ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

Written By:

ವಾಹನ ತಯಾರಿಕೆಯಲ್ಲಿ ಅತ್ಯಂತ ಹೆಚ್ಚಿನ ವಿಶ್ವಾಸನೀಯ ಬ್ರಾಂಡ್ ಎಂಬ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‍ ತನ್ನ ಹೊಸ ವಿನ್ಯಾಸದ ಟಿಗೋರ್ ಕಾರನ್ನು ಕರ್ನಾಟಕದ ರಾಜಧಾನಿಯಲ್ಲಿ ಅನಾವರಣಗೊಳಿಸಿದೆ.

To Follow DriveSpark On Facebook, Click The Like Button
ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಐಷಾರಾಮಿ ಶ್ರೇಣಿಯ ಹೆಕ್ಸಾ ಕಾರನ್ನು ಬಿಡುಗಡೆ ಮಾಡಿದ ಕೇವಲ ಎರಡು ತಿಂಗಳ ನಂತರ ಟಾಟಾ ಮೋಟರ್ಸ್ ಮತ್ತೊಂದು ಆವಿಷ್ಕಾರಕ ಮತ್ತು ಗ್ರಾಹಕರ ಮನ ಮೆಚ್ಚುವ ಟಿಗೋರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈಗಿನ ಯುವಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಟಾಟಾ ಟಿಗೋರ್ ಆಕರ್ಷಕವಾದ ವಿನ್ಯಾಸ, ಬ್ರೇಕ್ ಫ್ರೀಯಂತಹ ಸೌಲಭ್ಯಗಳನ್ನು ಪಡೆದುಕೊಂಡಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಭಾರತದ ಮೊದಲ `ಸ್ಟೈಲ್‍ಬ್ಯಾಕ್' ಕಾರ್ ಆಗಿರುವ ಟಾಟಾ ಟಿಗೋರ್ ಟಾಟಾ ಪ್ರಯಾಣಿಕ ಕಾರುಗಳ ಶ್ರೇಣಿಯಲ್ಲೇ ಕ್ರಾಂತಿಕಾರಕ ಕಾರು ಎನಿಸಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈ ವಿನೂತನವಾದ ಮತ್ತು ಆಕರ್ಷಕವಾದ ಟಿಗೋರ್, ರಿವಟ್ರನ್ 1.2 ಲೀಟರ್ (ಪೆಟ್ರೋಲ್ ಎಂಜಿನ್) ಮತ್ತು 1.05 ಲೀಟರ್ (ಡೀಸೆಲ್ ಎಂಜಿನ್) ಸಾಮಥ್ರ್ಯದ ಎರಡು ವಿಶ್ವದರ್ಜೆಯ ಶ್ರೇಣಿಗಳಲ್ಲಿ ಲಭ್ಯವಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈ ಸ್ಟೈಲ್ ಬ್ಯಾಕ್ ಕಾರು, ಅತ್ಯಂತ ಆರಾಮದಾಯಕ ಚಾಲನೆ ಮತ್ತು ಸಾಮಥ್ರ್ಯ ಹೊಂದಿದ್ದು, ಚಾಲಕನಿಗೆ ಹೆಚ್ಚಿನ ಮಟ್ಟದ ತೃಪ್ತಿ ನೀಡುವುದಂತೂ ಖಂಡಿತ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈ ಟಿಗೋರ್ ಕಾರು ಎರಡೂ ಶ್ರೇಣಿಯ ಟಿಗೋರ್ ಇಕೋ ಮತ್ತು ಸಿಟಿ ಸೇರಿದಂತೆ ಮಲ್ಟಿ-ಡ್ರೈವ್ ಮೋಡ್‍ಗಳನ್ನು ಒಳಗೊಂಡಿದ್ದು, ಚಾಲನೆಯನ್ನು ಸುಲಭಗೊಳಿಸಲಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಈ ಟಿಗೋರ್ ಕಾರಿನ 1.2 ಲೀಟರ್ ರಿವಟ್ರಾನ್(ಪೆಟ್ರೋಲ್) ಆವೃತಿಯ ಬೆಲೆ 4.85 ಲಕ್ಷ(ಬೆಂಗಳೂರಿನ ಎಕ್ಸ್- ಷೋರೂಂ) ರೂಪಾಯಿಯಿಂದ ಆರಂಭವಾಗಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈ ಟಿಗೋರ್ ಕಾರಿನ ಮತ್ತೊಂದು ಮಾದರಿಯಾದ 1.05 ಲೀಟರ್ ರಿವಟಾರ್ಕ್ (ಡೀಸೆಲ್) ಆವೃತಿಯ ಬೆಲೆ 5.77 ಲಕ್ಷ(ಬೆಂಗಳೂರಿನ ಎಕ್ಸ್- ಷೋರೂಂ) ರೂಪಾಯಿಯಿಂದ ಆರಂಭವಾಗಲಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಅತ್ಯಂತ ವಿಶಿಷ್ಟವಾದ ಸಿಗ್ನೇಚರ್ ಸ್ಪ್ಲಿಟ್ ಎಲ್‍ಇಡಿ ಟೇಲ್ ಲ್ಯಾಂಪ್, ಟ್ರೆಂಡಿ ಕ್ರಿಸ್ಟಲ್‍ಗಳಾದ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ ಮತ್ತು ಸ್ಟೈಲಿಶ್ ಹೈಮೌಂಟೆಡ್ ಎಲ್‍ಇಡಿ ಸ್ಟಾಪ್ ಲ್ಯಾಂಪ್‌‌ಗಳನ್ನು ಈ ವಿನೂತನ ಶೈಲಿಯ ಕಾಂಪ್ಯಾಕ್ಟ್ ಸೆಡಾನ್ ಶ್ರೇಣಿಯ ಕಾರು ಹೊಂದಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ವಿನ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಲಾಗಿರುವ ಈ ಕಾರಿನಲ್ಲಿ ಪ್ರೀಮಿಯಂ ಫಿನಿಶ್, ಐಷಾರಾಮವಾದ ಸೀಟುಗಳು ಮತ್ತು ಬೋಲ್‍ಸ್ಟರ್‍ಗಳು ಪಡೆದುಕೊಂಡಿದ್ದು, ಹೆಚ್ಚಿನ ಜನರನ್ನು ತನ್ನತ್ತ ಸೆಳೆಯುವುದಂತೂ ಖಂಡಿತ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಇತ್ತೀಚಿನ ದುಬಾರಿ ಕಾರುಗಳಲ್ಲಿ ಕಾಣಸಿಗುವಂತಹ 5 ಇಂಚು ಹೊಂದಿರುವ ಟಚ್‌ಸ್ಕ್ರೀನ್ ಇನ್‍ಫೋಟೈನ್‍ಮೆಂಟ್ ಸಿಸ್ಟಮ್, 8 ಸ್ಪೀಕರ್‌‌ಗಳನ್ನು ಈ ಕಾರಿನಲ್ಲಿ ಕಾಣಬಹುದು.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಇನ್ನು ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಈ ಕಾರಿನಲ್ಲಿ ಎರಡು ಏರ್‍ಬ್ಯಾಗ್‍ಗಳು, ಎಬಿಎಸ್ ಮತ್ತು ಇಬಿಡಿಯನ್ನು ನೀಡಲಾಗಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಟಿಗೋರ್ 8 ಶ್ರೇಣಿಗಳಲ್ಲಿ ಲಭ್ಯ(ಎರಡು ಐಚ್ಛಿಕ ಶ್ರೇಣಿಗಳು ಸೇರಿ)

ಎಕ್ಸ್‍ಇ 1.2

ಎಕ್ಸ್‍ಟಿ 1.2 ಪಿ

ಎಕ್ಸ್‍ಝಡ್(ಒ) 1.2ಪಿ

ಎಕ್ಸ್‍ಇ 1.05 ಡಿ

ಎಕ್ಸ್‍ಟಿ 1.05 ಡಿ

ಎಕ್ಸ್‍ಝಡ್ 1.05 ಡಿ

ಎಕ್ಸ್‍ಝಡ್(ಒ)

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಟಾಟಾ ಮೋಟರ್ಸ್‍ನ ಪ್ರಯಾಣಿಕ ವಾಹನ ವ್ಯವಹಾರಗಳ ವಿಭಾಗದ ಮಾರುಕಟ್ಟೆ ಮುಖ್ಯಸ್ಥರಾದ ವಿವೇಕ್ ಶ್ರೀವತ್ಸ ಅವರು, "ಸ್ಟೈಲಿಶ್ ಕಾರುಗಳನ್ನು ಇಷ್ಟಪಡುವ ಇಂದಿನ ಪೀಳಿಗೆಯ ಯುವ ಜನಕ್ಕೆ ಒಪ್ಪುವಂತಹ ಈ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದು, ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಈ ಮೂಲಕ ಹೊಸ ಶ್ರೇಣಿಯ ಕಾರುಗಳ ವಿಭಾಗದಲ್ಲಿ ಟಿಗೋರ್ ಗ್ರಾಹಕರಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ" ಎಂದು ತಿಳಿಸಿದರು.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಅದೇ ರೀತಿ ಕಾಪರ್ ಡ್ಯಾಝಲ್, ಎಸ್‍ಪ್ರೆಸ್ಸೋ ಬ್ರೌನ್, ಪರ್ಲ್‍ಸೆಂಟ್ ವೈಟ್, ಪ್ಲಾಟಿನಂ ಸಿಲ್ವರ್, ಸ್ಟಿಕರ್ ಬ್ಲ್ಯೂ ಮತ್ತು ಬೆರ್ರಿ ರೆಡ್‍ನ ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ರಾಜ್ಯದ ಮಾರುಕಟ್ಟೆಗೆ ಟಾಟಾ ಮೋಟರ್ಸ್‍ನ ಟಿಗೋರ್ ಕಾರು: ಬೆಲೆ ಮತ್ತು ವಿವರ ಇಲ್ಲಿದೆ

ಈ ಟಿಗೋರ್‍ಗೆ 2 ವರ್ಷ ಅಥವಾ 75,000 ಕಿಲೋಮೀಟರ್‍ವರೆಗೆ ವಾರಂಟಿ ಇರಲಿದೆ. ಈ ವಾರಂಟಿಯನ್ನು ವಿಸ್ತರಿಸಿಕೊಳ್ಳಲೂ ಅವಕಾಶವಿದೆ.

English summary
[read in kannada]The Tata Tigor launch adds a stylish subcompact Sedan for the Tata portfolio in Bangalore, India. Prices for the Tata Tigor start at Rs 4.85 lakh ex-showroom (Bangalore).
Story first published: Monday, April 3, 2017, 17:05 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark