ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿ ನೀಡಲು ಬರಲಿದೆ ಹೊಸ ಸ್ಕೋಡಾ ಕಾರು
ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಸ್ಕೋಡಾ ಸಂಸ್ಥೆಯು ಪರಿಸರ ಸ್ನೇಹಿ ಪ್ಲ್ಯಾಟ್‌ಫಾರಂ ಹೊಂದಿರುವ ಕಾರನ್ನು 2020ರ ವೇಳೆಗೆ ಪರಿಚಯಿಸಲಿದ್ದು, ಈ ಕಾರು ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲಿದೆ.
ಭಾರತದ ಪ್ರಖ್ಯಾತ ವಾಹನ ತಯಾರಕ ಸಂಸ್ಥೆಯಾದ ಸ್ಕೋಡಾ ಸಂಸ್ಥೆಯು ಪರಿಸರ ಸ್ನೇಹಿ ಪ್ಲ್ಯಾಟ್‌ಫಾರಂ ಹೊಂದಿರುವ ಕಾರನ್ನು 2020ರ ವೇಳೆಗೆ ಪರಿಚಯಿಸಲಿದ್ದು, ಈ ಕಾರು ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲಿದೆ.

ಜೆಕ್ ಮಾರುಕಟ್ಟೆಯ ತಯಾರಕ ಸ್ಕೋಡಾ ಭಾರತೀಯ ಮಾರುಕಟ್ಟೆಯ ಕಡಿಮೆ-ವೆಚ್ಚದ ಪರಿಸರ ಸ್ನೇಹಿ ಪ್ಲ್ಯಾಟ್‌ಫಾರಂ ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದು, 2020ರಲ್ಲಿ ಈ ಫ್ಲಾಟ್‌ಫಾರಂ ಆಧಾರದ ಮೇಲೆ ಹ್ಯುಂಡೈ ಕ್ರೆಟಾ ಕಾರಿನ ಎದುರಾಳಿಯನ್ನು ಪರಿಚಯಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಬಳಸಲಾಗುತ್ತಿರುವ ಎಂಕ್ಯೂಬಿ ಪ್ಲ್ಯಾಟ್‌ಫಾರಂ ದುಬಾರಿಯಾಗಿದ್ದು, ಈ ಕಾರಣಕ್ಕೆ ಫೋಕ್ಸ್‌ವ್ಯಾಗೆನ್ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ ಕೊಂಚ ಮಟ್ಟಿನ ಬದಲಾವಣೆ ಮಾಡಿ ಬಿಡುಗಡೆ ಮಾಡಲಿದೆ.

ಈ ಹೊಸ ಪ್ಲ್ಯಾಟ್‌ಫಾರಂಗೆ ಇಕೊ ಎಂದು ಹೆಸರಿಸಲಾಗಿದ್ದು, ಈ ಪ್ಲ್ಯಾಟ್‌ಫಾರಂ ಆಧಾರದ ಮೇಲೆ ನಿರ್ಮಾಣವಾಗುವ ಮೊದಲ ಕಾರು ಐದು-ಆಸನಗಳ ಮಧ್ಯಮಗಾತ್ರದ ಎಸ್‌ಯುವಿಯಾಗಿರಲಿದ್ದು, ಹ್ಯುಂಡೈ ಕ್ರೆಟಾದಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ.

ಫೋಕ್ಸ್‌ವ್ಯಾಗೆನ್ ಮತ್ತು ಸ್ಕೋಡಾ ಕಂಪನಿಗಳು ತಮ್ಮ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸುವ ಕಡೆ ಹೆಚ್ಚು ಗಮನಹರಿಸುತ್ತಿದ್ದು, ಮುಂಬರುವ ಕಾರುಗಳಲ್ಲಿ ಎರಡೂ ಕಂಪನಿಗಳು ಒಂದೇ ರೀತಿಯ ಪ್ಲ್ಯಾಟ್‌ಫಾರಂ ಹಂಚಿಕೊಳ್ಳಲಿವೆ.

ಮುಂದಿನ ಮಾದರಿಯು ಮಧ್ಯಮ ಗಾತ್ರದ ಇಕೊ ಪ್ಲ್ಯಾಟ್‌ಫಾರಂ ಆಧಾರಿತ ಸೆಡಾನ್ ಆಗಿರಲಿದ್ದು, ಈ ಕಾರು ಫೋಕ್ಸ್‌ವ್ಯಾಗೆನ್ ವೆಂಟೊ ಮತ್ತು ಸ್ಕೋಡಾ ರಾಪಿಡ್ ಕಾರಿಗೆ ಪರ್ಯಾಯವಾಗಿ ಬಿಡುಗಡೆಯಾಗಲಿದೆ ಹಾಗು 2022ರೊಳಗೆ ಸ್ಕೋಡಾ ಹ್ಯಾಚ್ ಬ್ಯಾಕ್ ವಿಭಾಗಕ್ಕೂ ಸಹ ಈ ಪರಿಸರ ಸ್ನೇಹಿ ಪ್ಲ್ಯಾಟ್‌ಫಾರಂ ಪ್ರವೇಶಿಸಲಿದೆ.

ಸದ್ಯ ಇರುವಂತಹ ಫೋಕ್ಸ್‌ವ್ಯಾಗೆನ್ 1.5 ಲೀಟರ್ ಡೀಸೆಲ್ ಎಂಜಿನ್ 2020ರ ಮುಂಚಿತವಾಗಿ ಸ್ಥಗಿತಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ವಾಹನ ತಯಾರಕರಿಗೆ ಹೊಸ ಎಸ್‌ಯುವಿ ಕಾರು ಅಗತ್ಯವಿರುವುದನ್ನು ಈ ಹೊಸ ಪ್ಲ್ಯಾಟ್‌ಫಾರಂ ಕಾರುಗಳು ಪೂರೈಸುತ್ತವೆ ಎನ್ನಬಹುದು.


Click it and Unblock the Notifications