ರೆನಾಲ್ಟ್ ಕಾಪ್ಟರ್ ಬಿಡುಗಡೆಗೆ ದಿನಗಣನೆ- ಸೆ.22ರಿಂದ ಬುಕ್ಕಿಂಗ್ ಶುರು..!!
ರೆನಾಲ್ಟ್ ಬಹುನಿರೀಕ್ಷಿತ ಕಾಪ್ಟರ್ ಕ್ರಾಸ್‌ಓವರ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗುತ್ತಿದೆ.
ಅಕ್ಟೋಬರ್‌ನಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ರೆನಾಲ್ಟ್ ಬಹುನಿರೀಕ್ಷಿತ ಕಾಪ್ಟರ್ ಕ್ರಾಸ್‌ಓವರ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದು, ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗುತ್ತಿದೆ.

ಸೆಪ್ಟೆಂಬರ್ 22ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರೆನಾಲ್ಟ್ ಕಾಪ್ಟರ್ ಬಿಡುಗಡೆಯ ಅಧಿಕೃತ ಮಾಹಿತಿ ಹೊರಬೀಳಲಿದ್ದು,ಸೆ.22ರಿಂದಲೇ ಹೊಸ ಕಾರು ಖರೀದಿಗಾಗಿ ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಇನ್ನು ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಟರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

ಕಳೆದ ವರ್ಷ ಮಾಸ್ಕೋದಲ್ಲಿ ಈ ಕಾರು ಮೊದಲು ಬಾರಿಗೆ ಅನಾವರಣಗೊಂಡಿದ್ದು, ಪ್ರಸ್ತುತ ರಷ್ಯಾ ಮತ್ತು ಕೆಲವು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಕಾಪ್ಟರ್ ಮಾರಾಟವಾಗುತ್ತಿದೆ.

ಪ್ರಸ್ತುತ ಎಂಜಿನ್ ಮಾದರಿಯೂ ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಹೀಗಾಗಿ ಪೆಟ್ರೋಲ್ ಆವೃತ್ತಿಯು 102-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ. ಅಂತೆಯೇ ಆಯಿಲ್ ಬರ್ನರ್ ಎಂಜಿನ್ ಮಾದರಿಯು 83.8-ಬಿಎಚ್‌ಪಿ ಮತ್ತು 108-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಇನ್ನು ಹೊಸ ಕಾರಿನಲ್ಲಿ ಹಗಲಿನ ವೇಳೆ ಬೆಳಗುವ ಎಲ್ಇಡಿ ದೀಪ ಮತ್ತು ಸುತ್ತುವರಿಯಲ್ಪಟ್ಟ ಎಲ್ಇಡಿ ಹೆಡ್‌ಲ್ಯಾಂಪ್‌ಗಳ ವ್ಯವಸ್ಥೆ ಇರಿಸವಾಗಿದ್ದು, ಬೆಲೆ ನಿಗದಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಬರೋಬ್ಬರಿ 3 ಸಾವಿರ ಡಿಲರ್ಸ್‌ಗಳ ಮೂಲಕ ಅತಿದೊಡ್ಡ ಮಾರಾಟ ಜಾಲವನ್ನು ಹೊಂದಿರುವ ರೆನಾಲ್ಟ್ ಸಂಸ್ಥೆಯು ಹೊಸ ಮಾದರಿಯ ಕಾಪ್ಟರ್ ಮಾರಾಟದಲ್ಲಿ ಮತ್ತೊಂದು ದಾಖಲೆ ನಿರ್ಮಿಸಲಿದ್ದು, ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಹ್ಯುಂಡೈ ಕ್ರೆಟಾ ಮತ್ತು ಬರಲಿರುವ ನಿಸ್ಸಾನ್ ಕಿಕ್ಸ್ ಎಸ್‌ಯುವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.


Click it and Unblock the Notifications








