ಇಟಿಯಾಸ್ ಬದಲಾಗಿ ಯಾರಿಸ್ ಆ್ಯಟಿವ್ ಪರಿಚಯಿಸಲಿದೆ ಟೊಯೊಟಾ
ಮಧ್ಯಮ ಗಾತ್ರದ ಬೆಲೆಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಇಟಿಯಾಸ್ ಸೆಡಾನ್ ಆವೃತ್ತಿಯನ್ನು ಕೈಬಿಡುಲು ನಿರ್ಧರಿಸಿರುವ ಟೊಯೊಟಾ ಸಂಸ್ಥೆಯು ಅದೇ ವಿನ್ಯಾಸಗಳನ್ನೇ ಹೊಂದಿರುವ ಹೊಚ್ಚ ಹೊಸ ಯಾರಿಸ್ ಆ್ಯಟಿವ್ ಪರಿಚಯಿಸಲು ಮುಂದಾಗಿದೆ.
ಮಧ್ಯಮ ಗಾತ್ರದ ಬೆಲೆಗಳಲ್ಲಿ ಅತ್ಯುತ್ತಮ ಬೇಡಿಕೆ ಹೊಂದಿರುವ ಇಟಿಯಾಸ್ ಸೆಡಾನ್ ಆವೃತ್ತಿಯನ್ನು ಕೈಬಿಡುಲು ನಿರ್ಧರಿಸಿರುವ ಟೊಯೊಟಾ ಸಂಸ್ಥೆಯು ಅದೇ ವಿನ್ಯಾಸಗಳನ್ನೇ ಹೊಂದಿರುವ ಹೊಚ್ಚ ಹೊಸ ಯಾರಿಸ್ ಆ್ಯಟಿವ್ ಪರಿಚಯಿಸಲು ಮುಂದಾಗಿದೆ.

ಇದಕ್ಕೆ ಪೂರಕ ಎಂಬಂತೆ ಸೇಕೆಂಡ್ ಜನರೇಷನ್ ಇಟಿಯಾಸ್ ಆವೃತ್ತಿಯನ್ನು ಪರಿಚಯಿಸುವ ಯೋಜನೆಯನ್ನು ಕೈಬಿಟ್ಟಿರುವ ಟೊಯೊಟಾ, 2019ರ ವೇಳೆಗೆ ಇಟಿಯಾಸ್ ಬದಲಾಗಿ ಯಾರಿಸ್ ಆ್ಯಟಿವ್ ಆವೃತ್ತಿಗಳನ್ನು ಬಿಡುಗಡೆ ಮಾಡಲಿದೆ.

ಇದಲ್ಲದೇ ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟಾ ನಿರ್ಮಾಣದ ಸೆಡಾನ್ ಆವೃತ್ತಿಗಳು ಜನಪ್ರಿಯತೆ ಗಳಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಇದೇ ಉದ್ದೇಶಕ್ಕಾಗಿ ಗ್ರಾಹಕರನ್ನು ಸೆಳೆಯಲು ಸುಧಾರಿತ ಮಾದರಿಯ ಯಾರಿಸ್ ಆ್ಯಟಿವ್ ಸಿದ್ಧಗೊಳಿಸುತ್ತಿದೆ.
Recommended Video


ಇದರಿಂದ ಸೆಡಾನ್ ಆವೃತ್ತಿಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹೋಂಡಾ ಸಿಟಿ, ಸುಜುಕಿ ಸಿಯಾಜ್, ಹ್ಯುಂಡೈ ವೆರ್ನಾ, ನಿಸ್ಸಾನ್ ಸನ್ನಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿ ಯಾರಿಸ್ ಆ್ಯಟಿವ್ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರಲಿದೆ.

ಎಂಜಿನ್ ಸಾಮರ್ಥ್ಯ
ಮೂಲಗಳ ಪ್ರಕಾರ ಈ ಹಿಂದಿನ ಇಟಿಯಾಸ್ ಮಾದರಿಯಂತೆಯೇ ಯಾರಿಸ್ ಆ್ಯಟಿವ್ ಮಾದರಿಯಲ್ಲೂ 1.2-ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿರುವ ಟೊಯೊಟಾ, ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸೆಡಾನ್ ಆವೃತ್ತಿಗಳಿಂತಲೂ ಕಡಿಮೆ ಬೆಲೆಗೆ ಕಾರು ಪರಿಚಯಿಸುತ್ತಿದೆ.

ಜೊತೆಗೆ ಇಂಧನ ಕಾರ್ಯಕ್ಷಮತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಕಾರು 86-ಬಿಎಚ್‌ಪಿ ಮತ್ತು 108-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರಲಿದೆ ಎನ್ನಲಾಗಿದೆ. ಹೀಗಾಗಿ ಇದೊಂದು ಉತ್ತಮ ಸೆಡಾನ್ ಮಾದರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಎಸ್‌ಯುವಿ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಎಲ್ಲಾ ಹೊಸ ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆಯಲ್ಲೇ ಉತ್ಪಾದನೆ ಕೈಗೊಳ್ಳಲಿದೆ.


Click it and Unblock the Notifications








