ಅಗ್ಗದ ಬೆಲೆಗೆ ಲಭ್ಯ "ಸೇವಾ ಕ್ಯಾಬ್" - ಓಲಾ, ಉಬರ್‌ಗೆ ಸೆಡ್ಡು ಹೊಡೆದ ಚಾಲಕರು..!!

ರಾಜಧಾನಿ ದೆಹಲಿಯಲ್ಲಿ ಬಹುನೀರಿಕ್ಷಿತ ಸೇವಾ ಕ್ಯಾಬ್ ಆರಂಭಗೊಂಡಿದ್ದು, ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಚಾಲಕರು ಮತ್ತು ಮಾಲೀಕರು ನೇರವಾಗಿ ಬಿಸಿ ಮುಟ್ಟಿಸಿದ್ದಾರೆ.

By Praveen

ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ದೆಹಲಿ ಕ್ಯಾಬ್ ಚಾಲಕರು ಸೇವಾ ಆ್ಯಪ್ ಮೂಲಕ ಸೆಡ್ಡು ಹೊಡೆದಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಹೆಚ್ಚುವರಿ ಆದಾಯಕ್ಕೆ ಕತ್ತರಿ ಹಾಕಿದ್ದರ ವಿರುದ್ಧ ಸಿಡಿದೆದ್ದಿರುವ ಕ್ಯಾಬ್ ಚಾಲಕರು, ತಮ್ಮದೇ ಸ್ಪಂತ ಆ್ಯಪ್ ಅಭಿವೃದ್ದಿ ಮಾಡಿಕೊಳ್ಳುವ ಮೂಲಕ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ನೇರ ಸ್ಪರ್ಧೆ ಒಡ್ಡಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಹೊಸ ಆ್ಯಪ್‌ಗೆ "ಸೇವಾ" ಎಂದು ಹೆಸರಿಡಲಾಗಿದ್ದು, ಈ ಮೂಲಕ ತಮ್ಮ ವಿಶ್ವಾಸಿ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರತಿದೆ.

ಅಗ್ಗದ ಬೆಲೆಗೆ ಲಭ್ಯ

ಈಗಾಗಲೇ ಸಾವಿರಾರು ಕ್ಯಾಬ್ ಚಾಲಕರು ಓಲಾ ಮತ್ತು ಉಬರ್ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಗುಡ್‌ಬೈ ಹೇಳಿದ್ದು, ಸ್ವಂತ ಆ್ಯಪ್‌ನಿಂದಲೇ ಭಾರೀ ಆದಾಯಗಳಿಸುವ ನೀರಿಕ್ಷೆಯಲ್ಲಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಈ ಹಿಂದೆ ಓಲಾ ಮತ್ತು ಉಬರ್ ಸಂಸ್ಥೆಗಳಿಗೆ ಒಟ್ಟು ಮೊತ್ತದಲ್ಲಿ ಶೇ.27ರಷ್ಟು ಕಮಿಷನ್‌ ನೀಡಬೇಕಿದ್ದ ಕ್ಯಾಬ್ ಚಾಲಕರು, ಅವರು ಹಾಕುವ ಹತ್ತಾರು ನಿರ್ಬಂಧಗಳಿಗೆ ತಲೆ ಬಾಗಲೇಬೇಕಿತ್ತು.

ಅಗ್ಗದ ಬೆಲೆಗೆ ಲಭ್ಯ

ಇದೇ ಕಾರಣಕ್ಕಾಗಿಯೇ ಓಲಾ ಮತ್ತು ಉಬರ್ ಸಂಸ್ಥೆಗಳೊಂದಿಗಿನ ಒಪ್ಪಂದ ಕಡೆದುಕೊಂಡಿರುವ ಚಾಲಕರು, ಸ್ವಂತ ಆ್ಯಪ್ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಈಗಾಗಲೇ ತಮ್ಮ ವಿಶ್ವಾಸಿ ಗ್ರಾಹಕರ ಜೊತೆ ಸಂಪರ್ಕದಲ್ಲಿರುವ ಕ್ಯಾಬ್ ಚಾಲಕರು ಒಪ್ಪಂದ ಆಧಾರದ ಮೇಲೆ ಸೇವೆ ಒದಗಿಸಲು ಸಿದ್ಧರಾಗಿದ್ದಾರೆ. ಇದರಿಂದ ಓಲಾ ಮತ್ತು ಉಬರ್ ಆದಾಯಕ್ಕೆ ಭಾರೀ ಹೊಡೆತ ಬಿಳಲಿದೆ.

ಅಗ್ಗದ ಬೆಲೆಗೆ ಲಭ್ಯ

ಹೊಸದಾಗಿ ಆರಂಭವಾಗಿರುವ ಸೇವಾ ಆ್ಯಪ್ ಜಾಹೀರಾತು‌ಗಳಲ್ಲೂ ಓಲಾ ಮತ್ತು ಉಬರ್‌ಗೆ ನೇರವಾಗಿ ಸವಾಲು ಹಾಕಲಾಗಿದ್ದು, ಅಗ್ಗದ ಕ್ಯಾಬ್ ಸೇವೆಗೆ ಸೇವಾ ಆ್ಯಪ್ ಬಳುಸುವಂತೆ ಮನವಿ ಮಾಡಲಾಗಿದೆ.

ಅಗ್ಗದ ಬೆಲೆಗೆ ಲಭ್ಯ

ಇನ್ನು ಆ್ಯಪ್ ನಿರ್ವಹಣೆಗಾಗಿ ತಿಂಗಳಿಗೆ ಕೇವಲ ರೂ. 700 ಪಾವತಿಸಬೇಕಿರುವ ಕ್ಯಾಬ್ ಚಾಲಕರು, ಓಲಾ ಮತ್ತು ಉಬರ್ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಮತ್ತಷ್ಟು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಓಲಾ ಮತ್ತು ಉಬರ್ ಗ್ರಾಹಕರನ್ನು ಸಂಪರ್ಕಿಸುತ್ತಿರುವ ಕ್ಯಾಬ್ ಚಾಲಕರು ಪ್ರತಿ ಕಿಲೋ ಮೀಟರ್‌ಗೆ ಕೇವಲ 5 ರೂಪಾಯಿಗೆ ಅಗ್ಗದ ಸೇವೆ ನೀಡಲು ಮುಂದಾಗಿದ್ದಾರೆ.

ಅಗ್ಗದ ಬೆಲೆಗೆ ಲಭ್ಯ

ಹೀಗಾಗಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಗ್ರಾಹಕರು ಇದಕ್ಕೆ ಒಪ್ಪಿಗೆ ಸೂಚಿಸುತ್ತಿದ್ದು, ಹೊಸ ಆ್ಯಪ್ ಅಭಿವೃದ್ಧಿ ಕ್ಯಾಬ್ ಚಾಲಕರಿಗೆ ವರದಾನವಾಗಿದೆ.

ಅಗ್ಗದ ಬೆಲೆಗೆ ಲಭ್ಯ

ಇನ್ನು ಕ್ಯಾಬ್ ಚಾಲಕರಿಗೆ ವರದಾನವಾಗಿ ಪರಿಣಮಿಸಿರುವ "ಸೇವಾ" ಆ್ಯಪ್ ಉಬರ್ ಮತ್ತು ಓಲಾ ಸಂಸ್ಥೆಗಳಿಗೂ ತಲೆನೋವಾಗಿ ಪರಿಣಮಿಸಿದ್ದು, ಆದಾಯಕ್ಕೆ ನೇರ ಹೊಡೆತ ಬಿಳಲಿದೆ.

ಅಗ್ಗದ ಬೆಲೆಗೆ ಲಭ್ಯ

ಎಲ್ಲವೂ ಅಂದುಕೊಂಡತೆ ಆದಲ್ಲಿ ಮುಂದೊಂದು ದಿನ ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಸೇವಾ ಆ್ಯಪ್ ಬಳಕೆ ಶುರುವಾಗಲಿದ್ದು, ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

Most Read Articles

Kannada
Read more on ಕ್ಯಾಬ್ cab
English summary
Read in Kannada about sewa cab, the driver-owned cab services has started operation capital city.
Story first published: Wednesday, May 31, 2017, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X