ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಬಹುನೀರಿಕ್ಷಿತ ಕೊಡಿಯಾಕ್ ಉತ್ಪಾದನೆಯನ್ನು ಆರಂಭಿಸಿರುವ ಸ್ಕೋಡಾ ಸಂಸ್ಥೆಯು ಸದ್ಯದಲ್ಲೇ ಹೊಸ ಕಾರಿನ ಬಿಡುಗಡೆ ಬಗ್ಗೆ ಸುಳಿವು ನೀಡಿದೆ.

By Praveen

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಎಸ್‌ಯುವಿ ಕಾರು ಮಾದರಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆ ತನ್ನ ಬಹುನೀರಿಕ್ಷಿತ ಕೊಡಿಯಾಕ್ ಉತ್ಪಾದನೆಯನ್ನು ಆರಂಭಿಸಿರುವ ಸ್ಕೋಡಾ ಸಂಸ್ಥೆಯು ಸದ್ಯದಲ್ಲೇ ಹೊಸ ಕಾರಿನ ಬಿಡುಗಡೆ ಬಗ್ಗೆ ಸುಳಿವು ನೀಡಿದೆ.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಜೆಕ್ ಗಣರಾಜ್ಯದ ಪ್ರತಿಷ್ಠಿತ ಕಾರು ಉತ್ಪಾದನೆ ಸಂಸ್ಥೆಯಾಗಿರುವ ಸ್ಕೋಡಾ ಸಂಸ್ಥೆಯು ಈಗಾಗಲೇ ಹಲವು ಬಗೆಯ ಕಾರು ಮಾದರಿಗಳ ಉತ್ಪಾದನೆಯಲ್ಲಿ ಯಶಸ್ವಿ ಕಂಡಿದ್ದು, ಇದೀಗ ಎಸ್‌ಯುವಿ ಕೊಡಿಯಾಕ್ ಉತ್ಪಾದನೆ ಕೈಗೊಂಡಿರುವುದು ಮತ್ತೊಂದು ವಿಶೇಷತೆ ಕಾರಣವಾಗಿದೆ.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಈ ಹಿನ್ನೆಲೆ ಆಗಸ್ಟ್ 10ಕ್ಕೆ ಹೊಸ ಕಾರಿನ ಬಿಡುಗಡೆ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಲಿರುವ ಸ್ಕೋಡಾ, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೊಡಿಯಾಕ್ ಎಸ್‌ಯುವಿಯನ್ನು ಪರಿಚಯಿಸಲಿದೆ.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಯೆಟಿ ಕಾರನ್ನು ಕಾರಣಾಂತರಗಳಿಂದ ಉತ್ಪಾದನೆಯನ್ನು ಕೈಬಿಡುತ್ತಿರುವ ಸ್ಕೋಡಾ ಸಂಸ್ಥೆಯು ಸಂಪೂರ್ಣ ಹೊಸ ಶೈಲಿಯೊಂದಿಗೆ ಕೊಡಿಯಾಕ್ ಎಸ್‌ಯುವಿ ಕಾರನ್ನು ಸಿದ್ಧಗೊಳಿಸುತ್ತಿದೆ.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಎಂಜಿನ್

2.0-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಕೊಡಿಯಾಕ್ ಲಭ್ಯವಿರಲಿದ್ದು, 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಲಭ್ಯವಿರಲಿದೆ.

Recommended Video

2018 Hyundai Verna Indian Model Unveiled | In Tamil - DriveSpark தமிழ்
ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಫೈವ್ಎಂಜಿನ್ ಆಯ್ಕೆಯೊಂದಿಗೆ 177-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಲಿರುವ ಕರೋಕ್ ಕಂಪ್ಯಾಕ್ಟ್ ಎಸ್‌ಯುವಿ, 1,630-ಲೀಟರ್ ಬೂಟ್ ಸ್ಪೇಸ್ ಪಡೆಕೊಂಡಿರುವುದು ಮತ್ತೊಂದು ವಿಶೇಷತೆ ಎನ್ನಬಹುದು.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಇದಲ್ಲದೇ ಸಂಪೂರ್ಣ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಕೂಡಾ ಹೊಂದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕಸ್ಟರ್, ಓರಿಯೋ ಫ್ಲೇಕ್ಸ್ ಸೀಟುಗಳು, ಹ್ಯಾಂಡ್ ಫ್ರೀ ಆಪರೇಟಿಂಗ್ ಟೈಲ್‌ಗೇಟ್ ಸೇರಿದಂತೆ ಹಲವು ಸೌಲಭ್ಯಗಳು ಕೊಡಿಯಾಕ್ ಎಸ್‌ಯುವಿನಲ್ಲಿ ಲಭ್ಯವಿರಲಿವೆ.

ಭಾರತಕ್ಕೂ ಲಗ್ಗೆಯಿಡಲಿವೆ ಸ್ಕೋಡಾ ಕೊಡಿಯಾಕ್ ಎಸ್‌ಯುವಿ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ವಿಭಾಗದಲ್ಲಿನ ಕಾರು ಮಾರಾಟ ಹೆಚ್ಚಳ ಮೇಲೆ ವಿಶೇಷ ಗಮನಹರಿಸಿರುವ ಸ್ಕೋಡಾ ಸಂಸ್ಥೆಯು 5 ಬಿಲಿಯನ್ ಡಾಲರ್ ಹೂಡಿಕೆಯೊಂದಿಗೆ ಕೊಡಿಯಾಕ್ ಉತ್ಪಾದನೆಯನ್ನು ಆರಂಭ ಮಾಡಿದ್ದು, ಹೊಸ ಕಾರಿನ ಬೆಲೆಯು ರೂ.25 ರಿಂದ 30 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Read in Kannada about Skoda Kodiaq India Unveil Date Revealed.
Story first published: Saturday, August 5, 2017, 20:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X