ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಹೊಚ್ಚ ಹೊಸ ಟಿಗೋರ್ ಕಾರನ್ನು ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಕಂಪನಿ ಬಿಡುಗಡೆಗೊಳಿಸಿದೆ.

By Girish

ಬಲಿಷ್ಠ ಟಾಟಾ ಮೋಟಾರ್ಸ್ ತನ್ನ ಟಿಗೋರ್ 'ಸ್ಟೈಲ್ ಬ್ಯಾಕ್' ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಬೆಲೆ ಮತ್ತು ವಿವರಗಳಿಗಾಗಿ ಮುಂದೆ ಓದಿ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಇತ್ತೀಚೆಗಷ್ಟೇ ದೆಹಲಿಯಲ್ಲಿ ಪ್ರದರ್ಶನಗೊಂಡಿದ್ದ, ದೇಶದ ವಾಹನ ತಯಾರಿಕೆ ದೈತ್ಯ ಟಾಟಾ ಕಂಪನಿಯ ಹೊಸ ಕಾಂಪ್ಯಾಕ್ಟ್ ಸೆಡಾನ್ ಟಿಗೋರ್ ಸ್ಟೈಲ್ ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಈ ಕಾರು ಎಕ್ಸ್ಇ, ಎಕ್ಸ್‌ಟಿ, ಎಕ್ಸ್‌ಝೆಡ್ ಮತ್ತು ಎಕ್ಸ್‌ಝೆಡ್(ಓ) ಎಂಬ ನಾಲ್ಕು ಮಾದರಿಗಳಲ್ಲಿ ಬಿಡುಗಡೆಗೊಂಡಿದ್ದು, ಹೆಚ್ಚಿನ ತಂತ್ರಜ್ಞಾನ ಪಡೆದುಕೊಂಡಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಭಾರತದಲ್ಲಿ ಟಾಟಾ ಟಿಗೋರ್ ಕಾರಿನ ಆರಂಭಿಕ ಬೆಲೆ ರೂ. 4.70 ಲಕ್ಷ (ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಪೆಟ್ರೋಲ್ ಕಾರಿನ ಬೆಲೆ ಈ ಕೆಳಗಿನಂತಿದೆ(ಎಕ್ಸ್ ಷೋ ರೂಂ ದೆಹಲಿ) :

ಎಕ್ಸ್ಇ - ರೂ. 4.70 ಲಕ್ಷ

ಎಕ್ಸ್‌ಟಿ - ರೂ. 5.41 ಲಕ್ಷ

ಎಕ್ಸ್‌ಝೆಡ್ - ರೂ. 5.90 ಲಕ್ಷ

ಎಕ್ಸ್‌ಝೆಡ್(ಓ) - ರೂ. 6.19 ಲಕ್ಷ

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಪೆಟ್ರೋಲ್ ಮಾದರಿಯ ಕಾರು 15 ಇಂಚು ಡುಯಲ್ ಟೋನ್ ಅಲಾಯ್ ವೀಲ್ ಹೊಂದಿದ್ದು, ಡೀಸೆಲ್ ಮಾದರಿಯ ಕಾರಿನಲ್ಲಿ 14 ಇಂಚ್ ಅಲಾಯ್ ವೀಲ್ ಇರಿಸಲಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಹೊಚ್ಚ ಹೊಸ ಟಾಟಾ ಟಿಗೋರ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ಟಾಟಾ ಮೋಟರ್ಸ್ ಬಿಡುಗಡೆಗೊಳಿಸಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಡೀಸೆಲ್ ಕಾರಿನ ಬೆಲೆ ಈ ಕೆಳಗಿನಂತಿದೆ(ಎಕ್ಸ್ ಷೋ ರೂಂ ದೆಹಲಿ) :

ಎಕ್ಸ್ಇ ಡೀಸೆಲ್ - ರೂ. 5.60 ಲಕ್ಷ

ಎಕ್ಸ್‌ಟಿ ಡೀಸೆಲ್ - ರೂ. 6.31 ಲಕ್ಷ

ಎಕ್ಸ್‌ಝೆಡ್ ಡೀಸೆಲ್ - ರೂ. 6.80 ಲಕ್ಷ

ಎಕ್ಸ್‌ಝೆಡ್(ಓ) ಡೀಸೆಲ್ - ರೂ. 7.09 ಲಕ್ಷ

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ನವೀನ ಮಾದರಿಯ ಈ ಸ್ಟೈಲ್ ಬ್ಯಾಕ್, ಮೂರು ಸಿಲಿಂಡರ್ ಹೊಂದಿರುವ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು ರೆವೊಟೊರ್ಕ್ 1.05-ಲೀಟರ್ ಡೀಸೆಲ್ ಇಂಜಿನ್ ಪಡೆದುಕೊಂಡಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಎಲ್ಲಾ ಕಾರುಗಳಲ್ಲಿ ಸಾಮಾನ್ಯವಾಗಿ ಇರುವಂತಹ 5-ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್, ಈ ಕಾರಿನಲ್ಲಿಯೂ ಅಳವಡಿಸಲಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಟಾಟಾ ಟಿಗೋರ್ ಪೆಟ್ರೋಲ್ ಮಾದರಿಯ ಕಾರು 114 ಎನ್ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಟಾಟಾ ಟಿಗೋರ್ ಡೀಸೆಲ್ ಮಾದರಿಯ ಕಾರು 140 ಎನ್ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಕಾರಿನ ಬಗ್ಗೆ ಮತ್ತಷ್ಟು ಮಾಹಿತಿ :

ಕಾರಿನ ಉದ್ದ 3,992ಎಂಎಂ

ಕಾರಿನ ಅಗಲ 1,677ಎಂಎಂ

ಕಾರಿನ ಎತ್ತರ 1,537ಎಂಎಂ

ವೀಲ್ ಬೇಸ್ 2,450ಎಂಎಂ

ಗ್ರೌಂಡ್ ಕ್ಲಿಯರೆನ್ಸ್ 70ಎಂಎಂ

ಕಾರಿನ ಭಾರ (ಪೆಟ್ರೋಲ್/ಡೀಸೆಲ್) 1,062/1,130 ಕೆಜಿ

ಬೂಟ್ ಸ್ಪೇಸ್ 419-ಲೀಟರ್

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಒಳಬಾಗದಲ್ಲಿ, ಬಾಗಿರುವಂತಹ ಹೊಂದಿಸಬಹುದಾದ ಸ್ಟಿಯರಿಂಗ್ ಇದ್ದು, ಕಾರಿನ ಹಿಂದಿನ ಆಸನಗಳಲ್ಲಿ 3 ಮಂದಿ ಯಾವುದೇ ಕ್ಲಿಷ್ಟತೆ ಇಲ್ಲದೆ ಕುಳಿತುಕೊಳ್ಳಬಹುದಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಇನ್ನು ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ, ನೇವಿಗೇಶನ್ ಮತ್ತು ಎಯುಎಕ್ಸ್ ಹೊಂದಿರುವ 5 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಯುಎಸ್‌ಬಿ ಮತ್ತು ಬ್ಲೂಟೂತ್ ವ್ಯವಸ್ಥೆಗಳನ್ನು ಈ ಕಾರು ಹೊಂದಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಸಿಟಿ ಮತ್ತು ಇಕೊ ಎಂಬ ಎರಡು ಚಾಲನಾ ಆಯ್ಕೆಯಲ್ಲಿ ಈ ಕಾರು ಬಿಡುಗಡೆಗೊಂಡಿದ್ದು, ನೋಡುಗರನ್ನು ಸೆಳೆಯಲು ಸ್ವೀಪ್ಟ್-ಬ್ಯಾಕ್ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ದೀಪಗಳನ್ನು ಇರಿಸಲಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮುಂಭಾಗದಲ್ಲಿ ಎರಡು ಏರ್ ಬ್ಯಾಗುಗಳನ್ನು ಇರಿಸಲಾಗಿದ್ದು, ಇಬಿಡಿ ಹೊಂದಿರುವ ಎಬಿಎಸ್ ವ್ಯವಸ್ಥೆ, ಮೂರು ಪಾಯಿಂಟ್ ಹೊಂದಿರುವ ಸೀಟ್ ಬೆಲ್ಟ್, ಸೆಂಟ್ರಲ್ ಲಾಕ್ ಮತ್ತು ವೇಗವನ್ನು ಗ್ರಹಿಸಿ ಸ್ವಯಂ ಸ್ಥಗಿತ ವ್ಯವಸ್ಥೆ ಕಂಪನಿ ಈ ಕಾರಿನಲ್ಲಿ ಅಳವಡಿಸಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಈ ಕಾರಿನ ಬಿಡುಗಡೆಯಿಂದಾಗಿ ಕಂಪನಿಯ ಕಾರು ಸರಣಿಯ ಅತಿ ಮುಖ್ಯ ಭಾಗವಾದ 'ಕಾಂಪ್ಯಾಕ್ಟ್ ಸೆಡಾನ್' ವಿಭಾಗಕ್ಕೆ ಹೆಚ್ಚಿನ ಮಟ್ಟದ ಬಲ ಬಂದಿರುವುದಂತೂ ಸತ್ಯ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಸಿಗ್ನೇಚರ್ ಕಾಪರ್ ಡಾಜಿಲ್ ಒಳಗೊಂಡಂತೆ ಆರು ಬಣ್ಣಗಳಲ್ಲಿ ಈ ಕಾರು ಬಿಡುಗಡೆಗೊಂಡಿದ್ದು, ಅತಿ ಹೆಚ್ಚು ಜನರ ಕಾಯುವಿಕೆ ಇಲ್ಲಿದೆ ಅಂತ್ಯವಾಗಿದೆ.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

2016 ನಲ್ಲಿ ನೆಡೆದ ಆಟೋ ಎಕ್ಸ್ ಪೋದಲ್ಲಿ ಈ ಕಾರನ್ನು 'ಕೈಟ್ 5' ಎಂಬ ಹೆಸರಿನಡಿ ಬಿಡುಗಡೆಗೊಳಿಸಿತ್ತಾದರೂ ತರುವಾಯ ಕಾರಿನ ಹೆಸರನ್ನು ಬದಲಾವಣೆ ಮಾಡಿತ್ತು.

ಬಹುನೀರೀಕ್ಷಿತ ಟಾಟಾ ಕಂಪನಿಯ ಮೊದಲ ಸ್ಟೈಲ್ ಬ್ಯಾಕ್ ಕಾರು 'ಟಿಗೋರ್' ಬಿಡುಗಡೆಗೊಂಡಿದೆ

ಟಾಟಾ ಮೋಟರ್ಸ್ ಮೊದಲ ಸ್ಟೈಲ್ ಬ್ಯಾಕ್ ಕಾರು ಎಂಬ ಖ್ಯಾತಿಯನ್ನು ಈ 'ಟಿಗೋರ್' ಪಡೆದುಕೊಂಡಿದ್ದು, ಜನತೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
Read more on ಟಾಟಾ
English summary
Tata Tigor launched in India. Prices for the all-new Tata Tigor in India start at Rs 4.70 lakh ex-showroom (Delhi). The all new Tata Tigor promises to shake up the sub-compact sedan segment in India with its Styleback design.
Story first published: Thursday, March 30, 2017, 12:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X