'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

Written By:

ಆಧುನಿಕತೆ ಮತ್ತು ಕೈಗಾರಿಕರಣದ ಭರಾಟೆಯಲ್ಲಿ ದಿನದಿಂದ ದಿನಕ್ಕೆ ಪರಿಸರದ ಮೇಲಿನ ಮಾನವನ ಕೃತ್ಯಗಳು ಹೆಚ್ಚುತ್ತಿದ್ದು, ಪರಿಣಾಮ ನದಿ ಮೂಲಗಳು ಭತ್ತಿ ಹೊಗುತ್ತಿವೆ. ಈ ಹಿನ್ನೆಲೆ 'ಇಶಾ ಪ್ರತಿಷ್ಠಾನ' ಸೇವಾಸಂಸ್ಥೆಯು ಸೇವ್ ರಿವರ್ ಅಭಿಯಾನ ಕೈಗೊಂಡಿದೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ನದಿಗಳ ರಕ್ಷಣೆಗಾಗಿ 'ಇಶಾ ಪ್ರತಿಷ್ಠಾನ' ಸೇವಾಸಂಸ್ಥೆಯು ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಶಿಸಿಹೋಗುತ್ತಿರುವ ನದಿ ಮೂಲಗಳ ಕುರಿತು ಜನತೆಗೆ ಅರಿವು ಮೂಡಿಸುವುದಕ್ಕಾಗಿ ಮಾಡುತ್ತಿರುವ ಅಭಿಯಾನ ಇದಾಗಿದೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸದ್ಗುರು ಜಗ್ಗಿ ವಾಸುದೇವ ಅವರು ತಮ್ಮ ಇಶಾ ಫೌಂಡೇಶನ್ ಮೂಲಕ ನದಿಗಳ ಪುನರುಜ್ಜೀವನಕ್ಕೆ ಮುಂದಾಗಿದ್ದು, ಕನ್ಯಾಕುಮಾರಿಯಿಂದ ಹಿಮಾಲಯದ ತವಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ಹೀಗಾಗಿ ಹಸಿರು ಸಿರಿಯನ್ನು ಪ್ರತಿನಿಧಿಸುವ ದೃಷ್ಠಿಯಿಂದ ಐಷಾರಾಮಿ ಕಾರು ಒಂದನ್ನು ಖರೀದಿ ಮಾಡಿರುವ ಸದ್ಗುರು ಜಗ್ಗಿ ವಾಸುದೇವ ಅವರು ರೂ.2.10 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರನ್ನು ಜಾಗೃತಿ ಅಭಿಯಾನಕ್ಕೆ ಆಯ್ದುಕೊಂಡಿದ್ದಾರೆ.

Recommended Video - Watch Now!
2018 Bentley Continental GT Revealed - DriveSpark
'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ಇನ್ನು ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರಿನೊಂದಿಗೆ ಸದ್ಗುರು ಜಗ್ಗಿ ವಾಸುದೇವ ಅವರ ಸೇವ್ ರಿವರ್ ಜಾಥಾ ಶುರುವಾಗಲಿದ್ದು, ಕಠಿಣ ಪರಿಸ್ಥಿತಿಗಳಲ್ಲೂ ಸೂಕ್ತ ಭದ್ರತೆ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಂಡಿದೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ಇನ್ನೊಂದು ವಿಶೇಷ ಅಂದ್ರೆ ಭಾರತದಲ್ಲಿ ಕೆಲವೇ ಉದ್ಯಮಿಗಳು ಮತ್ತು ಬಾಲಿವುಡ್ ನಟರು ಮಾತ್ರ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಹೊಂದಿದ್ದು, ಇದೀಗ ಜಗ್ಗಿ ವಾಸುದೇವ ಅವರು ಖರೀದಿ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

5.5-ಲೀಟರ್ ಟ್ವಿನ್ ವಿ8 ಎಂಜಿನ್ ಹೊಂದಿರುವ ಮರ್ಸಿಡಿಸ್ ಬೆಂಝ್ ಜಿ63ಎಎಂಜಿ ಕಾರು 563-ಬಿಎಚ್‌ಪಿ ಮತ್ತು 760-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ. ಜೊತೆಗೆ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, 8 ಏರ್‌ಬ್ಯಾಗ್, ಎಬಿಎಸ್, ಹಿಲ್ ಕಂಟ್ರೋಲರ್ ಸೌಲಭ್ಯ ಹೊಂದಿದೆ.

'ಸೇವ್ ರಿವರ್' ಅಭಿಯಾನಕ್ಕಾಗಿ 2.10 ಕೋಟಿ ಮೌಲ್ಯದ ಕಾರು ಖರೀದಿಸಿದ ಸದ್ಗುರು

ಹೀಗಾಗಿ ಅತ್ಯಂತ ಕಡಿಮೆ ಇಂಧನ ಕಾರ್ಯಕ್ಷಮತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಕೇವಲ 5 ಕಿ.ಮಿ ಮೈಲೇಜ್ ನೀಡಲು ಮಾತ್ರ ಶಕ್ತವಾಗಿದೆ ಎಂದರೇ ನಂಬಲೇಬೇಕು. ಆದರೂ ಉತ್ತಮ ಸೌಲಭ್ಯಗಳನ್ನು ಹೊಂದಿರುವುದು ವಿಶೇಷತೆ.

English summary
Read in Kannada Sadhguru Jaggi Vasudev chooses Mercedes Benz G63 AMG for his ‘Save Rivers’ mission.
Story first published: Thursday, August 31, 2017, 18:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark