ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

Written By:

ಇದೇ ತಿಂಗಳು 25ರಂದು ಭಾರತದಲ್ಲಿ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಬಿಡುಗಡೆಯಾಗುತ್ತಿದ್ದು, ಈ ಬುಕ್ಕಿಂಗ್ ಆರಂಭಿಸಿರುವ ಸ್ಕೋಡಾ ಸಂಸ್ಥೆಯು ಹೊಸ ಕಾರಿನ ತಾಂತ್ರಿಕ ವಿವರಗಳನ್ನು ಬಹಿರಂಗಗೊಳಿಸಿದೆ.

To Follow DriveSpark On Facebook, Click The Like Button
ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಪ್ರಿಮಿಯಂ ಸೆಡಾನ್ ಕಾರು ಮಾದರಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಸ್ಕೋಡಾ ಸಂಸ್ಥೆಯು ಅಗಸ್ಟ್ ಅಂತ್ಯಕ್ಕೆ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಮುಂಬೈನಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಹೊಸ ಕಾರಿನ ಕುರಿತಾದ ಮಹತ್ವದ ಮಾಹಿತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಸ್ಕೋಡಾ ನಿರ್ಮಾಣದ ಮತ್ತೊಂದು ಬಹುನೀರಿಕ್ಷಿತ ಕೊಡಿಯಾಕ್ ಎಸ್‌ಯುವಿ ಬಗ್ಗೆಯೂ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಪ್ರಸಕ್ತ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಮಾದರಿಯನ್ನು ವಿಶೇಷ ವಿನ್ಯಾಸಗಳೊಂದಿಗೆ ಬಿಡುಗಡೆ ಮಾಡುತ್ತಿದೆ.

ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಆದ್ರೆ ಬುಕ್ಕಿಂಗ್ ಮೊತ್ತದ ಬಗ್ಗೆ ಯಾವುದೇ ಮಾಹಿತಿ ನೀಡದ ಸ್ಕೋಡಾ, ರೆಡ್ ಎಕ್ಸಿಟಿಯರ್ ಮತ್ತು ಬ್ಲ್ಯಾಕ್ ಇಂಟಿರಿಯರ್‌ನೊಂದಿಗೆ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಕಾರನ್ನು ಅಭಿವೃದ್ಧಿ ಮಾಡಿದೆ.

ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಫ್ರಂಟ್ ಗ್ರಿಲ್‌ಗಳು ಕಪ್ಪು ಬಣ್ಣವನ್ನು ಪಡೆದುಕೊಂಡಿದ್ದು, ವಿಂಗ್ ಮಿರರ್, 16-ಇಂಚಿನ ಬ್ಲ್ಯಾಕ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಜೊತೆಗೆ ಮಲ್ಟಿ ಫಂಕ್ಷನ್ ಸ್ಟಿರಿಂಗ್ ವೀಲ್ಹ್ ಮತ್ತು ಅಲ್ಯುಮಿನಿಯಂ ಸ್ಪೋರ್ಟ್ಸ್ ಪೆಡಲ್ ಹೊಂದಿದೆ.

ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಎಂಜಿನ್

ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಮಾದರಿಗಳು 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಡೀಸೆಲ್ ಆವೃತ್ತಿಯು 108.5-ಬಿಎಚ್‌ಪಿ, 250ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಪೆಟ್ರೋಲ್ ಆವೃತ್ತಿಯು 103-ಬಿಎಚ್‌ಪಿ ಮತ್ತು 153 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಖರೀದಿಗೆ ಬುಕ್ಕಿಂಗ್ ಆರಂಭ

ಇದಲ್ಲದೇ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಎಲ್ಲಾ ಆವೃತ್ತಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ವೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, 2017 ಹೋಂಡಾ ಸಿಟಿ, ಮಾರುತಿ ಸಿಯಾಜ್, ಫೋಕ್ಸ್‌ವ್ಯಾಗನ್ ವೆಂಟಾ ಮತ್ತು ಹ್ಯುಂಡೈ ವೆರ್ನಾ ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

Read more on ಸ್ಕೋಡಾ skoda
English summary
Read in Kannada about Skoda Rapid Monte Carlo Edition India Launch And Booking Details Announced.
Story first published: Thursday, August 10, 2017, 17:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark