ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರು ಭಾರತದಲ್ಲಿ ಬಿಡುಗಡೆ
ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರು ರೂ. 10.75 ಲಕ್ಷ ಎಕ್ಸ್ ಷೋರೂಂ(ಇಂಡಿಯಾ) ಬೆಲೆಗಳನ್ನು ಪಡೆದುಕೊಂಡಿದೆ.
ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಈ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರು ರೂ. 10.75 ಲಕ್ಷ ಎಕ್ಸ್ ಷೋರೂಂ(ಇಂಡಿಯಾ) ಬೆಲೆಗಳನ್ನು ಪಡೆದುಕೊಂಡಿದೆ.

ಸ್ಕೋಡಾ ಸಂಸ್ಥೆಯ ಮೊಟೊ ಸ್ಪೋರ್ಟ್ಸ್ ಪರಂಪರೆಯಿಂದ ಸ್ಫೂರ್ತಿ ಪಡೆದ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರನ್ನು ಅಮೋಘವಾಗಿ ಭಾರತದಲ್ಲಿ ಅನಾವರಣಗೊಳಿಸಿದ್ದು, ಈ ಕಾರು ಹೋಂಡಾ ಕಂಪನಿಯ ಸಿಟಿ, ಹ್ಯುಂಡೈ ಸಂಸ್ಥೆಯ ವೆರ್ನಾ ಮತ್ತು ಹೊಚ್ಚ ಹೊಸ ಮಾರುತಿ ಸಿಯಾಜ್ ಎಸ್ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್ ಮಾದರಿಗಳು 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.6-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಈ ಕಾರು ಲಭ್ಯವಿದೆ.

ಈ ಕಾರಿನ ಡೀಸೆಲ್ ಆವೃತ್ತಿಯು 250ಎನ್ಎಂ ತಿರುಗುಬಲದಲ್ಲಿ 108.5-ಬಿಎಚ್‌ಪಿ ಟಾರ್ಕ್ ಉತ್ಪಾದನೆ ಮಾಡಲಿದೆ. ಇನ್ನು, ಪೆಟ್ರೋಲ್ ಆವೃತ್ತಿಯು 153ಎನ್ಎಂ ತಿರುಗುಬಲದಲ್ಲಿ 103-ಬಿಎಚ್‌ಪಿ ಟಾರ್ಕ್ ಉತ್ಪಾದನೆ ಮಾಡಲಿದೆ.

ಬಿಡುಗಡೆಗೊಂಡಿರುವ ಈ ರ‍್ಯಾಪಿಡ್ ಮೊಂಟೆ ಕಾರ್ಲೋ ಎಡಿಷನ್‌ನ ಪೆಟೋಲ್ ಆವೃತಿಯು 5-ಸ್ಪೀಡ್ ಮಾನ್ಯುಯಲ್ ಅಥವಾ 6-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಬಿಡುಗಡೆಯಾಗಿದೆ.

ಇನ್ನು ಡೀಸೆಲ್ ಆವೃತಿಯ ಕಾರಿನಲ್ಲಿ 5-ಸ್ಪೀಡ್ ಮಾನ್ಯುಯಲ್ ಅಥವಾ 7-ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಇರಿಸಲಾಗಿದೆ. ಪೆಟ್ರೋಲ್ ಆವೃತಿಯ ಕಾರು ಲೀಟರಿಗೆ 14.8 ರಿಂದ 15.41 ಕಿಲೋಮೀಟರ್ ಮೈಲೇಜ್ ನೀಡಲಿದೆ ಹಾಗು ಡೀಸೆಲ್ ಕಾರು 21.13 ರಿಂದ 21.72 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಈ ಕಾರಿನಲ್ಲಿ ಕಪ್ಪು ಬಣ್ಣದ ಫ್ರಂಟ್ ಗ್ರಿಲ್ ಮತ್ತು ಸ್ಪಾಯ್ಲ್ಯಾರ್‌ಗಳನ್ನು ನೋಡಬಹುದಾಗಿದ್ದು, 16-ಇಂಚಿನ ಡುಯಲ್ ಟೋನ್ ಬ್ಲ್ಯಾಕ್ ಅಲಾಯ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಕಾರಿನ ಒಳಭಾಗದಲ್ಲಿ,ಆಂಡ್ರಾಯ್ಡ್ ಆಟೊ, ಆಪಲ್ ಕಾರ್‌ಪ್ಲೇ ಸೌಲಭ್ಯ ಪಡೆದಿರುವ 6.5-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಮಿರರ್ ಲಿಂಕ್ ಜೊತೆಗೆ ಬ್ಲೂಟೂತ್, AUX-ಇನ್, ಯುಎಸ್‌ಬಿ ಹಾಗು ಮೈಕ್ರೊ ಎಸ್‌ಡಿ ಕಾರ್ಡ್ ಸೌಲಭ್ಯ ನೋಡಬಹುದಾಗಿದೆ.

ಇನ್ನು ಸ್ಕೋಡಾ ರ‍್ಯಾಪಿಡ್ ಮೊಂಟೆ ಕಾರ್ಲೋ ಕಾರಿನ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಈ ಕಾರು ಎರಡು ಗಾಳಿಚೀಲಗಳು, ಎಬಿಎಸ್, ಇಎಸ್‌ಸಿ ಮತ್ತು ಬೆಟ್ಟದ ಹಿಡಿತ ನಿಯಂತ್ರಕ, ಹಿಂಭಾಗದ ಪಾರ್ಕಿಂಗ್ ಸಂವೇದಕಗಳು, ಹಗಲು ಹೊತ್ತು ಬೆಳೆಗುವ ದೀಪಗಳು, ಹಿಂಭಾಗದ ಎಸಿ ದ್ವಾರಗಳು, ವೇಗ ನಿಯಂತ್ರಣ, ತಂಪುಗೊಳಿಸಬಹುದಾದ ಕೈಗವಸು ಪೆಟ್ಟಿಗೆ ಮತ್ತು ಮಳೆ ಸಂವೇದನೆಯ ವೈಪರ್‌ಗಳ ಸೌಕರ್ಯಗಳನ್ನು ಪಡೆದುಕೊಂಡಿದೆ.

| Pajero SportVariants | Pre-GST | Post-GST | Price Difference |
| 2.5-Litre AT 4X2 | Rs 27.69 Lakh | Rs 26.64 Lakh | Rs 1.04 Lakh |
| 2.5-Litre AT 4X2 Limited Edition | Rs 28.18 Lakh | Rs 27.13 Lakh | Rs 1.04 Lakh |
| 2.5-Litre MT 4X4 | Rs 28.09 Lakh | Rs 27.04 Lakh | Rs 1.04 Lakh |
| 2.5-Litre MT 4X4 Limited Edition | Rs 28.59 Lakh | Rs 27.54 Lakh | Rs 1.04 Lakh |


Click it and Unblock the Notifications