ಬಹುನಿರೀಕ್ಷಿತ ಟಾಟಾ ನೆಕ್ಸನ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ 5.85 ಲಕ್ಷ
ಟಾಟಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಮೊಟ್ಟ ಮೊದಲ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ 'ಟಾಟಾ ನೆಕ್ಸನ್ ಕಾರು ಭಾರತದಲ್ಲಿ ಅಮೋಘವಾಗಿ ಅನಾವರಣಗೊಂಡಿದೆ.
ಟಾಟಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಮೊಟ್ಟ ಮೊದಲ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ 'ಟಾಟಾ ನೆಕ್ಸನ್ ಕಾರು ಭಾರತದಲ್ಲಿ ಅಮೋಘವಾಗಿ ಅನಾವರಣಗೊಂಡಿದೆ.

ಟಾಟಾ ನೆಕ್ಸನ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಚ್ಚ ಹೊಸ ಟಾಟಾ ನೆಕ್ಸನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರಿನ ಪೆಟ್ರೋಲ್ ಆವೃತಿಯು ರೂ. 5.85 ಲಕ್ಷ ಮತ್ತು ಡೀಸೆಲ್ ಮಾದರಿಯು ರೂ. 6.85 ಲಕ್ಷ (ಬೇಸ್ ರೂಪಾಂತರ) ಎಕ್ಸ್ ಶೋರೂಂ(ದೆಹಲಿ) ಬೆಲೆ ಪಡೆದುಕೊಂಡಿದೆ.

ಸಬ್ ಕಂಪಾಂಕ್ಟ್ ಟಾಟಾ ನೆಕ್ಸನ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳು XE, XM, XT ಮತ್ತು XZ+ ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಮಾದರಿಯನ್ನು ಆಯ್ದುಕೊಳ್ಳಬಹುದಾಗಿದೆ.
Recommended Video


ಹೊಸದಾಗಿ ಬಿಡುಗಡೆಯಾದ ಟಾಟಾ ನೆಕ್ಸನ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಅನಾವರಣವಾಗಿವೆ.

ಎರಡೂ ರೂಪಾಂತರಗಳು ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಮಲ್ಟಿ-ಡ್ರೈವ್ ಮೋಡ್‌ಗಳೊಂದಿಗೆ ಬರುತ್ತಿದ್ದು, ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ತಂತ್ರಜ್ಞಾನ ಪಡೆದುಕೊಂಡಿದೆ.

2017 ಟಾಟಾ ನೆಕ್ಸನ್ ಬೆಲೆಗಳ ಪಟ್ಟಿ
| Variant | Ex-Showroom Price (Delhi) |
| XE | Rs 5.85 lakh |
| XE Diesel | Rs 6.85 lakh |
| XM | Rs 6.49 lakh |
| XM Diesel | Rs 7.39 lakh |
| XT | Rs 7.29 lakh |
| XT Diesel | Rs 8.14 lakh |
| XZ+ | Rs 8.44 lakh |
| XZ+ Diesel | Rs 9.29 lakh |
| XZ+ (Dual-Tone) | Rs 8.59 lakh |
| XZ+ (Dual-Tone) Diesel | Rs 9.44 lakh |

ಇನ್ನು ಈ ಕಾರಿನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.ಈ ಕಾರಿನಲ್ಲಿ ಹೆಚ್ಚು ಸುರಕ್ಷತೆ ಆಯ್ಕೆಗಳನ್ನು ನೀಡಲಾಗಿದ್ದು, ಡುಯಲ್-ಫ್ರಂಟ್ ಏರ್ ಬ್ಯಾಗ್ಸ್ ಮತ್ತು ಆಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ಆಯ್ಕೆಯಾಗಿದೆ.

Tata Nexon Petrol Specifications
| Displacement | 1.2-litres |
| Power | 108.5bhp |
| Torque | 170Nm |
Tata Nexon Diesel Specifications
| Displacement | 1.5-litres |
| Power | 108.5bhp |
| Torque | 260Nm |

Tata Nexon Dimensions
| Length | 3,994mm |
| Width | 1,811mm |
| Height | 1,607mm |
| Wheelbase | 2,498mm |
| Ground Clearance | 209mm |
| Boot Space | 350-litres |

ಟಾಟಾ ನೆಕ್ಸನ್ ಮೊರಾಕನ್ ಬ್ಲೂ, ವರ್ಮೊಂಟ್ ರೆಡ್, ಸಿಯಾಟಲ್ ಸಿಲ್ವರ್, ಗ್ಲ್ಯಾಸ್‌ಗೊ ಗ್ರೇ ಮತ್ತು ಕ್ಯಾಲ್‌ಗರಿ ವೈಟ್ ಎಂಬ ಐದು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








