ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

Written By:

ಸಾಲಿಡ್ ಸ್ಟೇಟ್ ಬ್ಯಾಟರಿ ಚಾಲನಾ ಶ್ರೇಣಿ ಮತ್ತು ಕೆಲವೇ ನಿಮಿಷಗಳಲ್ಲಿ ಮರು ಚಾರ್ಜ್ ಮಾಡಬಹುದಾದ ವಿದ್ಯುತ್ ವಾಹನವನ್ನು ಟೊಯೊಟಾ ಸಂಸ್ಥೆ ಉತ್ಪಾದನೆ ಮಾಡಲು ಮುಂದಾಗಿದೆ.

To Follow DriveSpark On Facebook, Click The Like Button
ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ಜಪಾನಿನ ತಯಾರಕ ಟೊಯೋಟಾ ಹೊಸ ವಿದ್ಯುತ್ ಕಾರಿನ ಘನ ಸ್ಥಿತಿಯ ಬ್ಯಾಟರಿ ಮೇಲೆ ಅಧ್ಯಯನ ಮಾಡುತ್ತಿದ್ದು, ಈ ಹೊಸ ತಂತ್ರಜ್ಞಾನದಿಂದಾಗಿ ಚಾರ್ಜ್ ಮಾಡುವ ಸಮಯ ಕಡಿಮೆಯಾಗಲಿದ್ದು, ಗಮನಾರ್ಹವಾಗಿ ಚಾಲನಾ ಶ್ರೇಣಿಯನ್ನು ಹೆಚ್ಚಿಸುತ್ತದೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ಟೊಯೋಟಾ 2020ರ ಹೊತ್ತಿಗೆ ಈ ಬ್ಯಾಟರಿಗಳನ್ನು ಅನಾವರಣಗೊಳಿಸುವುದಾಗಿ ಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಈ ಬ್ಯಾಟರಿಗಳನ್ನು ಭರ್ತಿ ಮಾಡಬಹುದಾಗಿದೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ಪ್ರಸ್ತುತ ವಿದ್ಯುತ್ ವಾಹನಗಳು ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಪಡೆದುಕೊಂಡಿದ್ದು, ಪೂರ್ತಿಯಾಗಿ ಚಾರ್ಜ್ ಮಾಡಲು ಕನಿಷ್ಟ 30 ನಿಮಿಷಗಳನ್ನು ಬೇಕಾಗುತ್ತದೆ. ಈ ಬ್ಯಾಟರಿಗಳು ಸುಮಾರು 300-400 ಕಿಲೋಮೀಟರ್ ವ್ಯಾಪ್ತಿಯನ್ನು ತಲುಪುತ್ತವೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲಾಗುತ್ತಿರುವ ದ್ರವ ರೂಪದ ಎಲೆಟ್ರೊಲೈಟಗಳ ಬದಲಾಗಿ ಎಲೆಟ್ರೊಲೈಟಗಳನ್ನು ಬಳಸಲಾಗುವುದು. ಲಿಥಿಯಂ ಐಯಾನ್ ಬ್ಯಾಟರಿ ಹೋಲಿಸಿದರೆ ಈ ಘನ ಬ್ಯಾಟರಿಗಳು ಹೆಚ್ಚು ಸುರಕ್ಷಿತವಾಗಿರಲಿವೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ನಿಸ್ಸಾನ್ ಮತ್ತು ಟೆಸ್ಲಾ ಜಗತ್ತಿನಾದ್ಯಂತ ವಿದ್ಯುತ್ ಕಾರುಗಳ ವಿಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿವೆ, ಇವುಗಳ ಜೊತೆ ತನ್ನ ಅಂತರವನ್ನು ಕಡಿಮೆಗೊಳಿಸಲು ಈ ರೀತಿಯ ನಿರ್ಧಾರಕ್ಕೆ ಬಂದಿರುವುದಾಗಿ ಟೊಯೊಟಾ ತಿಳಿಸಿದೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ವರದಿಯ ಪ್ರಕಾರ ಟೊಯೊಟಾ 2019ರಿಂದ ವಿದ್ಯುತ್ ವಾಹನಗಳ ಸಾಮೂಹಿಕ ಉತ್ಪಾದನೆಗೆ ಯೋಜನೆ ರೂಪಿಸಿದೆ ಎನ್ನಲಾಗಿದೆ. ಬಿಎಂಡಬ್ಲ್ಯೂ ಸೇರಿ ಅನೇಕ ವಿದ್ಯುತ್ ವಾಹನ ತಾಯಾರಕ ಸಂಸ್ಥೆಗಳು ಈಗಾಗಲೇ ಘನ ಬ್ಯಾಟರಿ ಬಗ್ಗೆ ಸಂಶೋಧನೆ ನೆಡೆಸುತ್ತಿವೆ.

ಸಾಲಿಡ್ ಸ್ಟೇಟ್ ಬ್ಯಾಟರಿ ಉತ್ಪಾದನೆಗೆ ಮುಂದಾದ ಟೊಯೊಟಾ

ವಿದ್ಯುತ್ ಕಾರುಗಳು ಭವಿಷ್ಯದ ಭವಿಷ್ಯದ ಕಾರುಗಳು ಎಂಬ ಹಣೆಪಟ್ಟಿ ಪಡೆದುಕೊಂಡಿದ್ದು, ಜಗತ್ತಿನಾದ್ಯಂತ ಹಲವಾರು ತಯಾರಕರು ಇವಿ ಗಳನ್ನು ಉತ್ಪಾದನೆ ಮಾಡಲು ಮುಂದಾಗಿವೆ. ಆದರೆ, ಟೊಯೋಟಾ ಒಂದು ಹೆಜ್ಜೆ ಮುಂದೆ ಹೋಗಿ ಘನ ಸ್ಥಿತಿಯ ಬ್ಯಾಟರಿ ಕಾರುಗಳ ಉತ್ಪಾದನೆಗೆ ಕೈಹಾಕಿದ್ದು, ಒಳ್ಳೆಯ ಬೆಳವಣಿಗೆ ಎನ್ನಬಹುದು.

Read more on ಟೊಯೊಟಾ toyota
English summary
Japanese automaker Toyota is working on a solid-state battery to power its new electric car. The new technology will reduce the charging time and significantly increases the driving range.
Story first published: Monday, July 31, 2017, 18:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark