ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ನೆಕ್ಸನ್ ಬಿಡುಗಡೆಯಾಗಿದ್ದು, ಕಾರು ಮಾರಾಟದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

By Praveen

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಟಾಟಾ ನೆಕ್ಸನ್ ಬಿಡುಗಡೆಯಾಗಿದ್ದು, ಕಾರು ಮಾರಾಟದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಇದೀಗ ನಮ್ಮ ಬೆಂಗಳೂರಿನಲ್ಲೂ ನೆಕ್ಸನ್ ಮಾರಾಟಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಕಾರಿನ ಬೆಲೆ, ವೈಶಿಷ್ಟ್ಯಗಳ ಕುರಿತಾ ಮಾಹಿತಿ ಇಲ್ಲಿದೆ ಓದಿ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿರುವ ಟಾಟಾ ನೆಕ್ಸನ್ ಆವೃತ್ತಿಯು ಕೈಗೆಟುಕುವ ದರಗಳಲ್ಲಿ ಲಭ್ಯವಾಗಿದ್ದು, ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋ ಸ್ಪೋರ್ಟ್ ಮತ್ತು ಮಹೀಂದ್ರಾ ಟಿಯುವಿ 300 ಮಾದರಿಗಳಿಗೆ ತೀವ್ರಸ್ಪರ್ಧೆ ಒಡ್ಡುವ ತವಕದಲ್ಲಿದೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಇನ್ನು ತಾಂತ್ರಿಕ ವೈಶಿಷ್ಟ್ಯತೆಗಳು, ಬೆಲೆಗಳು ಮತ್ತು ವಿನ್ಯಾಸಗಳ ವಿಚಾರದಲ್ಲಿ ಉಳಿದ ಕಾರು ಮಾದರಿಗಳಿಂತ ವಿಟಾರಾ ಬ್ರಿಝಾ ಜೊತೆ ಹೆಚ್ಚು ಪೈಪೋಟಿ ನೀಡುವ ಲಕ್ಷಣಗಳನ್ನು ಹೊಂದಿರುವ ಟಾಟಾ ನೆಕ್ಸನ್, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಖರೀದಿ ಲಭ್ಯವಾಗಿದೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಬೆಲೆಗಳು (ಬೆಂಗಳೂರು ಎಕ್ಸ್‌ ಶೋರಂ)

ಪೆಟ್ರೋಲ್ ಆವೃತ್ತಿಯ ಆರಂಭಿಕ ಕಾರಿನ ಬೆಲೆಯು ರೂ. 5.94 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯ ಬೆಲೆಯು ರೂ.8.59 ಲಕ್ಷಕ್ಕೆ ಲಭ್ಯವಿದ್ದರೇ ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆಯು ರೂ. 6.85 ಲಕ್ಷಕ್ಕೆ ಮತ್ತು ಉನ್ನತ ಆವೃತ್ತಿಯನ್ನು ರೂ.9.54 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಎಂಜಿನ್

ಹೊಸದಾಗಿ ಬಿಡುಗಡೆಯಾದ ಟಾಟಾ ನೆಕ್ಸನ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಅನಾವರಣವಾಗಿವೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಮೈಲೇಜ್

ನೆಕ್ಸನ್ ಕಾರು ಮಾದರಿಗಳಲ್ಲಿ ಡಿಸೇಲ್ ಆವೃತ್ತಿಯು ಪ್ರತಿ ಲೀಟರ್‌ಗೆ 21 ಕಿಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಆವೃತ್ತಿಯು ಪ್ರತಿ ಲೀಟರ್ 17ಕಿಮಿ ಮೈಲೇಜ್ ಒದಗಿಸುತ್ತವೆ.

Recommended Video

Tata Nexon Price And Features Variant-wise - DriveSpark
ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ವಿನ್ಯಾಸಗಳು

ಟಾಟಾ ನೆಕ್ಸನ್ ಮಾದರಿಯ ಡೀಸೆಲ್ ಮತ್ತು ಪೆಟ್ರೋಲ್ ಎರಡೂ ರೂಪಾಂತರಗಳಲ್ಲೂ ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಮಲ್ಟಿ-ಡ್ರೈವ್ ಮೂಡ್‌ ಸೌಲಭ್ಯಗಳನ್ನು ಇರಿಸಲಾಗಿದ್ದು, ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಇದಲ್ಲದೇ ನೆಕ್ಸನ್ ಮಾದರಿಯ ಮತ್ತಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.ಈ ಕಾರಿನಲ್ಲಿ ಹೆಚ್ಚು ಸುರಕ್ಷತೆ ಆಯ್ಕೆಗಳನ್ನು ನೀಡಲಾಗಿದ್ದು, ಡ್ಯುಯಲ್-ಫ್ರಂಟ್ ಏರ್ ಬ್ಯಾಗ್ ಮತ್ತು ಆಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ವ್ಯವಸ್ಥೆಯನ್ನು ಹೊಂದಿದೆ.

ಟಾಟಾ ನೆಕ್ಸನ್ ಮಾರಾಟಕ್ಕೆ ನಮ್ಮ ಬೆಂಗಳೂರಿನಲ್ಲೂ ಅದ್ಧೂರಿ ಚಾಲನೆ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಧ್ಯಮ ವರ್ಗದ ಗ್ರಾಹಕರಿಗೆ ಟಾಟಾ ನೆಕ್ಸನ್ ಎಸ್‌ಯುವಿ ಒಂದು ಉತ್ತಮ ಆಯ್ಕೆಯಾಗಿದ್ದು, ಕೈಗೆಟುಕುವ ದರ ಲಭ್ಯವಾಗಿರುವುದು ಕಾರು ಖರೀದಿಗೆ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಎನ್ನಬಹುದು.

Article Published On: Saturday, September 23, 2017, 18:07 [IST]
English summary
Read in Kannada about Tata Nexon Launched In Bangalore At A Starting Price Of Rs 5.94 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+