ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

Written By:

ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಟಿಗೋರ್ ಕಾರಿನ ಎಕ್ಸ್‌ಎಂ ಮಾದರಿಯನ್ನು ಅನಾವರಣಗೊಳಿಸಿದ್ದು, ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಇತ್ತೀಚಿಗಷ್ಟೇ ತನ್ನ ಕಾಂಪ್ಯಾಕ್ಟ್ ಸೆಡಾನ್ ಟಿಗೋರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದ ಟಾಟಾ ಮೋಟಾರ್ಸ್ ಮತ್ತೆ ಈ ಕಾರಿನ ಮತ್ತೊಂದು ಆವೃತಿಯನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಕಂಪನಿಯು ಈ ಕಾರನ್ನು ಟಿಗೋರ್ ಎಕ್ಸ್‌ಎಂ ಎಂದು ನಾಮಕರಣ ಮಾಡಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಟಿಗೋರ್ ಎಕ್ಸ್ಎಂ ಕಾರಿನ ಪೆಟ್ರೋಲ್ ಆವೃತ್ತಿಯು ರೂ. 4.99 ಲಕ್ಷ ಮತ್ತು ಟಿಗೋರ್ ಎಕ್ಸ್ಎಂ ಡೀಸೆಲ್ ಕಾರು ರೂ.5.80 ಲಕ್ಷ ಎಕ್ಸ್ ಷೋರೂಂ(ದೆಹಲಿ) ಬೆಲೆ ಪಡೆದುಕೊಂಡಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಹೊಸ ಕಾಂಪ್ಯಾಕ್ಟ್ ಸೆಡಾನ್ ಟಿಗೋರ್ ಎಕ್ಸ್ಎಂ ಕಾರು, ಎಕ್ಸ್ಇ ಮತ್ತು ಎಕ್ಸ್‌ಟಿ ಮಾದರಿಗಳ ಮದ್ಯೆ ಸ್ಥಾನ ಪಡೆದುಕೊಳ್ಳಲಿದೆ ಹಾಗು ಈ ಎಕ್ಸ್ಎಂ ಕಾರು ಒಂಬತ್ತು ಪ್ರಮುಖ ಲಕ್ಷಣಗಳನ್ನು ಪಡೆದುಕೊಂಡಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಟಿಗೋರ್ ಎಕ್ಸ್‌ಎಂ ಕಾರು ಸ್ಪೋರ್ಟ್ಸ್ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯ ಜೊತೆ ಎಂಟು ಸ್ಪೀಕರ್ ಒಳಗೊಂಡಿರುವ ಹಾರ್ಮನ್ ಆಡಿಯೋ ಸಿಸ್ಟಮ್ ಅಳವಡಿಕೆಯೊಂದಿಗೆ ಹೊರಬರಲಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಕಾಂಪ್ಯಾಕ್ಟ್ ಸೆಡಾನ್ ಎಕ್ಸ್‌ಎಂ ಟ್ರಿಮ್ ಕಾರು, ಕಾಪರ್ ಡಜಲ್, ಎಸ್ಪ್ರೆಸೊ ಬ್ರೌನ್, Pearlescent ವೈಟ್, ಪ್ಲಾಟಿನಂ ಸಿಲ್ವರ್, ಸ್ಟ್ರೈಕರ್ ಬ್ಲೂ ಮತ್ತು ಬೆರ್ರಿ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಈ ಟಿಗೋರ್ ಕಾರು, ಕೀ ಜೊತೆ ಮಾನ್ಯುಯಲ್ ಸೆಂಟ್ರಲ್ ಲಾಕಿಂಗ್, ಪವರ್ ವಿಂಡೋ, ವೇಗದ ಅವಲಂಬಿತ ಆಟೊ ಡೋರ್ ಲಾಕ್, ಎಲ್ಇಡಿ ಇಂಧನ ಗೇಜ್, ಪೂರ್ಣ ಫ್ಯಾಬ್ರಿಕ್ ಸೀಟ್, ಥಿಯೇಟರ್ ಮಬ್ಬಾಗಿಸುವಿಕೆ ಮತ್ತು ಪೂರ್ಣ ಚಕ್ರ ಕವರ್ ಸೌಲಭ್ಯಗಳನ್ನು ಹೊಂದಿದೆ.

ಟಾಟಾ ಟಿಗೋರ್ ಎಕ್ಸ್‌ಎಂ ಆವೃತಿ ಭಾರತದಲ್ಲಿ ಬಿಡುಗಡೆ; ಬೆಲೆ ರೂ.4.99 ಲಕ್ಷ

ಈ ಹೊಚ್ಚ ಹೊಸ ಟಿಗೋರ್ ಎಕ್ಸ್‌ಎಂ ಕಾರು ರಿವಟ್ರನ್ 1.2 ಲೀಟರ್ (ಪೆಟ್ರೋಲ್ ಎಂಜಿನ್) ಮತ್ತು 1.05 ಲೀಟರ್ (ಡೀಸೆಲ್ ಎಂಜಿನ್) ಸಾಮಥ್ರ್ಯದ ಎರಡು ವಿಶ್ವದರ್ಜೆಯ ಶ್ರೇಣಿಗಳಲ್ಲಿ ಲಭ್ಯವಿದೆ ಹಾಗು ಈ ಕಾರು ಎಎಂಟಿ ಪ್ರಸರಣ ಆಯ್ಕೆಯಲ್ಲಿ ಲಭ್ಯವಿಲ್ಲ.

Read more on ಟಾಟಾ tata
English summary
Tata Motors has launched a new variant of its compact sedan, the Tigor, named as the Tigor XM.
Story first published: Saturday, September 9, 2017, 18:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark