ಕಾರು ಖರೀದಿಗೆ ಇದು ಸುವರ್ಣಾವಕಾಶ- ರೆನಾಲ್ಟ್ ಕ್ವಿಡ್ ಮೇಲೆ ವಿಶೇಷ ಆಫರ್
ಮಧ್ಯಮ ವರ್ಗಗಳನ್ನ ಸೆಳೆಯಲು ಮುಂದಾಗಿರುವ ರೆನಾಲ್ಟ್ ಸಂಸ್ಥೆಯು ತನ್ನ ಪ್ರಮುಖ ಕಾರು ಮಾದರಿಯಾದ ಕ್ವಿಡ್ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ ಮಾಡಿದೆ.
ಕಳೆದ ವರ್ಷವೇ ಬಿಡುಗಡೆಯಾಗಿ ಸದ್ಯ ಭರ್ಜರಿ ಮಾರಾಟವಾಗುತ್ತಿರುವ ರೆನಾಲ್ಟ್ ಕ್ವಿಡ್ ಖರೀದಿ ಮೇಲೆ ಇದೀಗ ಫೈನಾಸಿಲ್ ಆಫರ್ ಘೋಷಣೆ ಮಾಡಿದೆ.

ಮಧ್ಯಮ ವರ್ಗಗಳ ಕಾರು ಖರೀದಿಗೆ ಅನುಕೂಲವಾಗುವ ದೃಷ್ಠಿಯಿಂದ ವಿಶೇಷ ಆಫರ್ ಘೋಷಣೆ ಮಾಡಿರುವ ರೆನಾಲ್ಟ್ ಸಂಸ್ಥೆಯು, ಸುಲಭ ಹಣಕಾಸಿನ ನೆರವು ನೀಡಲು ಯೋಜನೆ ರೂಪಿಸಿದೆ.

ರೆನಾಲ್ಟ್ ಕ್ವಿಡ್ ಮಾದರಿಯಲ್ಲಿ ಪ್ರಮುಖವಾಗಿ 2 ನಮೂನೆಗಳಿದ್ದು, ಖರೀದಿ ಮಾಡುವ ಕಾರು ಮಾದರಿ ಮೇಲೆ ಪ್ರತ್ಯೇಕ ಆಫರ್‌ಗಳನ್ನು ನೀಡಲಾಗುತ್ತಿದೆ.

ಪ್ರಾಥಮಿಕ ಆವೃತ್ತಿಯ ಕಾರನ್ನು ಖರೀದಿ ಮಾಡುವ ಯೋಜನೆಯಿದ್ದರೆ ಅತಿ ಕಡಿಮೆ ಮುಂಗಡ ಪಾವತಿಯೊಂದಿಗೆ ಕಾರು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಇನ್ನೂ ಪ್ರಾಥಮಿಕ ಆವೃತ್ತಿಗಿಂತ ತುಸು ಹೆಚ್ಚಿನ ವೈಶಿಷ್ಟ್ಯತೆ ಹೊಂದಿರುವ ಸ್ಟ್ಯಾಂಡರ್ಡ್ ಕಾರು ಖರೀದಿ ಮಾಡುವುದಾದರೇ ಕಡಿಮೆ ಮೊತ್ತದ ಇಎಂಐ ಸೌಲಭ್ಯ ದೊರೆಯಲಿದೆ.

ಕೆಲವು ಕಾರು ಮಾದರಿಗಳ ಖರೀದಿ ಮೇಲೆ ಹೆಚ್ಚಿನ ಮುಂಗಡ ಪಾವತಿ ಮಾಡಬೇಕಾಗಿದ್ದು, ಮಧ್ಯಮ ವರ್ಗಗಳನ್ನು ಸೆಳೆಯಲು ರೆನಾಲ್ಟ್ ಕ್ವಿಡ್ ಈ ಯೋಜನೆ ರೂಪಿಸಿದೆ.

ತಿಂಗಳ ಇಎಂಐ ಅನ್ನು ರೂ.2,900 ನಿಗದಿಗೊಳಿಸಲಾಗಿದ್ದು, ಕಾರು ಖರೀದಿಗೆ ಪೂರ್ಣ ಪ್ರಮಾಣದ ಹಣಕಾಸಿನ ನೆರವು ದೊರಕಿಸಿ ಕೊಡಲಿದೆ.

ಸದ್ಯ ರೆನಾಲ್ಟ್ ಕ್ವಿಡ್ ಸ್ಯಾಂಡರ್ಡ್ ಮಾದರಿಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.2.65ಲಕ್ಷಕ್ಕೆ ಲಭ್ಯವಿದ್ದು, ರೂ.1.8ಲಕ್ಷದವರೆಗೆ ಫೈನಾನ್ಸ್ ಸೌಲಭ್ಯ ದೊರಕಿಸಲು ಯೋಜನೆ ರೂಪಿಸಿದೆ.


Click it and Unblock the Notifications