ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಭಾರತದ ಹೆಮ್ಮೆಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಕಂಪನಿಯ ತನ್ನ ಹೊಸ ಮುಖ್ಯ ಹಣಕಾಸು ಅಧಿಕಾರಿ(CFO)ಯಾಗಿ ಪಿಬಿ ಬಾಲಾಜಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

By Girish

ಭಾರತದ ಹೆಮ್ಮೆಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಕಂಪನಿಯ ತನ್ನ ಹೊಸ ಮುಖ್ಯ ಹಣಕಾಸು ಅಧಿಕಾರಿ(CFO)ಯಾಗಿ ಪಿಬಿ ಬಾಲಾಜಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಕಾರ್ಪೊರೇಟ್ ವಲಯದಲ್ಲಿ 20 ವರ್ಷಗಳಿಗೂ ಹೆಚ್ಚು ಅನುಭವವನ್ನು ಹೊಂದಿರುವ ಪಿಬಿ ಬಾಲಾಜಿ ಅವರನ್ನು ಟಾಟಾ ಮೋಟಾರ್ಸ್ ಕಂಪನಿ ಮುಖ್ಯ ಹಣಕಾಸು ಅಧಿಕಾರಿ(CFO)ಯಾಗಿ ನಿಯೋಜಿಸಿದ್ದು, ಮುಂಬರುವ ನವೆಂಬರ್ ತಿಂಗಳಿನಿಂದ ತಮ್ಮ ಅದಿಕಾರವನ್ನು ಪಿಬಿ ಬಾಲಾಜಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಹಲವಾರು ಪ್ರತಿಷ್ಠಿತ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಪಡೆದಿರುವ ಪಿಬಿ ಬಾಲಾಜಿ, ಕಳೆದ 2014ರಿಂದ ಹಿಂದೂಸ್ತಾನ್ ಯೂನಿಲಿವರ್ ಹಣಕಾಸು ಇಲಾಖೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಏಷ್ಯ, ಸ್ವಿಟ್ಜರ್ಲ್ಯಾಂಡ್, ಯುಕೆ ಮತ್ತು ಭಾರತದಲ್ಲಿರುವ ವಿವಿಧ ಕಾರ್ಪೊರೇಟ್ ಹಣಕಾಸು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಜ್ಞಾನ ಪಿಬಿ ಬಾಲಾಜಿ ಪಡೆದುಕೊಂಡಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಮಾರುಕಟ್ಟೆಯ ಪಾಲಿನ ಬೆಳವಣಿಗೆ, ಪ್ರಮುಖ ವೆಚ್ಚ ಕಡಿತ ಕ್ರಮಗಳು ಮತ್ತು ವ್ಯವಹಾರದಲ್ಲಿ ಹೆಚ್ಚು ಕ್ಷಮತೆ ತೋರುವಲ್ಲಿ ಪಿಬಿ ಬಾಲಾಜಿ ಪಾತ್ರ ಮುಖ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

"ಟಾಟಾ ಸಂಸ್ಥೆಯು ಟಾಟಾ ಮೋಟಾರ್ಸ್ ಸಮೂಹಕ್ಕೆ ಹೊಸ ಸಿಎಫ್ಒ ಆಗಿ ಶ್ರೀ ಬಾಲಾಜಿ ಅವರನ್ನು ಹೆಚ್ಚು ಸಂತೋಷದಿಂದ ಸ್ವಾಗತಿಸಲಿದ." ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಗ್ವೆಂಟರ್ ಬೂಟ್ಸಚೆಕ್ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಸಿಎಫ್ಒ ಆಗಿ ಬಾಲಾಜಿ ನೇಮಕ

ಟಾಟಾ ಮೋಟಾರ್ಸ್ ಸಂಸ್ಥೆಯು ಟಿಯಾಗೊ ಮತ್ತು ನಿಕ್ಸನ್ ಕಾರುಗಳ ಸಹಾಯದಿಂದ ನಿಧಾನವಾಗಿ ಮಾರುಕಟ್ಟೆಯಲ್ಲಿ ಚೇತರಿಕೆ ಕಾಣುತಿದ್ದು, ಹೊಸದಾಗಿ ನೇಮಕ ಸಿಎಫ್ಓ ಈ ಚೇತರಿಕೆಯನ್ನು ಮತ್ತಷ್ಟು ವೇಗಗೊಳಿಸಲು ಪ್ರಯತ್ನಿಸಲಿದ್ದಾರೆ ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿ ಬರುತ್ತಿವೆ.

Most Read Articles

Kannada
Read more on ಟಾಟಾ
English summary
Tata Motors announces the appointment of PB Balaji as the company's new Chief Financial Officer (CFO). Balaji comes with over 20 years of experience in the corporate sector.
Story first published: Wednesday, August 16, 2017, 11:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X