ಸ್ಪಾಟ್ ಟೆಸ್ಟಿಂಗ್‌ನಲ್ಲಿ ಸೆರೆಸಿಕ್ಕ ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್
ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗಕ್ಕೆ ಮತ್ತೊಂದು ಹೊಸ ಪರಿಚಯ ಮಾಡುತ್ತಿರುವ ಟಾಟಾ ಮೋಟಾರ್ಸ್, ಸುಧಾರಿತ ವಿನ್ಯಾಸಗಳನ್ನು ಹೊಂದಿರುವ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬಿಡುಗೊಳಿಸುವ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಹ್ಯಾಚ್‌ಬ್ಯಾಕ್ ಕಾರುಗಳ ವಿಭಾಗಕ್ಕೆ ಮತ್ತೊಂದು ಹೊಸ ಪರಿಚಯ ಮಾಡುತ್ತಿರುವ ಟಾಟಾ ಮೋಟಾರ್ಸ್, ಸುಧಾರಿತ ವಿನ್ಯಾಸಗಳನ್ನು ಹೊಂದಿರುವ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮಾದರಿಯನ್ನು ಬಿಡುಗೊಳಿಸುವ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಈ ಹಿಂದೆ ಇದೇ ಮಾದರಿಯನ್ನು ರಸ್ತೆಗಿಳಿಸಿ ಪರೀಕ್ಷೆ ಕೈಗೊಂಡಿದ್ದ ಟಾಟಾ ಮೋಟಾರ್ಸ್ ಇದೀಗ ಮತ್ತೊಮ್ಮೆ ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಸದ್ಯದಲ್ಲೇ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಿದೆ. ಈ ಮೂಲಕ ಪ್ರಸ್ತುತ ಮಾದರಿಗಳಿಂತ ಹೆಚ್ಚಿನ ಸೌಲಭ್ಯಗಳನ್ನು ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಲಭ್ಯವಿರಲಿದ್ದು, ಬ್ಲ್ಯಾಕ್ ಬಣ್ಣದ ರೂಫ್ ಮತ್ತು ಮ್ಯಾನುವಲ್ ಆಪರೇಟ್ ಮಾಡಬಹುದಾದ ರಿರ್ ವ್ಯೂವ್ ಮಿರರ್ ಅನ್ನು ಹೊಂದಿರಲಿದೆ.

ಟಾಟಾ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್‌ನಲ್ಲಿ ಆ್ಯಂಟಿ ಗೇರ್ ವ್ಯವಸ್ಥೆಯನ್ನು ನೀಡಲಾಗಿದ್ದು, ಬ್ಲ್ಯಾಕ್ ಬಣ್ಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಹೊಸ ಮಾದರಿಯನ್ನಾಗಿಸುವ ಬಗ್ಗೆ ಸುಳಿವು ಕೊಟ್ಟಿದೆ.

ಇನ್ನು ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಒಳ ವಿನ್ಯಾಸಗಳ ಬಗೆಗೆ ಹೇಳುವುದಾದರೇ ಆಧುನಿಕ ಸ್ಪರ್ಶ ನೀಡಲಾಗಿದ್ದು, ಫ್ಯಾಬ್ರಿಕ್ ಸೀಟುಗಳು, ವ್ಯಾನಿಟಿ ಮಿರರ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 14 ಇಂಚಿನ್ ಚಕ್ರಗಳೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಎಂಜಿನ್
ಪೆಟ್ರೋಲ್ ಮಾದರಿಯು 1.2-ಲೀಟರ್ ಎಂಜಿನ್ ಹೊಂದಿರಲಿದ್ದು, 83-ಬಿಎಚ್‌ಪಿ ಮತ್ತು 114-ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಹಾಗಿಯೇ ಡೀಸೆಲ್ ಮಾದರಿಯು 1.5-ಲೀಟರ್ ಎಂಜಿನ್ ಹೊಂದಿದ್ದು, 68-ಬಿಎಚ್‌ಪಿ ಮತ್ತು 140-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಹೊಸ ಅಧ್ಯಾಯ ಶುರು ಮಾಡಲಿರುವ ಟಾಟಾ ಮೋಟಾರ್ಸ್, ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಟಿಯಾಗೊ ವಿಜ್ ಲಿಮಿಟೆಡ್ ಎಡಿಷನ್ ಮಾದರಿ ಮಾರಾಟದಲ್ಲಿ ಹೊಸ ಯಶಸ್ಸು ಕಾಣುವ ತವಕದಲ್ಲಿದೆ.


Click it and Unblock the Notifications