ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

Written By:

ಹೊಸ ತೆರಿಗೆ ವ್ಯವಸ್ಥೆಯನ್ನು ಆಧರಿಸಿ ಜಿಎಸ್‌ಟಿ ಟೊಯೊಟಾ ಇನ್ನೋವಾ ಕಾರಿನ ಬೆಲೆ ಕಡಿತಗೊಂಡಿದ್ದು, ಜನಪ್ರಿಯ ಕಾರಿನ ಬೆಲೆ, ವಿಶೇಷತೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ಜುಲೈ 1ರ ನಂತರ ಭಾರತ ಸರಕಾರವು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ)ಯನ್ನು ದೇಶದಾದ್ಯಂತ ಜಾರಿಗೆ ತಂದಿದೆ. ಈ ಪರಿಣಾಮವಾಗಿ ಪ್ರಖ್ಯಾತ ಕಾರು ಉತ್ಪಾದಕ ಟೊಯೊಟಾ ಸಂಸ್ಥೆಯ ಜನಪ್ರಿಯ ಕಾರು ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಡಿದೆ.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ಹೌದು, ನೀವೇನಾದರೂ ಮಲ್ಟಿ ಪರ್ಪಸ್ ವೆಹಿಕಲ್ ಟೊಯೊಟಾ ಇನ್ನೋವಾ ಕ್ರಿಸ್ಟ ಕಾರನ್ನು ಖರೀದಿಸಲು ಬಯಸಿದರೆ, ಇದು ಸಕಾಲ ಎನ್ನಬಹುದು.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ಜಪಾನಿನ ಕಂಪನಿ ತನ್ನ ಅತ್ಯುತ್ತಮವಾಗಿ ಮಾರಾಟವಾಗುತ್ತಿರುವ ವಾಹನಗಳ ಬೆಲೆಯನ್ನು ಪರಿಷ್ಕರಿಸಿದೆ ಮತ್ತು ಇನ್ನೋವಾದ ಬೆಲೆಯನ್ನು ಶೇಕಡಾ 13% ರಷ್ಟು ಕಡಿಮೆಗೊಳಿಸಿದೆ.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ಹೊಸ ಜಿಎಸ್‌ಟಿ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ, ದೊಡ್ಡ ಎಸ್ಯುವಿಗಳು, 4-ಮೀಟರ್ ಉದ್ದದ ಮತ್ತು 1500ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಕಾರುಗಳು ಶೇಕಡಾ 55 ರಿಂದ 43% ರಷ್ಟು ತೆರಿಗೆ ಹೊಂದಿರಲಿವೆ.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ತೆರಿಗೆ ವ್ಯವಸ್ಥೆಯ ಪ್ರಕಾರವನ್ನು ಅವಲಂಬಿಸಿ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಲಿದ್ದು, ಸದ್ಯ, ಬೆಲೆ ಕಡಿತದ ನಂತರ ರೂ. 13.31 ಲಕ್ಷದಿಂದ 20.78 ಲಕ್ಷ ಹೊಂದಿರಲಿದೆ.

ಇನ್ನೊವಾ ಕ್ರಿಸ್ಟ ಕಾರಿನ ಬೆಲೆ ಕಡಿತಗೊಳಿಸಿದ ಟೊಯೊಟಾ

ಈಗಾಗಲೇ ಮಾರುತಿ ಸುಜುಕಿ, ಫೋರ್ಡ್ನಂತಹ ಕಾರು ತಯಾರಕರು ಜಿಎಸ್‌ಟಿ ಆಧಾರಿತ ಬೆಲೆ ಕಡಿತವನ್ನು ಪ್ರಕಟಿಸಿದ್ದು, ಜನಪ್ರಿಯವಾದ MPV ಇನ್ನೋವಾ ಕ್ರಿಸ್ಟವನ್ನು ಖರೀದಿಸಲು ಇದು ಸೂಕ್ತ ಸಮಯ ಎನ್ನಬಹುದು.

Read more on ಟೊಯೊಟಾ toyota
English summary
Read in kannada about Toyota Innova prices after GST stand decreased based on the new taxation system.
Story first published: Tuesday, July 4, 2017, 18:35 [IST]
Please Wait while comments are loading...

Latest Photos