ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

Written By:

ಸ್ಕೋಡಾ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಆಕ್ಟೇವಿಯಾ ಆರ್‌ಎಸ್ ಕಾರನ್ನು ಬಿಡುಗಡೆಗೊಳಿಸಿದ್ದು, ಈ ಕಾರು ರೂ.24.62 ಲಕ್ಷ ಎಕ್ಸ್ ಶೋ ರೂಂ ಬೆಲೆ ಹೊಂದಿದೆ.

To Follow DriveSpark On Facebook, Click The Like Button
ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಬಿಡುಗಡೆಗೊಂಡಿರುವ ಈ ಕಾರು ಸಾಮಾನ್ಯ ಆಕ್ಟೇವಿಯಾ ಮಾದರಿಗೆ ಹೋಲಿಸಿದರೆ ಉನ್ನತ ಕಾರ್ಯಕ್ಷಮತೆ ಹೊಂದಿದೆ ಹಾಗು ಆರ್‌ಎಸ್ ಲಾಂಛನದೊಂದಿಗೆ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಈ ಕಾರು, ವೇಗವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

2004ರಲ್ಲಿ ಮೊದಲ ಬಾರಿಗೆ ತನ್ನ ಆಕ್ಟೇವಿಯಾ ಮಾದರಿಯಲ್ಲಿ ಆರ್‌ಎಸ್ ಲಾಂಛನವನ್ನು ಪರಿಚಯಿಸಿದ್ದ ಸ್ಕೋಡಾ, ಈಗ ಮತ್ತೆ ತನ್ನ 2017ರ ಮಾದರಿಯಲ್ಲಿ ಆರ್‌ಎಸ್ ಲಾಂಛನವನ್ನು ಪುನಃ ಪರಿಚಯಿಸಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಇತ್ತೀಚಿಗೆ ಬಿಡುಗಡೆಯಾದ ಆಕ್ಟೇವಿಯಾ ಫೇಸ್‌ಲಿಫ್ಟ್ ಕಾರನ್ನು ಆಧರಿಸಿ ಈ ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರನ್ನು ಅಭಿವೃದ್ಧಿಪಡಿಸಿದ್ದು, ಕೆಲವು ವಿನ್ಯಾಸ ಬದಲಾವಣೆಗಳನ್ನು ನೋಡಬಹುದಾಗಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

17 ಇಂಚಿನ ದೊಡ್ಡದಾದ ಮಿಶ್ರಲೋಹದ ಚಕ್ರಗಳು, ಹೊಸ ಸ್ಪೋರ್ಟ್ಸ್ ಬಾಡಿ ಕಿಟ್ ಮತ್ತು ಸ್ಟೇನ್ಲೆಸ್ ಸ್ಟೀಲ್‌ನಿಂದ ಮಾಡಿದ ಹೋಗೆ ಉಗುಳುವ ಕೊಳವೆಯನ್ನು ಈ ಸೆಡಾನ್ ಕಾರು ಒಳಗೊಂಡಿರಲಿದ್ದು.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಸ್ಪೋರ್ಟ್ಸ್ ಸ್ಟೀರಿಂಗ್ ವೀಲ್, ಗೇರ್ ನಾಬ್, ಮತ್ತು ಸ್ಪೋರ್ಟಿ ಸೀಟುಗಳ ಮೇಲೆ ಕೆಂಪು ಬಣ್ಣದ ಹೊಲಿಗೆ ಹಾಕಲಾಗಿದ್ದು, ಕಾರಿನ ಕೆಲವು ಸ್ಥಳಗಳ ಮೇಲೆ ಆರ್‌ಎಸ್ ಲಾಂಛನವನ್ನು ಕಾಣಬಹುದಾಗಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಸ್ಕೋಡಾ ಮೀಡಿಯಾ ಕಮಾಂಡ್ ಅಪ್ಲಿಕೇಶನ್ ಮೂಲಕ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಂಪರ್ಕಿಸಬಹುದಾಗಿದ್ದು, ಮೊಬೈಲ್ ಮೂಲಕ ಅಮುಂಡ್ಸೆನ್ ನ್ಯಾವಿಗೇಶನ್ ಸಿಸ್ಟಮ್ ನಿಯಂತ್ರಿಸಬಹುದಾಗಿದೆ ಹಾಗು ಈ ಕಾರು ಎಸ್‌ಡಿ ಕಾರ್ಡ್ ರೀಡರ್, ಸ್ಮಾರ್ಟ್ ಲಿಂಕ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸಂಪರ್ಕ ಮತ್ತು ಯುಎಸ್‌ಬಿ ಸೌಲಭ್ಯ ಪಡೆದುಕೊಂಡಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಆಕ್ಟೇವಿಯಾ ಆರ್‌ಎಸ್ ಕಾರು, 2.0 ಲೀಟರ್ ಟಿಎಸ್ಐ ಎಂಜಿನ್ ಪಡೆದುಕೊಳ್ಳಲಿದ್ದು, ಈ ಎಂಜಿನ್ 350 ಎನ್ಎಂ ತಿರುಗುಬಲದಲ್ಲಿ 226 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡಲಿದೆ 6-ವೇಗ ಡಿಎಸ್‌ಜಿ ಗೇರ್ ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಈ ಕಾರು ಕೇವಲ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು 250 ಕಿ.ಮೀ ಗರಿಷ್ಠ ವೇಗ ಮಿತಿ ಹೊಂದಿದೆ ಹಾಗು ಲಿಟರಿಗೆ 14.45 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಕೋಡಾ ಆಕ್ಟೇವಿಯಾ ಆರ್‌ಎಸ್ ಕಾರು ಭಾರತದಲ್ಲಿ ಬಿಡುಗಡೆ: ಬೆಲೆ ರೂ. 24.62 ಲಕ್ಷ

ಸ್ಕೋಡಾ ಇಂಡಿಯಾ ಸಂಸ್ಥೆಯು ಕಳೆದ ತಿಂಗಳ ಆರಂಭದಿಂದಲೇ ರೂ. 50,000 ಬೆಲೆಯೊಂದಿಗೆ ಪ್ರದರ್ಶನ ಆಧಾರಿತ ಆಕ್ಟೇವಿಯಾ ಆರ್‌ಎಸ್ ಕಾರಿನ ಬುಕಿಂಗ್ ಪ್ರಾರಂಭಿಸಿದೆ.

Read more on ಸ್ಕೋಡಾ skoda
English summary
Skoda Octavia RS launched in India. The new Skoda Octavia RS is priced at Rs 24,62,000 ex-showroom (pan India).
Story first published: Friday, September 1, 2017, 19:52 [IST]
Please Wait while comments are loading...

Latest Photos