ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

Written By:

ಈಗಾಗಲೇ, ಟಾಟಾ ಕಂಪನಿಯ ನೆಕ್ಸಾನ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನೆಯು ಪುಣೆಯ ರಂಜನ್‌ಗಾನ್ ಸ್ಥಾವರದಲ್ಲಿ ಪ್ರಾರಂಭಿಸಿದ್ದು, ದೇಶದೆಲ್ಲೆಡೆ ಇರುವಂತಹ ವಿತರಕರಲ್ಲಿ ಕಾರಿನ ಬುಕಿಂಗ್ ಪ್ರಾರಂಭವಾಗಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಬಹುನಿರೀಕ್ಷಿತ ಟಾಟಾ ನೆಕ್ಸಾನ್ ಕಾರಿನ ಬಿಡುಗಡೆಯ ದಿನಾಂಕವನ್ನು ಟಾಟಾ ಸಂಸ್ಥೆ ಪ್ರಕಟಿಸಿದ್ದು, ಈ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಕಾರು ಭಾರತದಲ್ಲಿ ಇದೇ ತಿಂಗಳು 21ರಂದು ಬಿಡುಗಡೆಯಾಗಲಿದೆ. ಇಂಧನ ಕಾರ್ಯಕ್ಷಮತೆ ಹಾಗೂ ಕಾರಿನ ಸುರಕ್ಷಾ ವಿಧಾನಗಳ ಬಗ್ಗೆ ಹೆಚ್ಚು ಗಮನಹರಿಸಿ ಅಭಿವೃದ್ಧಿಪಡಿಸಿರುವ ಈ ಕಾರಿನ ಬಗ್ಗೆ ಜನರಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ.

Recommended Video - Watch Now!
Tata Tiago XTA AMT Launched In India | In Kannada - DriveSpark ಕನ್ನಡ
ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಟಾಟಾ ಕಂಪನಿ ತನ್ನ ಹೊಚ್ಚ ಹೊಸ ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ತಂತ್ರಜ್ಞಾನ ಆಧಾರವಾಗಿಟ್ಟುಕೊಂಡು ಈ ಕಾರನ್ನು ಅಭಿವೃದ್ಧಿಪಡಿಸಿದೆ. ಅಪೂರ್ವವಾಗಿ ವಿನ್ಯಾಸ ಮಾಡಿರುವ ಹೆಡ್‌ಲ್ಯಾಂಪ್ ಮತ್ತು ಇನ್‌ಬಿಲ್ಟ್ DRLಗಳನ್ನು ನೀವು ನೋಡಬಹುದಾಗಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ವಿಶಿಷ್ಟವಾಗಿರುವ ಮುಂಭಾಗದ ಗ್ರಿಲ್, ಹಾಗು ಹ್ಯುಮಾನಿಟಿ ಲೈನ್ ಹೊಂದಿರುವ ಬಂಪರ್, ಸಿರಾಮಿಕ್ ಫಿನಿಶಿಂಗ್ ಪಡೆದುಕೊಂಡಿರುವ ಫಾಗ್ ಲ್ಯಾಂಪ್ ಈ ಕಾರನ್ನು ಹೆಚ್ಚು ಸುಂದರಗೊಳಿಸಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಈ ಹಿಂದೆ 2016ರಲ್ಲಿ ನೆಡೆದ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ನೆಕ್ಸಾನ್ ಮಾದರಿಯನ್ನು ಪ್ರದರ್ಶಿಸಿದ್ದ ಟಾಟಾ, ಇದೀಗ ಅದೇ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಮಸ್ಕುಲಾರ್ ಲುಕ್ ಮತ್ತು ಕೋಪೆ ರೀತಿಯ ರೂಫ್ ವಿನ್ಯಾಸ ಒಳಗೊಂಡಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಇನ್ನು ಈ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಎಂಜಿನ್ ಬಗ್ಗೆ ವಿವರಿಸುವುದಾದರೆ, ಈ ಕಾರು 1.2 ಲೀಟರ್ ರೆವೊಟ್ರೋನ್ ಮತ್ತು 1.5 ಲೀಟರ್ ರೆವೊಟ್ರಾಕ್ ಎಂಬ ಎರಡು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಈ ಎರಡೂ ಕಾರುಗಳೂ ಸಹ 6 ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಮೂರು ಸಿಲಿಂಡರ್ 1.2 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟ್ರೋನ್ ಪೆಟ್ರೋಲ್ ಕಾರು, 170 ಎನ್‌ಎಂ ತಿರುಗುಬಲದಲ್ಲಿ 108.5ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಇನ್ನು, ನಾಲ್ಕು ಸಿಲಿಂಡರ್ 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟ್ರಾಕ್ ಡೀಸೆಲ್ ಕಾರು,108.5ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಬಹುನಿರೀಕ್ಷಿತ ನೆಕ್ಸಾನ್ ಕಾರಿನ ಬಿಡುಗಡೆ ದಿನಾಂಕ ನಿಗದಿಪಡಿಸಿದ ಟಾಟಾ

ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಡ್ರೈವಿಂಗ್ ಮೋಡ್‌ಗಳಲ್ಲಿ ಈ ಕಾರಿನ ಚಾಲನೆ ಮಾಡಬಹುದಾಗಿದ್ದು, ಈ ಟಾಟಾ ನೆಕ್ಸಾನ್ ಕಾರು 44 ಲೀಟರ್ ಫ್ಯುಯೆಲ್ ಟ್ಯಾಂಕ್ ಕೆಪ್ಯಾಸಿಟಿ ಹೊಂದಿದೆ.

Read more on ಟಾಟಾ tata
English summary
Tata Nexon India launch has been scheduled for September 21, 2017. The Nexon sub-compact SUV production has begun at the Ranjangaon plant in Pune while bookings have begun at all dealerships in the country.
Story first published: Wednesday, September 6, 2017, 15:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark