ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

Written By:

ಭಾರತದಲ್ಲಿ ಸರಕು ಮತ್ತು ಸೇವೆ ತೆರಿಗೆ(ಜಿಎಸ್‌ಟಿ) ಇತ್ತೀಚಿಗೆ ಅನುಷ್ಠಾನಕ್ಕೆ ಬಂದಿದ್ದು, ಇದರಿಂದಾಗಿ ಟಾಟಾ ಸಂಸ್ಥೆ ತನ್ನ ನೆಕ್ಸನ್ ಕಾರನ್ನು ಬಿಡುಗಡೆಗೊಳಿಸಲು ತುದಿಗಾಲಿನಲ್ಲಿ ನಿಂತಿದೆ ಎನ್ನಲಾಗಿದೆ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹು ನಿರೀಕ್ಷಿತ ನೆಕ್ಸನ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಬಿಡುಗಡೆಯನ್ನು ದೀಪಾವಳಿಗೆ ಬಿಡುಗಡೆ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮಾಹಿತಿಯ ಪ್ರಕಾರ ಈ ಕಾರನ್ನು ಸದ್ಯದರಲ್ಲಿಯೇ ಅನಾವರಣಗೊಳಿಸಲು ಟಾಟಾ ಮುಂದಾಗಿದೆ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ಭಾರತದಲ್ಲಿ, ಆಗಸ್ಟ್ ಅಥವಾ ಸೆಪ್ಟೆಂಬರ್ 2017ರ ಆರಂಭದಲ್ಲಿ ನೆಕ್ಸನ್ ಕಾರನ್ನು ಟಾಟಾ ಮೋಟರ್ಸ್ ಬಿಡುಗಡೆಗೊಳಿಸಲು ಮುಂದಾಗಿದೆ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ದೀಪಾವಳಿ ಹಬ್ಬ ಆರಂಭಕ್ಕೂ ಎರಡು ತಿಂಗಳ ಮುಂಚಿತವಾಗಿ ಈ ಕಾರಿನ ಬಿಡುಗಡೆಯಾಗಲಿದ್ದು, ಟಾಟಾ ಸಂಸ್ಥೆಯ ಎಸ್‌ಯುವಿ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿರುವುದಂತೂ ಖಂಡಿತ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ಹೊಸ ತೆರಿಗೆ ಪದ್ಧತಿ ಜಿಎಸ್‌ಟಿಯಿಂದಾಗಿ ವಾಹನಗಳ ಬೆಲೆ ಕಡಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಕಾರು ಕೊಳ್ಳಲು ಸಂಭಾವ್ಯ ಖರೀದಿದಾರರು ಹೆಚ್ಚು ಉತ್ಸಾಹ ಹೊಂದಿದ್ದಾರೆ ಎನ್ನುವುದನ್ನು ಸಂಸ್ಥೆ ಊಹೆ ಮಾಡಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಬಹುದು.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ನಮೆಗೆಲ್ಲರಿಗೂ ತಿಳಿದಿರುವಂತೆ, ಹೊಸ ತೆರಿಗೆ ವ್ಯವಸ್ಥೆಯ ನಿಯಮದ ಪ್ರಕಾರ ಎಸ್‌ಯುವಿ ಕಾರುಗಳ ಬೆಲೆಗಳಲ್ಲಿ ಶೇಕಡಾ 3 ರಿಂದ 14% ರಷ್ಟು ಕಡಿತಗೊಳ್ಳಲಿದೆ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ಟಾಟಾ ಟಿಯೊಗೊ, ಹೆಕ್ಸಾ ಮತ್ತು ಟಿಗೋರ್ ಕಾರುಗಳ ನಂತರ ಇಂಪ್ಯಾಕ್ಟ್ ವಿನ್ಯಾಸ ತತ್ತ್ವವನ್ನು ಆಧರಿಸಿದ ನಾಲ್ಕನೆಯ ಕಾರು ಟಾಟಾ ನೆಕ್ಸನ್ ಎಂಬ ಖ್ಯಾತಿಗೆ ಈ ಕಾರು ಪಾತ್ರವಾಗಿದೆ.

ನಿರೀಕ್ಷೆಗೂ ಮುನ್ನ ಬಿಡುಗಡೆಯಾಗಲಿದೆ ಟಾಟಾ ನೆಕ್ಸನ್ ಕಾರು

ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಬ್ರೀಝ, ಫೋರ್ಡ್ ಎಕೊಸ್ಪೋರ್ಟ್ ಮತ್ತು ಮಹೀಂದ್ರಾ ಟಿಯುವಿ300 ಕಾರುಗಳೊಂದಿಗೆ ನೆಕ್ಸನ್ ಸ್ಪರ್ಧಿಸಲಿದೆ.

Read more on ಟಾಟಾ tata
English summary
Read in Kannada about Tata will advance the launch of the Nexon in India to August or early Septemeber 2017, a good two months ahead of the anticipated launch.
Story first published: Friday, July 7, 2017, 14:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark