ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದುವುದು ಕಡ್ಡಾಯ..!!

Written By:

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಸಂಚಾರಿ ನಿಯಮಗಳನ್ನು ಕಠಿಣಗೊಳಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದೀಗ ಹೊಸ ಕಾರು ಖರೀದಿಸುವ ಮುನ್ನ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದನ್ನು ಕಡ್ಡಾಯ ಮಾಡುತ್ತಿದೆ.

To Follow DriveSpark On Facebook, Click The Like Button
ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

2016ರ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಬಂದ ನಂತರ ಸಂಚಾರಿ ನಿಯಮಗಳಲ್ಲಿ ಭಾರೀ ಬದಲಾವಣೆ ತರಲಾಗುತ್ತಿದ್ದು, ಸದ್ಯ ತಮಿಳುನಾಡು ಸರ್ಕಾರವು ಕೂಡಾ ಹೊಸ ಕಾರು ಖರೀದಿ ಮೇಲೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಿ ಡಿಸೆಂಬರ್ 1ರಿಂದಲೇ ಅನುಷ್ಠಾನಗೊಳಿಸಲು ಮುಂದಾಗಿದೆ.

ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಹೊಸ ನಿಯಮದ ಪ್ರಕಾರ ಯಾವ ವ್ಯಕ್ತಿಯ ಕಾರು ಖರೀದಿಸುತ್ತಾನೋ ಆ ವ್ಯಕ್ತಿ ಕಡ್ಡಾಯವಾಗಿ ನಾಲ್ಕು ಚಕ್ರ ವಾಹನದ ಚಾಲಾನಾ ಪರವಾನಿಗೆ ಹೊಂದಿರಲೇಬೇಕು ಎಂಬ ಹೊಸ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.

ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವರು ಮಾತ್ರ ಹೊಸ ಕಾರು ಖರೀದಿ ಮಾಡಬಹುದಾಗಿದ್ದು, ಕಾರು ಖರೀದಿ ತದನಂತರವಷ್ಟೇ ಚಾಲನಾ ಪರವಾನಿಗೆ ಪಡೆಯುವರಿಗೆ ತಮಿಳುನಾಡು ಸರ್ಕಾರ ಬ್ರೇಕ್ ಹಾಕಿದೆ.

ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಇದರಿಂದಾಗಿ ಮುಂಬರುವ ಉತ್ಸವ ದಿನಗಳಲ್ಲಿ ಕಾರು ಖರೀದಿ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಸುರಕ್ಷತೆ ದೃಷ್ಠಿಯಿಂದ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ ಮಾಡಿರುವುದು ಮಹತ್ವವನ್ನು ಪಡೆದುಕೊಂಡಿದೆ ಎನ್ನಬಹುದು.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಇನ್ನು ತಮಿಳುನಾಡಿನಲ್ಲಿ ಇದು ಡಿಸೆಂಬರ್ 1 ರಿಂದಲೇ ಜಾರಿಗೊಳ್ಳುತ್ತಿದ್ದು, ತದನಂತರವಷ್ಟೇ ಇದು ದೇಶಾದ್ಯಂತ ಕಡ್ಡಾಯ ನಿಯಮವಾಗಿ ಜಾರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾರು ಚಾಲಕರ ಸುರಕ್ಷಾ ದೃಷ್ಠಿಯಿಂದ ಇಂತದೊಂದು ಕಠಿಣ ನಿಯಮ ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ.

ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ತಮಿಳಿನಾಡಿನಲ್ಲಿ ಅಪಘಾತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಅಪಘಾತಗಳ ಸಂಖ್ಯೆಗಳನ್ನು ತಗ್ಗಿಸಲು ಈ ಇಂತದೊಂದು ನಿಯಮವನ್ನು ಜಾರಿಗೊಳಿಸುತ್ತಿದೆ. ಇದಲ್ಲದೇ ಕಳೆದ ತಿಂಗಳು ವಿವಿಧ ಅಪಘಾತ ಪ್ರಕರಣಗಳಲ್ಲಿ ಸಿಲುಕಿದ್ದ 9 ಸಾವಿರಕ್ಕೂ ಹೆಚ್ಚು ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್‌ಗಳನ್ನು ತಮಿಳುನಾಡು ಪೊಲೀಸ್ ಇಲಾಖೆ ತಾತ್ಕಾಲಿಕವಾಗಿ ರದ್ದುಗೊಳಿಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

English summary
Read in Kannada about Tamil Nadu Govt Decision That Makes Driving Licence Mandatory To Buy New Vehicle.
Please Wait while comments are loading...

Latest Photos