ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

Written By:

ಸ್ಕೋಡಾ ಇಂಡಿಯಾ ಸಂಸ್ಥೆಯ ಆಕ್ಟೇವಿಯಾ ಆರ್‌ಎಸ್ ಕಾರನ್ನು ಆಗಸ್ಟ್ 30 ಬಿಡುಗಡೆಗೊಳಿಸಲು ದಿನಾಂಕ ನಿಗದಿ ಪಡಿಸಿತ್ತಾದರೂ ಮುಂಬೈನಲ್ಲಿ ಭಾರಿ ಮಳೆಯ ಪರಿಣಾಮ ಈ ಬಿಡುಗಡೆಯನ್ನು ಮುಂದೂಡಿತ್ತು.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಭಾರತದಲ್ಲಿ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಬಿಡುಗಡೆಯು ಸೆಪ್ಟೆಂಬರ್ 1ಕ್ಕೆ ಮುಂದೂಡಲ್ಪಟ್ಟಿದ್ದು, ನಾಳೆ ಬಿಡುಗಡೆಗೊಳ್ಳಲಿರುವ ಈ ಶಕ್ತಿಯುತ ಮತ್ತು ವೇಗದ ಸೆಡಾನ್ ಕಾರು, ಭಾರತದಲ್ಲಿ ಮೊಟ್ಟ ಮೊದಲ ಪ್ರದರ್ಶನ ಆಧಾರಿತ ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಕ್ಟೇವಿಯಾ ವಿಆರ್‌ಎಸ್ ಎಂಬ ಹೆಸರು ಪಡೆದಿರುವ ಈ ಕಾರು ಭಾರತದಲ್ಲಿ ಆಕ್ಟೇವಿಯಾ ಆರ್‌ಎಸ್ ಎಂಬ ಹೆಸರಿನೊಂದಿಗೆ ಮಾರಾಟವಾಗಲಿದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿಗೂ ಸಾಮಾನ್ಯ ಮಾದರಿಗೆ ಹೆಚ್ಚು ಹೋಲಿಕೆ ಇದ್ದು, ಗ್ಲಾಸ್-ಬ್ಲಾಕ್ ಪಡೆದ ಕಾರಿನ ಮುಂಭಾಗದ ಗ್ರಿಲ್, ಆರ್‌ಎಸ್ ಬ್ಯಾಡ್ಜ್ ಹಾಗು ಫಾಗ್ ದೀಪಗಳನ್ನು ಪಡೆದುಕೊಳ್ಳುತ್ತದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಈ ಸೆಡಾನ್ ಕಾರು ಒಳಗೊಂಡಿರಲಿದ್ದು, ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು ಅಡಾಪ್ಟಿವ್ ಫ್ರಂಟ್ ಲೈಟಿಂಗ್ ಸಿಸ್ಟಮ್(ಎಎಫ್ಎಸ್) ಆಯ್ಕೆಯೊಂದಿಗೆ ಬರಲಿವೆ ಹಾಗು ಕಾರಿನ ಹಿಂಭಾಗದ ಲೈಟುಗಳು ಎಲ್ಇಡಿ ಸೌಲಭ್ಯ ಹೊಂದಿರಲಿದ್ದು, ನೋಂದಣಿ ಪ್ಲೇಟ್ ಕೂಡ ಬೆಳಕಿನೊಂದಿಗೆ ಝಗಮಗಿಸಲಿದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಎಸ್‌ಡಿ ಕಾರ್ಡ್ ರೀಡರ್, ಸ್ಮಾರ್ಟ್ ಲಿಂಕ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸಂಪರ್ಕ, ಯುಎಸ್‌ಬಿ, ಆಕ್ಸ್-ಇನ್, ಅಮುಂಡ್ಸೆನ್ ನ್ಯಾವಿಗೇಶನ್ ಸಿಸ್ಟಮ್ ಹಾಗು ಇತರ ವೈಶಿಷ್ಟ್ಯಗಳನ್ನು ಪಡೆದ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೋಡಬಹುದಾಗಿದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಇನ್ನು ಸುರಕ್ಷತೆಯ ವಿಚಾರದ ಬಗ್ಗೆ ಹೇಳುವುದಾದರೆ, 9-ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹೈಡ್ರಾಲಿಕ್ ಬ್ರೇಕ್ ಸಹಾಯ, ಬ್ರೇಕ್ ಪ್ಯಾಡ್ ಸೂಚಕ ಮತ್ತು ಆಂಟಿ ಸ್ಲಿಪ್ ರೆಗ್ಯುಲೇಟರ್(ಎಎಸ್ಆರ್), ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್(ಎಡಿಎಲ್) ಸೌಲಭ್ಯಗಳನ್ನು ಈ ಕಾರು ಹೊಂದಿರಲಿದೆ.

ನಾಳೆ ಬಿಡುಗಡೆಯಾಗಲಿರುವ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರಿನ ಮಾಹಿತಿ

ಆಕ್ಟೇವಿಯಾ ಆರ್‌ಎಸ್ ಕಾರು, 2.0 ಲೀಟರ್ ಟಿಎಸ್ಐ ಎಂಜಿನ್ ಪಡೆದುಕೊಳ್ಳಲಿದ್ದು, ಈ ಎಂಜಿನ್ 350 ಎನ್ಎಂ ತಿರುಗುಬಲದಲ್ಲಿ 226 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ 6-ವೇಗ ಡಿಎಸ್‌ಜಿ ಗೇರ್ ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

Read more on ಸ್ಕೋಡಾ skoda
English summary
Read in Kannada about Skoda India was to launch its most powerful and fastest sedan, the Octavia RS on August 30, 2017. Know more about this car, specification and much more
Story first published: Thursday, August 31, 2017, 15:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark