ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

Written By:

ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. ಇಂದು ಸಹ ಮಳೆ ಮುಂದುವರಿದ್ದು, ವಾಹನ ಸವಾರರ ಪರಿಸ್ಥಿತಿ ಅಂತು ಹೇಳ ತೀರದು. ಹೀಗಾಗಿ ಪ್ರಮುಖ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಇಂತಹ ಸಂದರ್ಭದಲ್ಲಿ ಟಾಟಾ ಟಿಗೋರ್ ಕಾರು ಚಾಲಕನೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

ಕಳೆದ ಐದು ದಿನಗಳಿಂದ ದೇಶದ ವಿವಿಧ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ವಾಣಿಜ್ಯ ನಗರಿ ಮುಂಬೈ ನಗರದ ರಸ್ತೆಗಳಂತೂ ಅಕ್ಷರ ಶಹ: ನದಿಗಳಾಗಿ ಮಾರ್ಪಟ್ಟಿವೆ. ಕೆಲವು ಕಡೆ ಅಂತೂ 4 ರಿಂದ 5 ಅಡಿಗಳಷ್ಟು ಎತ್ತರಕ್ಕೆ ಮಳೆ ನೀರು ಹರಿಯುತ್ತಿದ್ದು, ಪ್ರವಾಹ ಭೀತಿ ಶುರುವಾಗಿದೆ.

ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

ಇಂತಹ ಅಪಾಯಕಾರಿ ಸನ್ನಿವೇಶದಲ್ಲೂ ಟಾಟಾ ಟಿಗೋರ್ ಕಾರು ಚಾಲಕನೊಬ್ಬ ಪ್ರಾಣಾಪಾಯ ಲೆಕ್ಕಿಸದೇ ಪ್ರವಾಹದಲ್ಲಿ ರಸ್ತೆ ದಾಟಲು ಯತ್ನಿಸಿದ್ದು, ಅದೃಷ್ಟವಾಶಾತ್ ರಭಸವಾಗಿ ಹರಿಯುತ್ತಿದ್ದ ಮಳೆ ನೀರಿನಿಂದ ಹೊರಬಂದಿದ್ದಾನೆ.

ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

ಭಾರೀ ಮಳೆಯಿಂದಾಗಿ ರಸ್ತೆ ಮಾರ್ಗಗಳೇ ಕಾಣದಾಗಿದ್ದು, ಟಾಟಾ ಟಿಗೋರ್ ಕಾರು ಚಾಲಕನು ಪ್ರಾಣ ಲೆಕ್ಕಿಸದೇ 5 ಅಡಿ ಎತ್ತರ ಹರಿಯುತ್ತಿದ್ದ ನೀರಿನಲ್ಲಿ ಕಾರು ಚಾಲನೆ ಮಾಡಿರುವುದು ಹರಸಾಹಸವೇ ಎನ್ನಬಹುದು.

ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

ಈ ವೇಳೆ ಯಾರೋಬ್ಬರು ಅಂತಹ ಅಪಾಯದಲ್ಲಿ ಕಾರು ಚಾಲನೆಗೆ ಮುಂದಾಗುತ್ತಿರಲಿಲ್ಲಾ. ಆದ್ರೆ ಟಾಟಾ ಟಿಗೋರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಯು ಮಾತ್ರ ಯಾವುದೇ ಹೆದರಿಕೆ ಇಲ್ಲದೇ ಪ್ರವಾಹದಲ್ಲಿ ನುಗ್ಗಿಬಂದಿದ್ದಾನೆ.

ಇನ್ನು ಪ್ರವಾಹದಲ್ಲಿ ಟಾಟಾ ಟಿಗೋರ್ ಕಾರು ನುಗ್ಗಿಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಟಾಟಾ ಟಿಗೋರ್ ಸಾಮರ್ಥ್ಯದ ಕುರಿತು ಭಾರೀ ಪ್ರಸಂಶೆ ಕಾರಣವಾಗಿದೆ. ಜೊತೆಗೆ ಅಪಾಯ ಸಂದರ್ಭಗಳಲ್ಲಿ ಸಾಹಸ ಪ್ರದರ್ಶನ ಸರಿಯಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2017 Mercedes New GLA India Launch Kannada - DriveSpark ಕನ್ನಡ
ಮಹಾ ಮಳೆಗೆ ಮುಂಬೈ ಜಲಾವೃತ- ಅಪಾಯದಿಂದ ಪಾರಾದ ಟಾಟಾ ಟಿಗೋರ್ ಚಾಲಕ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ತಂತ್ರಜ್ಞಾನಗಳೊಂದಿಗೆ ಬಲಿಷ್ಠತೆ ಹೊಂದಿರುವ ಟಾಟಾ ಟಿಗೋರ್ ಕಾರು ಪ್ರವಾಹದಲ್ಲಿ ಸಮರ್ಥ್ಯವಾಗಿ ಮುನ್ನುಗ್ಗುವ ಶೈಲಿ ನಿಜಕ್ಕೂ ಒಳ್ಳೆಯ ವಿಚಾರವಾದ್ರೂ, ಅಪಾಯದ ಸಂದರ್ಭಗಳಲ್ಲಿ ಎಚ್ಚರಿಕೆಯಿಂದ ಕಾರು ಚಾಲನೆ ಮಾಡುವುದು ಒಳಿತು.

English summary
Read in Kannada about Tata Tigor Through Mumbai Floods.
Story first published: Saturday, September 2, 2017, 13:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark