ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

Written By:

ಬಿಡುಗಡೆಗೂ ಮುನ್ನ ದೇಶದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಟಾಟಾ ನೆಕ್ಸನ್ ಕಾರು ಆವೃತ್ತಿಯು ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಗೆ ಸಿದ್ಧಗೊಂಡಿದ್ದು, ಈ ಬಗ್ಗೆ ಟಾಟಾ ಸಂಸ್ಥೆಯು ಅಧಿಕೃತ ಮಾಹಿತಿ ಪ್ರಕಟಿಸಿದೆ.

To Follow DriveSpark On Facebook, Click The Like Button
ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಇಂಪ್ಯಾಕ್ಟ್ ಡಿಸೈನ್ ಮಾದರಿಗಳೊಂದಿಗೆ ಅಭಿವೃದ್ಧಿ ಹೊಂದಿರುವ ಟಾಟಾ ನೆಕ್ಸನ್ ಮಾದರಿಯೂ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ವೈಶಿಷ್ಟ್ಯತೆಗಳ ಬಗೆಗೆ ಟಾಟಾ ಮಹತ್ಪದ ಮಾಹಿತಿಯನ್ನು ಬಿಡುಗಡೆಗೊಳಿಸಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಸ್ಪೋರ್ಟ್ ಎಸ್‌ಯುವಿ ಮಾದರಿಯಲ್ಲಿ ಅಭಿವೃದ್ಧಿಗೊಂಡಿರುವ ಟಾಟಾ ನೆಕ್ಸನ್, ಮಲ್ಟಿ ಡ್ರೈವ್ ಮೂಡ್‌ಗಳಲ್ಲಿ ಲಭ್ಯವಾಗಲಿದೆ. ಹೀಗಾಗಿ ಇಕೋ, ಸಿಟಿ ಮತ್ತು ಸ್ಪೋರ್ಟ್ ಮೂಡ್‌ಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಇನ್ನು ಈ ಹಿಂದೆ 2016ರ ಆಟೋ ಎಕ್ಸ್‌ ಪೋದಲ್ಲಿ ಪ್ರದರ್ಶನಗೊಂಡಿದ್ದ ಟಾಟಾ ನೆಕ್ಸನ್, ಅತ್ಯುತ್ತಮ ಕಾರ್ಯಕ್ಷಮತೆ ಎಂಜಿನ್ ಮಾದರಿಯ ಉತ್ಪಾದನೆಗಾಗಿ ಬಾಷ್, ಎವಿಎಲ್ ಮತ್ತು ಮಹೇಲ್ ಹನಿವೆಲ್ ಸಂಸ್ಥೆಗಳ ಸಹಯೋಗದಲ್ಲಿ ನೆಕ್ಸನ್ ಅಭಿವೃದ್ಧಿಪಡಿಸಲಾಗಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ನೂತನ ನೆಕ್ಸನ್ ಆವೃತ್ತಿಯು 1.2-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಚಾರ್ಜ್ಡ್ ಡಿಸೇಲ್ ಎಂಜಿನ್‌ ಹೊಂದಿದ್ದು, ಇದರಿಂದಾಗಿ ಗರಿಷ್ಠ ಇಂಧನ ಕಾರ್ಯಕ್ಷಮತೆಯನ್ನು ಕೂಡಾ ಕಾಯ್ದುಕೊಳ್ಳಲಾಗಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಅಡ್ವಾನ್ಸ್ ಹರಮಾನ್ ಇನ್ಪೋಟೈನ್‌ಮೆಂಟ್, ಎನ್ಡ್ರಾಯಿಡ್ ಆಟೋ, ಆಪಲ್ ಕಾರ್ ಪ್ಲೇ, 8-ಸ್ಪೀಕರ್ ಸಿಸ್ಟಂ, ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಜೊತೆ ವಿವಿಧ ಸೌಲಭ್ಯಗಳು ನೆಕ್ಸನ್ ಆವೃತ್ತಿಯಲ್ಲಿದ್ದು, ಇದೊಂದು ಅತ್ಯುತ್ತಮ ಸ್ಪೋರ್ಟ್ ಎಸ್‌ಯುವಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಇದರ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಕೂಡಾ ಹೊಂದಿರುವ ನೆಕ್ಸನ್ ಮಾದರಿಗಳಲ್ಲಿ ಪೆಟ್ರೋಲ್ ಆವೃತ್ತಿಯು 108-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಕೂಡಾ ಪಡೆದುಕೊಂಡಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಬಿಡುಗಡೆ ಯಾವಾಗ?

ನೆಕ್ಸನ್ ಕಾರು ಖರೀದಿಗೆ ಲಕ್ಷಾಂತರ ಗ್ರಾಹಕರು ಎದುರು ನೋಡುತ್ತಿದ್ದು, ಈ ಹಿನ್ನೆಲೆ ಉತ್ಪಾದನೆಯನ್ನು ತ್ವರಿತಗೊಳಿಸಿರುವ ಟಾಟಾ ಸಂಸ್ಥೆಯು ಮುಂಬರುವ ಹಬ್ಬದ ದಿನಗಳಲ್ಲಿ ಬಿಡುಗಡೆ ಮಾಡಲಿದೆ.

ಕ್ಲಾಸ್ ಲೀಡಿಂಗ್ ಸವಲತ್ತುಗಳೊಂದಿಗೆ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಅಭಿವೃದ್ಧಿಗೊಂಡಿರುವ ನೆಕ್ಸನ್ ಮಾದರಿಯೂ ವಿಶೇಷ ಹೊರ ವಿನ್ಯಾಸಗಳಿಂದ ಗಮನಸೆಳೆಯುತ್ತಿದ್ದು, ಸ್ಪೋರ್ಟ್ ಎಸ್‌ಯುವಿ ವಿಭಾಗದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ನಿರೀಕ್ಷೆಯಿದೆ.

Read more on ಟಾಟಾ tata
English summary
Read in Kannada about Tata Nexon Class Leading Features Revealed Ahead Of Launch In India.
Story first published: Monday, July 24, 2017, 20:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark