ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಸ್ಕೋಡಾ ಸಂಸ್ಥೆಯು ಅಕ್ಟೋಬರ್ 4ಕ್ಕೆ ಹೊಸ ಕಾರು ಆವೃತ್ತಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿದೆ.

By Praveen

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಎಸ್‌ಯುವಿ ಕಾರು ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ತನ್ನ ಬಹುನೀರಿಕ್ಷಿತ ಕೊಡಿಯಾಕ್ ಆವೃತ್ತಿಯನ್ನು ಪರಿಚಯಿಸುತ್ತಿರುವ ಸ್ಕೋಡಾ ಸಂಸ್ಥೆಯು ಅಕ್ಟೋಬರ್ 4ಕ್ಕೆ ಹೊಸ ಕಾರು ಆವೃತ್ತಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಸ್ಕೋಡಾ ಸಂಸ್ಥೆಯು ಈಗಾಗಲೇ ಹಲವು ಬಗೆಯ ಕಾರು ಮಾದರಿಗಳ ಉತ್ಪಾದನೆಯಲ್ಲಿ ಯಶಸ್ವಿ ಕಂಡಿದ್ದು, ಇದೀಗ ಎಸ್‌ಯುವಿ ಕೊಡಿಯಾಕ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೊಡಿಯಾಕ್ ಎಸ್‌ಯುವಿಯನ್ನು ಅಭಿವೃದ್ಧಿಗೊಳಿಸಿರುವ ಸ್ಕೋಡಾ ಸಂಸ್ಥೆಯು ಕಾರಣಾಂತರಗಳಿಂದ ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಯೆಟಿ ಕಾರನ್ನು ಕೈ ಬಿಡುವ ಬಗ್ಗೆ ಸುಳಿವು ನೀಡಿದೆ.

Recommended Video

2017 Skoda Octavia RS Launched In India | In Kannada - DriveSpark ಕನ್ನಡ
ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಇನ್ನು ಹೊಸ ಕೊಡಿಯಾಕ್ ಮಾದರಿಗಳು 2.0-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದ್ದು, 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಹೊಂದಿರಲಿವೆ ಎನ್ನಲಾಗಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಫೈವ್ಎಂಜಿನ್ ಆಯ್ಕೆಯೊಂದಿಗೆ 177-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಲಿರುವ ಕರೋಕ್ ಕಂಪ್ಯಾಕ್ಟ್ ಎಸ್‌ಯುವಿ, 1,630-ಲೀಟರ್ ಬೂಟ್ ಸ್ಪೇಸ್ ಪಡೆಕೊಂಡಿರುವುದು ಮತ್ತೊಂದು ವಿಶೇಷತೆ ಎನ್ನಬಹುದು.

ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಇದಲ್ಲದೇ ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಕೂಡಾ ಹೊಂದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್, ಓರಿಯೋ ಫ್ಲೇಕ್ಸ್ ಸೀಟುಗಳು, ಹ್ಯಾಂಡ್ ಫ್ರೀ ಆಪರೇಟಿಂಗ್ ಟೈಲ್‌ಗೇಟ್ ಸೇರಿದಂತೆ ಹಲವು ಸೌಲಭ್ಯಗಳು ಕೊಡಿಯಾಕ್ ಎಸ್‌ಯುವಿನಲ್ಲಿ ಲಭ್ಯವಿರಲಿವೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾದಲಿದೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ವಿಭಾಗದಲ್ಲಿನ ಕಾರು ಮಾರಾಟ ಹೆಚ್ಚಳ ಮೇಲೆ ವಿಶೇಷ ಗಮನಹರಿಸಿರುವ ಸ್ಕೋಡಾ ಸಂಸ್ಥೆಯು 5 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಕೊಡಿಯಾಕ್ ಸೇರಿದಂತೆ ಪ್ರಮುಖ ಎಸ್‌ಯುವಿಗಳು ಮತ್ತು ಸೆಡಾನ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಹೊಸ ಕಾರಿನ ಬೆಲೆಯು ರೂ.27 ರಿಂದ 32 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Article Published On: Saturday, September 9, 2017, 15:16 [IST]
English summary
Read in Kannada about Skoda Kodiaq India Launch Date Revealed.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+