ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಟಾಟಾ ಮೋಟಾರ್ಸ್ ಸಂಸ್ಥೆಯು ವಿನೂತನ ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು(ಎಸ್‌ಯುವಿ) ಪರಿಚಯಿಸುತ್ತಿದ್ದು, ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ಕಾರಿನ ವಿಶೇಷ ಸೌಲಭ್ಯಗಳ ಕುರಿತಾದ ಮಹತ್ವದ ವರದಿ ಇಲ್ಲಿದೆ.

By Praveen

ಭಾರತದ ಅತಿ ದೊಡ್ಡ ವಾಹನ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸಂಸ್ಥೆಯು ವಿನೂತನ ನೆಕ್ಸನ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು(ಎಸ್‌ಯುವಿ) ಪರಿಚಯಿಸುತ್ತಿದ್ದು, ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಹೊಸ ಕಾರಿನ ವಿಶೇಷ ಸೌಲಭ್ಯಗಳ ಕುರಿತಾದ ಮಹತ್ವದ ವರದಿ ಇಲ್ಲಿದೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೆಕ್ಸನ್ ಎಸ್‌ಯುವಿ ಕಾರು ಮಾದರಿಯು ಟಾಟಾ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ್ದು, ನೆಕ್ಸನ್ ಖರೀದಿಗಾಗಿ ಭಾರತೀಯ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಗ್ರಾಹಕರನ್ನು ಸೆಳೆಯಲು ಟಾಟಾ ಹತ್ತು ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಹೊಸ ಕಾರು ಮಾರಾಟದಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ತವಕದಲ್ಲಿದ್ದು, ಅತ್ಯುತ್ತಮ ಬೆಲೆಗಳಲ್ಲಿ ಹೊಸ ಕಾರು ಲಭ್ಯವಾಗುವ ಸಾಧ್ಯತೆಗಳಿವೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಇನ್ನು ನೆಕ್ಸನ್ ಕಾರು ಕೂಡಾ ಭಾರತೀಯ ಗ್ರಾಹಕನ್ನು ಸೆಳೆಯುವ ಎಲ್ಲ ಲಕ್ಷಣ ಹೊತ್ತು ಮಾರುಕಟ್ಟೆಗೆ ಪ್ರವೇಶಪಡೆಯುತ್ತಿದ್ದು, ಐದು ಪ್ರಮುಖ ವೈಶಿಷ್ಟ್ಯತೆಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಮಲ್ಟಿ ಡ್ರೈವ್ ಮೋಡ್

ಚಾಲಕನ ಅಗತ್ಯಗಳಿಗಾನುಸಾರವಾಗಿ ಇಕೊ, ಸಿಟಿ ಮತ್ತು ಸ್ಪೋರ್ಟ್‌ಗಳೆಂಬ ಬಹು ಚಾಲನಾ ವಿಧಗಳನ್ನು ಟಾಟಾ ನೆಕ್ಸನ್‌ನಲ್ಲಿ ಒದಗಿಸಲಾಗಿದೆ. ಸ್ಪೋರ್ಟ್ ಮೋಡ್‌ನಲ್ಲಿ ಗರಿಷ್ಠ ಶಕ್ತಿಯನ್ನು ನೀಡಲಿದ್ದು, ಸಿಟಿ ಡ್ರೈವ್ ನಗರ ಚಾಲನೆಗೆ ಯೋಗ್ಯವೆನಿಸಲಿದೆ. ಅಂತಯೇ ಇಕೊ ಮೋಡ್‌ನಲ್ಲಿ ಇಂಧನ ಉಳಿತಾಯಕ್ಕೆ ಆದ್ಯತೆ ಕೊಡಲಾಗಿದೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್

ಹೊಂದಾಣಿಸಬಹುದಾದ 6.5 ಇಂಚುಗಳ ಹೆಚ್‌ಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ, ಮಾಹಿತಿ ಮನರಂಜನಾ ಪರದೆಯ ಬಳಕೆಯನ್ನು ಹೆಚ್ಚು ಸುಲಲಿತವಾಗಿಸುವುದಲ್ಲದೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದರಲ್ಲಿ

ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಎಂಜಿನ್

ನೂತನ ಟಾಟಾ ನೆಕ್ಸನ್ ಎರಡು ಹೊಸ ಎಂಜಿನ್‌ಗಳಿಂದ ನಿಯಂತ್ರಿಸಲ್ಪಡಲಿದೆ. 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ರೆವೊಟ್ರಾನ್ ಮತ್ತು 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ ಹೊಸತಾದ ಆರು ಸ್ಪೀಡ್ ಗೇರ್ ಬಾಕ್ಸ್ ಪರಿಚಯಿಸಲಾಗಿದೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ

ಟಿಯಾಗೊ ಹಾಗೂ ಟಿಗೋರ್ ಮಾದರಿಯಲ್ಲಿರುವಂತೆಯೇ ನೆಕ್ಸನ್ ಕಾರಿನಲ್ಲಿ ಅತಿ ನೂತನ ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ ಆಳವಡಿಸಲಾಗಿದೆ. ಹಾಗೆಯೇ 8 ಸ್ಪೀಡ್ ಸಿಸ್ಟಂ ಆಂಡ್ರಾಯ್ಡ್ ಆಟೋ ಮತ್ತು ಶೀಘ್ರದಲ್ಲೇ ಆಪಲ್ ಕಾರ್ ಪ್ಲೇ ಲಭ್ಯವಾಗಲಿದೆ.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಬೃಹತ್ತಾದ ಸೆಂಟ್ರಲ್ ಕನ್ಸಾಲ್

ಐಷಾರಾಮಿ ಹೈ ಎಂಡ್ ಕಾರಿನಲ್ಲಿರುವಂತೆಯೇ ಬೃಹತ್ತಾದ ಸೆಂಟ್ರಲ್ ಕನ್ಸಾಲ್ ವ್ಯವಸ್ಥೆಯನ್ನು ನೀಡಲಾಗಿದ್ದು, ಇದರಿಂದ ಟಾಟಾ ನೆಕ್ಸನ್‌ಗೆ ಹೆಚ್ಚಿನ ಕ್ರೀಡಾತ್ಮಕ ಹಾಗೂ ಪ್ರೀಮಿಯಂ ಶೈಲಿ ಲಭ್ಯವಾಗಲಿದೆ ಎನ್ನಬಹುದು.

ಬಿಡುಗಡೆಗೆ ಕ್ಷಣಗಣನೆ- ಕುತೂಹಲ ಹುಟ್ಟುಹಾಕಿದ ಟಾಟಾ ನೆಕ್ಸನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ನೆಕ್ಸನ್ ಅತ್ಯುತ್ತಮ ಮಾದರಿಯಾಗುವ ನೀರಿಕ್ಷೆಯಿದ್ದು, ಸ್ಪರ್ಧಾತ್ಮಕ ಬೆಲೆಗಳ ಮೂಲಕ ಪ್ರಮುಖ ಕಾರು ಮಾದರಿಗಳಾದ ಹ್ಯುಂಡೈ ಕ್ರೇಟಾ, ಫೋರ್ಡ್ ಇಕೋ ಸ್ಪೋರ್ಟ್‌ಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ನೆಕ್ಸನ್ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದು, ಬಿಡುಗಡೆಯ ಸಂಪೂರ್ಣ ಮಾಹಿತಿಯನ್ನು ನಿಮ್ಮ ಡ್ರೈವ್ ಸ್ಪಾರ್ಕ್ ನೀಡಲಿದೆ.

Article Published On: Thursday, September 21, 2017, 12:08 [IST]
English summary
Read in Kannada about Tata Nexon SUV Car Specification.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+