ಇಕೋ ಸ್ಪೋರ್ಟ್, ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

Written By:

ಪ್ರತಿಷ್ಠಿತ ಟಾಟಾ ಸಂಸ್ಥೆಯ ನೆಕ್ಸಾನ್ ಸ್ಪೋಟ್ ಎಸ್‌ಯುವಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಇತರೆ ಪ್ರಮುಖ ಮಾದರಿಗಳು ಈಗಾಗಲೇ ಮಾರುಕಟ್ಟೆಯಿವೆ. ಹೀಗಾಗಿ ಹೊಸ ಕಾರು ಇತರರೆ ಮಾದರಿಗಳಿಂತ ಹೇಗೆ ಭಿನ್ನವಾಗಿದೆ ಎನ್ನುವುದರ ಬಗ್ಗೆ ಇಲ್ಲಿ ತಿಳಿದುಕೊಳ್ಳೊಣ.

To Follow DriveSpark On Facebook, Click The Like Button
ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಸುಧಾರಿತ ತಂತ್ರಜ್ಞಾನ, ಹೊಸ ಬಗೆಯ ಎಂಜಿನ್, ಮೊದಲ ದರ್ಜೆಯ ವೈಶಿಷ್ಟ್ಯತೆ ಇವು ಸದ್ಯ ಬಿಡುಗಡೆಯಾಗಿ ಸಿದ್ಧಗೊಂಡಿರುವ ಟಾಟಾ ನೆಕ್ಸನ್ ಹೈಲೈಟ್ಸ್. ಆದ್ರೆ ನೆಕ್ಸನ್ ಮಾದರಿಯೂ ಪ್ರಸ್ತುತ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿರುವ ಫೋರ್ಡ್ ಇಕೋ ಸ್ಪೋರ್ಟ್ ಮತ್ತು ಮಾರುತಿ ಸುಜುಕಿ ವಿಟಾರಾ ಬ್ರಿಝಾ ಹಿಂದಿಕ್ಕುವಷ್ಟು ಶಕ್ತವಾಗಿದೆಯೇ ಎನ್ನುವುದೇ ಪ್ರಶ್ನೆಯಾಗಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಈ ಹಿನ್ನೆಲೆ ಡಿಸೈನ್, ಎಂಜಿನ್ ಸಾಮರ್ಥ್ಯ, ಕಾರಿನ ವಿನ್ಯಾಸಗಳು, ಬೆಲೆ ವಿಚಾರವಾಗಿ ಎರಡು ಪ್ರಮುಖ ಕಾರುಗಳಿಂತ ಟಾಟಾ ನೆಕ್ಸನ ಹೇಗೆ ಭಿನ್ನತೆಯನ್ನು ಹೊಂದಿದೆ ಎಂಬುವುದರ ವಿಶ್ಲೇಷಣೆ ಇಲ್ಲಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ವೈಶಿಷ್ಟ್ಯತೆಗಳು

ಮೊದಲಿಗೆ ಮಾರುತಿ ಸುಜುಕಿ ವಿಟಾರಾ ಬ್ರಿಝಾ ಮತ್ತು ಸ್ಪೋರ್ಟ್ ಇಕೋ ಸ್ಪೋರ್ಟ್ ಬಗೆಗೆ ಮಾತನಾಡುವುದುದಾದರೇ ನೆಕ್ಸನ್‌ಗಿಂತ ಅತ್ಯುತ್ತಮ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, 198-ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಸ್ಪೋರ್ಟ್ ಎಸ್‌ಯುವಿ ಮುಂಚೂಣಿಯಲ್ಲಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಅದೇ ರೀತಿಯಾಗಿ ಫೋರ್ಡ್ ಇಕೋ ಸ್ಪೋರ್ಟ್ ಕೂಡಾ ಸಾಕಷ್ಟು ಭಿನ್ನತೆಯನ್ನು ಹೊಂದಿದ್ದು, ಭಾರತೀಯ ರಸ್ತೆಗಳಿಗೆ ಸೂಕ್ತ ಎನ್ನಿಸುವ 200-ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ದೊಡ್ಡದಾದ ಗ್ರಿಲ್, ಹೆಚ್ಚಿನ ಬೊನೆಟ್‌ನೊಂದಿಗೆ ವಿಶೇಷ ಕಾರು ಮಾದರಿಯಾಗಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಇದಲ್ಲದೇ ಇದೇ ವರ್ಷ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಬಿಡುಗಡೆಯಾಗುತ್ತಿದ್ದು, ಹೊಸ ಹೆಡ್ ಲ್ಯಾಂಪ್ಸ್, ಪರಿಷ್ಕೃತ ಮಂಜು ದೀಪಗಳು, ಷಡ್ಭುಜಾಕೃತಿಯ ಗ್ರಿಲ್ ಮತ್ತು ಬಂಪರ್‌ಗಳನ್ನು ಒಳಗೊಂಡಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಅದೇ ರೀತಿ ಟಾಟಾ ನೆಕ್ಸನ್ ಕೂಡಾ ಮೇಲಿನ ಎರಡು ಮಾದರಿಗಿಂತ ಭಿನ್ನತೆಯನ್ನು ಹೊಂದಿದ್ದು, ಕ್ಲಾಸ್ ಲೀಡಿಂಗ್ ಸವಲತ್ತುಗಳಾದ ಇಂಪ್ಯಾಕ್ಟ್ ಡಿಸೈನ್, 200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮಾದರಿಗಳೊಂದಿಗೆ ಅಭಿವೃದ್ಧಿ ಹೊಂದಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಎಂಜಿನ್ ವಿಭಾಗ

ಇನ್ನು ಎಂಜಿನ್ ಬಗೆಗೆ ಮಾತನಾಡುವುದಾದರೇ ವಿಟಾರಾ ಬ್ರೆಝಾ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 88.7ಬಿಎಚ್‌ಪಿ ಮತ್ತು 200 ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಇನ್ನು ಫೋರ್ಡ್ ಇಕೋ ಸ್ಪೋರ್ಟ್ ಆವೃತ್ತಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 100-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಜೊತೆಗೆ 1.5-ಲೀಟರ್ ಡಿಸೇಲ್ ಎಂಜಿನ್ 98-ಬಿಎಚ್‌ಪಿ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಆದ್ರೆ ಟಾಟಾ ಉತ್ಪಾದಿತ ನೆಕ್ಸನ್ ಆವೃತ್ತಿಯು 1.2-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಮತ್ತು 1.6-ಲೀಟರ್ ಟರ್ಬೋ ಚಾರ್ಜ್ಡ್ ಡಿಸೇಲ್ ಎಂಜಿನ್‌ ಹೊಂದಿದ್ದು, ಇದರಿಂದಾಗಿ ಗರಿಷ್ಠ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಕಾಯ್ದುಕೊಳ್ಳಲಾಗಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಬೆಲೆಗಳು

ಭಾರತದಲ್ಲಿ ಅತಿಹೆಚ್ಚು ಮಾರಾಟ ಹೊಂದಿರುವ ಮಾರುತಿ ಸುಜುಕಿ ಬ್ರೇಝಾ ಆವೃತ್ತಿಗಳು ರೂ.7.24 ಲಕ್ಷದಿಂದ ರೂ. 9.91 ಲಕ್ಷದ ವರೆಗೆ ಲಭ್ಯವಿವೆ. ಅದೇ ರೀತಿಯಾಗಿ ಇಕೋ ಸ್ಪೋರ್ಟ್ ಆವೃತ್ತಿಗಳು ರೂ.7.71 ಲಕ್ಷದಿಂದ ರೂ.10.71 ಲಕ್ಷದವರೆಗೆ ಲಭ್ಯವಿವೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಆದ್ರೆ ಹೊಸ ತಂತ್ರಜ್ಞಾನಗಳನ್ನು ಹೊತ್ತು ಬರುತ್ತಿರುವ ನೆಕ್ಸನ್ ಮಾದರಿಯ ಬೆಲೆಗಳು ಅಂದಾಜು ರೂ.7 ಲಕ್ಷದಿಂದ ರೂ.11 ಲಕ್ಷಕ್ಕೆ ನಿಗದಿಯಾಗಬಹುದೆಂದು ನೀರಿಕ್ಷೆ ಮಾಡಲಾಗಿದೆ.

ಇಕೋ ಸ್ಪೋರ್ಟ್,ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಟಾಟಾ ನೆಕ್ಸನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ವಿಟಾರಾ ಬ್ರೇಝಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಜೊತೆ ನೆಕ್ಸನ್ ಹೋಲಿಕೆ ಮಾಡಿದರೆ ನೆಕ್ಸನ್ ಆವೃತ್ತಿಯು ಎಲ್ಲಾ ಹಂತದಲ್ಲೂ ಉತ್ತಮ ಮಾದರಿಯಾಗಿದ್ದು, ಅಗಸ್ಟ್‌ನಲ್ಲಿ ಗ್ರಾಹಕರ ಕೈ ಸೇರಲಿದೆ.

English summary
Read in Kannada about Tata Nexon vs Maruti Vitara Brezza vs Ford Ecosport — Comparison.
Story first published: Thursday, July 27, 2017, 17:42 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark