ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಟಾಟಾ ಕಂಪನಿಯು ಕಳೆದ ವರ್ಷ ಮಾರುತಿಯ ಸೆಲೆರಿಯೊ ಕಾರಿಗೆ ಸ್ಪರ್ಧೆ ನೀಡುವಂತಹ ಟಿಯಾಗೊ ಕಾರನ್ನು ಬಿಡುಗಡೆಗೊಳಿಸಿತ್ತು, ಈ ಕಾರು ಸದ್ಯ ಹೆಚ್ಚು ಸದ್ದು ಮಾಡುತ್ತಿದೆ.

By Girish

Recommended Video

Tata Tiago XTA AMT Launched In India | In Kannada - DriveSpark ಕನ್ನಡ

ಟಾಟಾ ಕಂಪನಿಯು ಕಳೆದ ವರ್ಷ ಮಾರುತಿಯ ಸೆಲೆರಿಯೊ ಕಾರಿಗೆ ಸ್ಪರ್ಧೆ ನೀಡುವಂತಹ ಟಿಯಾಗೊ ಕಾರನ್ನು ಬಿಡುಗಡೆಗೊಳಿಸಿತ್ತು, ಈ ಕಾರು ಸದ್ಯ ಹೆಚ್ಚು ಸದ್ದು ಮಾಡುತ್ತಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಮೊದಲ ಬಾರಿಗೆ ಟಾಟಾ ಸಂಸ್ಥೆಯ ಟಿಯಾಗೊ ಕಾರನ್ನು ಪರಿಚಯಿಸಿದಾಗ ಹೆಚ್ಚು ಯಶಸ್ವಿಯಾಗಲಿಲ್ಲವಾದರೂ ಸಹ ಟಾಟಾ ಈ ಕಾರಿನ ಉತ್ಪಾದನೆಯನ್ನು ಕೈಬಿಡಲಿಲ್ಲ. ಇದರಿಂದಾಗಿ, ಕಳೆದ ಕೆಲವು ತಿಂಗಳುಗಳಿಂದ ಈ ಕಾರು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟಗೊಂಡು ಎಲ್ಲರ ಗಮನ ಸೆಳೆದಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಹೌದು, ಮೇ ತಿಂಗಳಲ್ಲಿ 4,901 ಮತ್ತು ಜೂನ್ ತಿಂಗಳಲ್ಲಿ 5,438 ಟಿಯಾಗೊ ಕಾರುಗಳನ್ನು ಮಾರಾಟ ಮಾಡಿದ ಟಾಟಾ ಸಂಸ್ಥೆಯು, ಕಳೆದ ತಿಂಗಳು ಆಗಸ್ಟ್‌ನಲ್ಲಿ 7036 ಕಾರುಗಳನ್ನು ಮಾರಾಟ ಮಾಡಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಈ ಮೂಲಕ ಸಂಸ್ಥೆಯ ಈ ಟಿಯಾಗೊ ಕಾರು ತನ್ನ ಮಾರಾಟ ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸಿಕೊಳ್ಳುವುದರ ಜೊತೆಗೆ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಪಸರಿಸಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟವಾಗಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ನಿಧಾನವಾಗಿ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಟಿಯಾಗೊ ಕಾರಿನ ಆವೃತ್ತಿಯು ಸದ್ಯದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗಿದ್ದು, ಮ್ಯಾನುವಲ್ ಗೇರ್‌ಬಾಕ್ಸ್ ಜೊತೆ ಎಎಂಟಿ ಆಯ್ಕೆಯಲ್ಲಿ ಲಭ್ಯವಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಇನ್ನು ಈ ಕಾರಿನ ಇಂಧನ ದಕ್ಷತೆಯ ಬಗ್ಗೆ ಹೇಳುವುದಾದರೆ, ಎಆರ್‌ಎಐ ಪರೀಕ್ಷಾ ಅಂಕಿ ಅಂಶಗಳ ಪ್ರಕಾರ. ಟಿಯೊಗೊ ಪೆಟ್ರೋಲ್ ವಾಹನವು ಲಿಟರಿಗೆ 23.84 ಕಿ.ಮೀ ಮೈಲೇಜ್ ನೀಡಲಿದೆ ಮತ್ತು ಡೀಸೆಲ್ ವಾಹನವು ಲಿಟರಿಗೆ 27.28 ಕಿ.ಮೀ ಮೈಲೇಜ್ ಒದಗಿಸಲಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ಹ್ಯಾಚ್‌ಬ್ಯಾಕ್ ಮಾದರಿಯಲ್ಲಿ ಹೆಚ್ಚು ಸ್ಪರ್ಧೆ ನೀಡುತ್ತಿರುವ ಟಿಯಾಗೊ ಕಾರಿನ ಬೆಲೆ ರೂ. 3.21 ಲಕ್ಷದಿಂದ ಶುರುವಾಗಲಿದ್ದು, ಉನ್ನತ ಮಾದರಿಯ ವಾಹನವು ರೂ. 5.65 ಲಕ್ಷ ಬೆಲೆ ಪಡೆದುಕೊಂಡಿದೆ.

ಆಗಸ್ಟ್ ತಿಂಗಳಿನಲ್ಲಿ 7000 ಟಾಟಾ ಟಿಯಾಗೊ ಕಾರುಗಳ ದಾಖಲೆ ಮಾರಾಟ

ತನ್ನ ಪ್ರತಿಸ್ಪರ್ದಿಗಳಾದ, ಸೆಲೆರಿಯೊ ಮತ್ತು ವ್ಯಾಗನ್ ಆರ್ ಕಾರುಗಳಿಗೆ ಹೋಲಿಕೆ ಮಾಡಿದರೆ, ಕಡಿಮೆ ಬೆಲೆಯಲ್ಲಿ ಹೆಚ್ಚು ಸೌಕರ್ಯ ನೀಡುತ್ತಿರುವುದೇ ಈ ಟಿಯಾಗೊ ಕಾರಿನ ಮಾರಾಟ ಹೆಚ್ಚಲು ಮುಖ್ಯ ಕಾರಣ ಎನ್ನಲಾಗಿದೆ.

Most Read Articles

Kannada
English summary
The Tiago was introduced last year as an all-new product, to take on the Celerio. While the vehicle was not very successful when it was first introduced, it has started picking up over the last few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X