2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಗೆ 2020ರ ಒಳಗಾಗಿ ಸುಮಾರು ಹತ್ತು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಣೆ ಮಾಡಿದೆ.

By Girish

ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಗೆ 2020ರ ಒಳಗಾಗಿ ಸುಮಾರು ಹತ್ತು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಣೆ ಮಾಡಿದೆ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಹೌದು, ಜಪಾನ್ ಆಟೋ ದೈತ್ಯ ಟೊಯೊಟಾ ಕಂಪನಿಯು ಸದ್ಯ ಭಾರತದಲ್ಲಿ ಟೊಯೊಟಾ ಪ್ರಿಯಸ್ ಮತ್ತು ಕ್ಯಾಮರಿ ಹೈಬ್ರಿಡ್ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಆದಾಗ್ಯೂ, ಈ ಕಂಪನಿಯು ಇಲ್ಲಿಯವರೆಗೆ ಯಾವುದೇ ರೀತಿಯ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಹಸಕ್ಕೆ ಕೈ ಹಾಕಿಲ್ಲ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಆದರೆ, ಹೊಸ ಮಾಹಿತಿ ಪ್ರಕಾರ, ಇನ್ನು ಮೂರು ವರ್ಷದ ಒಳಗಾಗಿ ಅಂದರೆ, 2020ರ ಒಳಗಾಗಿ ಈ ಸಂಸ್ಥೆಯು ಭಾರತದಲ್ಲಿ ಬರೋಬ್ಬರಿ 10 ಎಲೆಕ್ಟ್ರಿಕ್ ಕಾರುಗಳನ್ನು ಅನಾವರಣಗೊಳಿಸುವ ಅಧಿಕೃತ ಯೋಜನೆಯ ಬಗ್ಗೆ ಮಾತನಾಡಿದೆ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಚೀನಾ, ಭಾರತ, ಯುಎಸ್ಎ ಮತ್ತು ಯುರೋಪಿಯನ್ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಸಿದ್ಧಪಡಿಸಿದೆ ಎನ್ನಲಾಗಿದ್ದು, 2030ರ ಹೊತ್ತಿಗೆ ಸುಮಾರು 5 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳ ಮಾರಾಟ ಮಾಡುವ ಗುರಿ ಹೊಂದಿದೆ.

ಬೆಳೆಯುತ್ತಿರುವ ಎಲೆಕ್ಟ್ರಿಕ್ ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕಂಪನಿ ಕೈಗೊಂಡಿದೆ. ಈ ವಿಭಾಗದಲ್ಲಿ ಹೊಸ ಹೈಬ್ರಿಡ್ ವಿದ್ಯುತ್ ವಾಹನಗಳು(HEV), ಪ್ಲಗ್ ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳು(PHEVs), ಬ್ಯಾಟರಿ ಆಪರೇಟೆಡ್ ವಾಹನಗಳು(BEV) ಮತ್ತು ಫ್ಯುಯೆಲ್ ಸೆಲ್ ವಾಹನಗಳು(FCEVs) ಒಳಗೊಂಡಿರಲಿವೆ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಕಂಪನಿಯ ಮಾಹಿತಿಯ ಪ್ರಕಾರ, ವಾಣಿಜ್ಯ ಮತ್ತು ಪ್ರಯಾಣಿಕರ ಬಳಕೆಗೆ ಫ್ಯುಯೆಲ್ ಸೆಲ್ ವಿದ್ಯುತ್ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಹಾಗು 2025ರ ಹೊತ್ತಿಗೆ ಟೊಯೋಟಾ ಲೆಕ್ಸಸ್ ಶ್ರೇಣಿಯ ಪ್ರತಿ ಮಾದರಿಯೂ ಸಹ ಎಲೆಕ್ಟ್ರಿಕ್ ಆವೃತಿಯನ್ನು ಪಡೆಯಲಿವೆ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಭಾರತೀಯ ಮಾರುಕಟ್ಟೆಗೆ ಈ ಹಿಂದೆ, ಟೊಯೋಟಾ ಕಂಪನಿಯು ಮಾರುತಿ ಸುಜುಕಿಯೊಂದಿಗೆ ಪಾಲುದಾರಿಕೆಯನ್ನು ಘೋಷಿಸಿತ್ತು. ಈ ಸಹಯೋಗವು 2020ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ನೂತನ ವಿದ್ಯುತ್ ವಾಹನಗಳನ್ನು ಪರಿಚಯಿಸುವ ಸಾಧ್ಯತೆ ಇದೆ.

2020ರ ಒಳಗಾಗಿ 10 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ; ಟೊಯೊಟಾ

ಭಾರತೀಯ ಸರ್ಕಾರವು ಈಗಾಗಲೇ 2030ರ ಒಳಗಾಗಿ ಎಲ್ಲಾ ಕಾರುಗಳನ್ನೂ ಸಹ ಎಲೆಕ್ಟ್ರಿಕ್ ಆವೃತಿಗಳನ್ನಾಗಿ ಪರಿವರ್ತಿಸಬೇಕು ಎಂದು ಆದೇಶ ಹೊರಡಿಸಿದ್ದು, ಈ ನಿಯಮದ ಅನುಸಾರ ಎಲ್ಲಾ ಕಂಪನಿಗಳೂ ಸಹ ಕಾರ್ಯಪ್ರವೃತರಾಗಿರುವುದು ಸ್ವಾಗತಾರ್ಹ ಬೆಳೆವಣಿಗೆಯಾಗಿದೆ.

Most Read Articles

Kannada
English summary
Toyota to launch electric cars in India by 2020
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X