ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

ಜಪಾನಿನ ವಾಹನ ತಯಾರಕ ಟೊಯೊಟಾ ಭಾರತದಲ್ಲಿ ತನ್ನ ವಿದ್ಯುತ್ ಕಾರಿನ ಮುಂದಿನ ಯೋಜನೆಗಳನ್ನು ಬಹಿರಂಗಪಡಿಸಿದೆ. ಸದ್ಯ ದೇಶದಲ್ಲಿ ವಿದ್ಯುತ್ ವಾಹನಗಳನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕಂಪನಿಯು ಹೇಳಿದೆ.

By Girish

ಟೊಯೊಟಾ ಕಿರ್ಲೋಸ್ಕರ್ ಮೋಟರ್ಸ್(ಟಿಕೆಎಂ)ನ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಮೂಲ ಸೌಕರ್ಯಗಳ ಜೊತೆ ಚಾರ್ಜ್‌ಜಿಂಗ್ ಸ್ಟೇಷನ್‌ಗಳು ದೇಶದೆಲ್ಲೆಡೆ ಅಭಿವೃದ್ಧಿ ಹೊಂದುವವರೆಗೂ ವಿದ್ಯುತ್ ವಾಹನಗಳ ಮೇಲೆ ನಿರ್ಧರವನ್ನು ಕೈಗೊಳ್ಳುವುದಿಲ್ಲ ಎನ್ನಲಾಗಿದೆ.

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

"ವಿದ್ಯುತ್ ವಾಹನ ತಂತ್ರಜ್ಞಾನವು ತುಂಬಾ ಸರಳವಾಗಿದ್ದು, ಈ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ" ಎಂದು ಟಿಕೆಎಂನ ಉಪಾಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕ, ಶೇಖರ್ ವಿಶ್ವನಾಥನ್ ತಿಳಿಸಿದರು.

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

"ನಾವು ಕಂಪನಿಯು ಈಗಾಗಲೇ ಹೈಬ್ರಿಡ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ, ಈ ಹೈಬ್ರಿಡ್ ಕಾರಿನ ಆಂತರಿಕ ದಹನಕಾರಿ ಎಂಜಿನ್ ತೆರವುಗೊಳಿಸಿದರೆ ಈ ಕಾರು ವಿದ್ಯುತ್ ವಾಹನವಾಗಿ ಮಾರ್ಪಾಡುಗೊಳ್ಳುತ್ತದೆ" ಎಂದರು.

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

ಆದರೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ವಿದ್ಯುತ್ ವಾಹನಗಳನ್ನು ಯಾವ ಸಮಯದಲ್ಲಿ ಬೇಕಾದರೂ ಭಾರತದಲ್ಲಿ ಬಿಡುಗಡೆಗೊಳಿಸಬಹುದು ಎಂಬ ಮಾಹಿತಿಯನ್ನು ತಿಳಿಸಲು ಶೇಖರ್ ವಿಶ್ವನಾಥನ್ ಮರೆಯಲಿಲ್ಲ.

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

ಮಾತನ್ನು ಮುಂದುವರೆಸಿ, "ವಿದ್ಯುತ್ ಕಾರುಗಳನ್ನು ಭಾರತದಲ್ಲಿ ಪ್ರಾರಂಭಿಸುವ ಯಾವುದೇ ಯೋಜನೆ ನಮ್ಮ ಮುಂದೆ ಇಲ್ಲ, ಹೊರ ದೇಶಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಟೊಯೊಟಾ ಹೊಂದಿದ್ದರೂ ಸಹ, ಎಲೆಕ್ಟ್ರಿಕ್ ವಾಹನಗಳ ಮೂಲ ಸೌಕರ್ಯಗಳು ಹೊಂದುವವರೆಗೂ ಈ ನಿರ್ಧಾರವನ್ನು ನಾವು ಕೈಗೊಳ್ಳುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ಟೊಯೊಟಾ

ಭಾರತ ಸರ್ಕಾರವು 2030ರ ವೇಳೆಗೆ ರಸ್ತೆಯ ಮೇಲೆ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಹೊಂದುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದ್ದು, ಆದರೆ ಯೋಜನೆಯನ್ನು ಬೆಂಬಲಿಸಲು ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿರುವುದಂತೂ ಖಂಡಿತ.

Most Read Articles

Kannada
English summary
Japanese automaker Toyota has revealed its electric car strategy in India. The company has stated that it has no plans to introduce electric vehicles in the country.
Story first published: Monday, September 25, 2017, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X