ಡಾಂಗ್ ಫೆಂಗ್ ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಲಿದೆ ರೆನಾಲ್ಟ್-ನಿಸ್ಸಾನ್
ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ರೆನಾಲ್ಟ್-ನಿಸ್ಸಾನ್ ಸಂಸ್ಥೆಯು ಪ್ರತಿಷ್ಠಿತ ಡಾಂಗ್ ಫೆಂಗ್ ಸಂಸ್ಥೆಯ ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಲಿದೆ.
ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ರೆನಾಲ್ಟ್-ನಿಸ್ಸಾನ್ ಸಂಸ್ಥೆಯು ಪ್ರತಿಷ್ಠಿತ ಡಾಂಗ್ ಫೆಂಗ್ ಸಂಸ್ಥೆಯ ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡಲಿದೆ.

2030ರ ವೇಳೆಗೆ ಜಗತ್ತಿನಾದ್ಯಂತ ಶೇ.90 ರಷ್ಟು ಕಾರುಗಳು ಎಲೆಕ್ಟ್ರಿಕ್ ಮಯವಾಗಲಿದ್ದು, ಈ ಹಿನ್ನೆಲೆ ಬೃಹತ್ ಯೋಜನೆ ರೂಪಿಸುತ್ತಿರುವ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೆ ವಿಶೇಷ ಹೂಡಿಕೆ ಮುಂದಾಗುತ್ತಿವೆ.

ಈ ನಿಟ್ಟಿನಲ್ಲಿ ರೆನಾಲ್ಟ್-ನಿಸ್ಸಾನ್ ಕೂಡಾ ವಿಶೇಷ ಯೋಜನೆಗೆ ಹಸಿರು ನಿಶಾನೆ ತೊರಿದ್ದು, ಮುಂಬರುವ ದಿನಗಳಲ್ಲಿ ಡಾಂಗ್ ಫೆಂಗ್ ಜೊತೆಗೂಡಿ ಸುಧಾರಿತ ತಂತ್ರಜ್ಞಾನ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಗೊಳಿಸಲಿವೆ.
Recommended Video


ಮತ್ತೊಂದು ವಿಚಾರವೆನೆಂದರೆ ಸದ್ಯದ ಮಾಹಿತಿಗಳ ಪ್ರಕಾರ ಚೀನಾ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನಹರಿಸಲು ಮುಂದಾಗಿರುವ ರೆನಾಲ್ಟ್-ನಿಸ್ಸಾನ್ ಸಂಸ್ಥೆಗಳು 2025ರ ವೇಳೆಗೆ ಪ್ರತಿ ಐದು ಕಾರುಗಳಲ್ಲಿ ಒಂದು ರೆನಾಲ್ಟ್ ಎಲೆಕ್ಟ್ರಿಕ್ ಇರಬೇಕೆಂಬ ಗುರಿಹೊಂದಿದೆ.

ಇದಕ್ಕಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡಲಾಗುತ್ತಿದ್ದು, ಜನಪ್ರಿಯ ಕಾರು ಮಾದರಿಗಳಾದ ನಿಸ್ಸಾನ್ ಲೀಫ್, ರೆನಾಲ್ಟ್ ಜೋಯಿ ಕಾರುಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಅಭಿವೃದ್ಧಿಗೊಳಿಸುವ ಸಾಧ್ಯತೆಗಳಿವೆ.

ಇದರ ಜೊತೆಗೆ ಹೊಸ ವಿನ್ಯಾಸದ ಮತ್ತಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಕೂಡಾ ನಿರ್ಮಾಣ ಮಾಡಲು ಯೋಜನೆಯಿದ್ದು, ಕ್ವಿಡ್ ಕ್ರಾಸ್ ಓವರ್ ಕಾರು ಆವೃತ್ತಿಯ ಎಲೆಕ್ಟ್ರಿಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗಾಗಿ ಅಭಿವೃದ್ಧಿಗೊಳಿಸಲು ಸಿದ್ಧತೆ ನಡೆಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪರಿಸರ ಮಾಲಿನ್ಯ ತಡೆ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ರೆನಾಲ್ಟ್-ನಿಸ್ಸಾನ್ ಸಂಸ್ಥೆಯು ವಿಶೇಷ ಒತ್ತು ನೀಡುತ್ತಿದ್ದು, ಫೋರ್ಡ್, ಟೊಯೊಟಾ ಕೂಡಾ ಇದೇ ಮಾರ್ಗದಲ್ಲಿ ವಿವಿಧ ಯೋಜನೆ ರೂಪಿಸಿರುವುದನ್ನು ಗಮನಾರ್ಹ.


Click it and Unblock the Notifications