ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) ವಿಭಾಗವು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ.ವಿಶೇಷವಾಗಿ ಸಬ್ ಫೋರ್ ಮೀಟರ್ ಮಾದರಿಯು ಶೀಘ್ರವಾಗಿ ಬೆಳೆಯುತ್ತಿರುವುದನ್ನು ಗಮನಿಸಬಹುದು.

By Girish

ಈ ವಿಭಾಗದಲ್ಲಿ ಮೊದಲ ಕಾರು ಇಕೊಸ್ಪೋರ್ಟ್ ಕಾರು ಎನ್ನಬಹುದು. ಮೊದಲ ಬಾರಿಗೆ ಫೋರ್ಡ್ ಕಂಪನಿಯು ಬಿಡುಗಡೆಗೊಳಿಸಿತು. ಮುಂದುವರೆದ ಭಾಗವಾಗಿ ಮಾರುತಿ ಸುಜುಕಿ ಸಂಸ್ಥೆಯು ವಿಟಾರಾ ಬ್ರೆಝ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಎರಡೂ ಕಾರುಗಳು ಸಹ ಯಶಸ್ವಿಯಾಗಿದ್ದವು ಕೂಡ.

ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ಬಿಡುಗಡೆಯಾದಾಗಿಲಿನಿಂದಲೂ ಸಹ ಮಾರುತಿ ಬ್ರೆಝಾ ಕಾರು ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದೆ. ಈಗಲೂ ಸಹ ಅನೇಕ ಕಾರು ಖರೀದಿದಾರರು ಈ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ಆದರೆ, ನವೆಂಬರ್ ತಿಂಗಳಿನಲ್ಲಿ ಯಾವ ಎಸ್‌ಯುವಿ ಕಾರು ಹೇಗೆ ಭಾರತದಲ್ಲಿ ಮಾರಾಟವಾಗಿದೆ ? 2017ರ ನವೆಂಬರ್ ತಿಂಗಳಿನಲ್ಲಿ ಹೇಗೆ ಕಾರ್ಯನಿರ್ವಹಿಸಿದೆ ಎಂಬ ಮಾಹಿತಿ ಬಿಡುಗಡೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ನವೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿ ಕಾರಿನ ಸ್ಥಾನವನ್ನು ಫೋರ್ಡ್ ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಪಡೆದುಕೊಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಕೇವಲ 400 ಇಕೊಸ್ಪೋರ್ಟ್ ಫೇಸ್‌ಲಿಫ್ಟ್ ಕಾರುಗಳನ್ನು ಫೋರ್ಡ್ ಮಾರಾಟ ಮಾಡಿತ್ತು. ಆದರೆ, ನವೆಂಬರ್ ತಿಂಗಳಿನಲ್ಲಿ 5,474 ಎಸ್‌ಯುವಿಗಳನ್ನು ಮಾರಾಟ ಮಾಡಿದೆ.

ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ಅಮೆರಿಕಾದ ಕಂಪೆನಿಯು ಭಾರತದಲ್ಲಿ ಈ ಕಾರಿನ ಮೂಲಕ ಹೆಚ್ಚು ಜನರನ್ನು ತಲುಪಿದೆ. ಟಾಟಾ ಮೋಟರ್ಸ್ ಕಂಪನಿಯು ಸಹ ಈ ವಿಭಾಗವನ್ನು ನೆಕ್ಸನ್ ಕಾರಿನೊಂದಿಗೆ ಪ್ರವೇಶಿಸಿದೆ. ನೆಕ್ಸನ್ ಕಾರಿನ ಮೇಲೆ ನಿರೀಕ್ಷೆ ಹೆಚ್ಚಾಗಿದ್ದರೂ ಸಹ ಹೊಸ ಇಕೊಸ್ಪೋರ್ಟ್ ನೆಕ್ಸನ್ ಕಾರಿಗಿಂತ ಉತ್ತಮವಾಗಿದೆ.

ನೆಕ್ಸಾನ್ ಕಾರನ್ನು ಹಿಂದಿಕ್ಕಿ ಅಗ್ರಪಟ್ಟ ತನ್ನದಾಗಿಸಿಕೊಂಡ ಫೋರ್ಡ್ ಇಕೊಸ್ಪೋರ್ಟ್

ಟಾಟಾ ಮೋಟರ್ಸ್ ನವೆಂಬರ್ ತಿಂಗಳಿನಲ್ಲಿ 4,163 ನೆಕ್ಸನ್ ಕಾರುಗಳನ್ನು ಮಾತ್ರ ಮಾರಾಟ ಮಾಡಲು ಶಕ್ತವಾಗಿದೆ. ಆದ ಕಾರಣ, ನವೆಂಬರ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಫೋರ್ಡ್ ಇಕೊಸ್ಪೋರ್ಟ್ ಕಾರು ಅಗ್ರ ಪಟ್ಟ ತನ್ನದಾಗಿಸಿಕೊಂಡಿದೆ.

Most Read Articles

Kannada
Read more on ford ಫೋರ್ಡ್
English summary
The SUV that performed well in its November 2017 sales was the Ford EcoSport facelift.
Story first published: Saturday, December 9, 2017, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X