೆ ಮತ್ತು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

4WD ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಕಾರು ಪಡೆದುಕೊಳ್ಳಲಿದೆ ಎಂಬ ಉಹಾಪೋಹವಿದ್ದು, ಕಾರು ಬಿಡುಗಡೆಗೊಂಡ ನಂತರವೇ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.

ಹಗಲು ಹೊತ್ತು ಬೆಳಗುವ ಎಲ್ಇಡಿ ದೀಪ ಮತ್ತು ಸುತ್ತುವರಿಯಲ್ಪಟ್ಟ ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಕಾಪ್ಟರ್ ಕಾರು ಬರಲಿದೆ ಮತ್ತು ಬೆಲೆ ನಿಗದಿಗೆ ಸಂಬಂಧಿಸಿದಂತೆ, ಕಾಪ್ಟರ್ ನೇರವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲಿದೆ.

English summary
Renault is gearing up on its next big launch for the Indian market with the Captur crossover that is slated to hit Indian showrooms this festive season.
Story first published: Friday, July 14, 2017, 18:15 [IST]
Please Wait while comments are loading...

Latest Photos