ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

Written By:

ಜೆಕ್ ದೇಶದ ಪ್ರಖ್ಯಾತ ಕಾರು ತಯಾರಕ ಕಂಪೆನಿಯಾದ ಸ್ಕೋಡಾ ತನ್ನ ಕೊಡಿಯಾಕ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಎಟಿ ಕಾರನ್ನು ಸ್ಥಗಿತಗೊಳಿಸಿದ ನಂತರ ಭಾರತದಲ್ಲಿ ತನ್ನ ಎಸ್‌ಯುವಿ ಪ್ರಾಬಲ್ಯವನ್ನು ಕಳೆದುಕೊಡಿತ್ತು. ಸ್ಕೋಡಾ ಸಂಸ್ಥೆಯು ಹೊಚ್ಚ ಹೊಸ ಕೊಡಿಯಾಕ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಮುಂದಾಗಿದ್ದು, ಈ ಮೂಲಕ ಮತ್ತೆ ತನ್ನ ಪ್ರಾಬಲ್ಯ ಸಾಧಿಸುವ ಕಾರ್ಯಕ್ಕೆ ಕೈಹಾಕಿದೆ.

ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಸ್ಕೋಡಾ ಸಂಸ್ಥೆಯು ಈ ವರ್ಷಾಂತ್ಯಕ್ಕೆ ಭಾರತದಲ್ಲಿ ಕೊಡಿಯಾಕ್ ಎಸ್‌ಯುವಿ ಪರಿಚಯಿಸಲಿದೆ ಎನ್ನಲಾಗಿದೆ. ಈ ಎಸ್‌ಯುವಿ ಕಾರು ಪ್ರೀಮಿಯಂ ವಿಭಾಗದಲ್ಲಿ ತನ್ನ ಭದ್ರತೆ ಕಾಪಾಡಿಕೊಳ್ಳಲಿದೆ.

ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಜಾಗತಿಕವಾಗಿ, ಸ್ಕೋಡಾ ಸಂಸ್ಥೆಯ ಎಟಿ ಕಾರಿನ ಬದಲಾಗಿ ಕರೊಕಿ ಕಾರನ್ನು ಬಿಡುಗಡೆಗೊಳಿಸಲಾಗಿದ್ದು, ಕೊಡಿಯಾಕ್ ಕಾರು ಕರೊಕಿ ಕಾರಿನ ಮೇಲ್ಪಂಕ್ತಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಫೋಕ್ಸ್‌ವ್ಯಾಗನ್ ಸಮೂಹದ MQB ವೇದಿಕೆ ಆದರದ ಮೇಲೆ ಕಳೆದ ಮೇನಲ್ಲಿ ಸ್ಕೋಡಾ ಸಂಸ್ಥೆಯು ಕರೊಕಿ ಕಾರನ್ನು ಅನಾವರಣಗೊಳಿಸಿತ್ತು. ಫೋಕ್ಸ್‌ವ್ಯಾಗನ್ ಸಂಸ್ಥೆಯ ತಿಗ್ವಾನ್ ಕಾರಿನ ಬಿಡಿಭಾಗಗಳು ಈ ಕಾರು ಪಡೆದುಕೊಂಡಿದೆ.

ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಎಸ್‌ಯುವಿ ಕಾರ್ಯತಂತ್ರದ ಮೊದಲ ಭಾಗವಾಗಿ ಈ ಕೊಡಿಯಾಕ್ ಕಾರನ್ನು ಭಾರತದ ಮಾರುಕಟ್ಟೆಗೆ ಸಂಸ್ಥೆ ಬಿಡುಗಡೆಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಸಣ್ಣ ಗಾತ್ರದ ಕರೊಕಿ ಕಾರಿನ ಬಗ್ಗೆ ಯೋಜನೆ ಸಹ ಹೊಂದಲಾಗಿದೆ ಎಂದು ಸ್ಕೋಡಾ ಆಟೊ ಇಂಡಿಯಾದ ಮಾರಾಟ, ಸೇವೆ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಅಶುತೋಷ್ ದೀಕ್ಷಿತ್ ತಿಳಿಸಿದರು.

ಭಾರತದಲ್ಲಿ ಕರೊಕಿ ಕಾರಿನ ಬಿಡುಗಡೆಯ ಸುಳಿವು ನೀಡಿದ ಸ್ಕೋಡಾ

ಅಂತರರಾಷ್ಟ್ರೀಯ ಮಾದರಿಯ ಕರೊಕಿ ಕಾರು, 1 ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.6 ಲೀಟರ್ ಮತ್ತು 2 ಲೀಟರ್ ಆಯಿಲ್ ಬರ್ನರ್ ಎಂಜಿನ್ ಪಡೆದುಕೊಂಡಿದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುಯಲ್ ಅಥವಾ 7 ಸ್ಪೀಡ್ ಡಿಎಸ್‌ಜಿ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದೆ. ಉನ್ನತ ಮಾದರಿಯ ಕಾರು ಆಲ್ ವೀಲ್ ಡ್ರೈವ್ ಸಿಸ್ಟಮ್ ವ್ಯವಸ್ಥೆ ಪಡೆಯುತ್ತದೆ.

Read more on ಸ್ಕೋಡಾ skoda
English summary
Read in kannada about Czech automaker Skoda is all set to launch the Kodiaq SUV in the Indian market. Know more about this car, specification and more
Story first published: Saturday, August 12, 2017, 14:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark