2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

Written By:

ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಕಾರು 2018ರ ಮೊದಲ ತ್ರೈಮಾಸಿಕ ಅವಧಿಗೆ ಬಿಡುಗಡೆಗೊಳ್ಳಲಿದ್ದು, ಇತರೆ ಎಸ್‌ಯುವಿಗಳಿಂತ ಹೇಗೆ ವಿಭಿನ್ನತೆಯನ್ನು ಹೊಂದಿದೆ ಎನ್ನುವುದರ ಮಹತ್ವದ ಮಾಹಿತಿ ಇಲ್ಲಿವೆ.

To Follow DriveSpark On Facebook, Click The Like Button
2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಮಧ್ಯಮ ಗಾತ್ರದ ಐಷಾರಾಮಿ ಕಾರುಗಳನ್ನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಚೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆಯು ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ ಅನ್ನು ಪರಿಚಯಿಸುತ್ತಿದ್ದು, ಕೆಲವು ವರದಿಗಳ ಪ್ರಕಾರ ಹೊಸ ಕಾರು ಅತಿ ಹೆಚ್ಚು ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಲಿದೆ ಎನ್ನಲಾಗಿದೆ.

Recommended Video
2017 Skoda Octavia RS Launched In India | In Kannada - DriveSpark ಕನ್ನಡ
2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಆದರೆ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ ಬಗ್ಗೆ ಯಾವುದೇ ತಾಂತ್ರಿಕ ವಿವರಗಳನ್ನು ನೀಡದ ಸ್ಕೋಡಾ, ಸ್ಪೋಟ್ ಯುಟಿಲಿಟಿ ವೆಹಿಕಲ್ಸ್‌ ವಿಭಾಗದಲ್ಲೇ ಉತ್ತಮ ಮಾದರಿಯಾಗಿರಲಿದೆ ಎಂಬ ಸುಳಿವು ನೀಡಿದೆ.

2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಜೊತಗೆ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ ಮಾದರಿಯನ್ನು ಮೊದಲು ಡಿಸೇಲ್ ಆವೃತ್ತಿಯಲ್ಲಿ ಬಿಡುಗಡೆ ಮಾಡಲಿರುವ ಸ್ಕೋಡಾ ಸಂಸ್ಥೆಯು ತದನಂತರವಷ್ಟೇ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಗಲಿದ್ದು, 7 ಆಸನಗಳನ್ನು ಹೊಂದಿರಲಿದೆ ಎಂದಿದೆ.

2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಹೀಗಾಗಿ ಕೊಡಿಯಾಕ್ ಮಾರುಕಟ್ಟೆಯಲ್ಲಿನ ಡೀಸೆಲ್‌‌ ಮಾದರಿಗಳಂತಯೇ ಡೀಸೆಲ್ ರೂಪಾಂತರಗಳ ಮೇಲೂ ಗಮನ ಹರಿಸುತ್ತಿದ್ದು, ಕೊಡಿಯಾಕ್ ವಿಆರ್‌ಎಸ್‌ಗಳು ನಾಲ್ಕು-ಚಕ್ರಗಳ ಚಾಲಿತ ವ್ಯವಸ್ಥೆಯನ್ನು ಅಳವಡಿಸುವ ನಿರೀಕ್ಷೆ ಇದೆ.

2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಇದಲ್ಲದೇ ಚೀನಿ ಮಾರುಕಟ್ಟೆಗಾಗಿ ಕೊಡಿಯಾಕ್ ಎಸ್ಯುವಿ ಯ ಕೂಪೆ ರೂಪಾಂತರವನ್ನು ಸ್ಕೋಡಾ ಕಂಪನಿಯು ಪ್ರಾರಂಭಿಸಲು ಯೋಜಿಸಿದ್ದು, ಈಗಾಗಲೇ ಕೂಪೆ ಎಸ್‌ಯುವಿಗಳನ್ನು ಯುರೊಪ್ ಮಾರುಕಟ್ಟೆಯಲ್ಲಿ ಅಭಿವೃದ್ಧಿಗೊಳಿಸುತ್ತಿದೆ.

2018ಕ್ಕೆ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿ

ಈ ಹಿನ್ನೆಲೆ ಭಾರತದಲ್ಲೂ ಕೊಡಿಯಾಕ್ ವಿಆರ್‌ಎಸ್ ಎಸ್‌ಯುವಿಯನ್ನು ಪರಿಚಯಿಸುತ್ತಿರುವ ಸ್ಕೋಡಾ ಸಂಸ್ಥೆಯು ಎಸ್‌ಯುವಿ ಮಾದರಿಗಳಲ್ಲೇ ಅತ್ಯುತ್ತಮ ಕಾರು ಮಾದರಿಯಾಗುವ ತವಕದಲ್ಲಿದ್ದು, ವರ್ಷದ ಅಂತ್ಯಕ್ಕೆ ತಾಂತ್ರಿಕ ಅಂಶಗಳನ್ನು ಬಿಡುಗಡೆ ಮಾಡಲಿದೆ.

Read more on ಸ್ಕೋಡಾ skoda
English summary
Read in Kannada about Skoda To Launch Kodiaq vRS SUV In 2018.
Story first published: Saturday, September 2, 2017, 18:28 [IST]
Please Wait while comments are loading...

Latest Photos