ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

Written By:

ಉತ್ಸವದ ಋತುವಿನ ಮುಂಚಿತವಾಗಿ ಟೊಯೊಟಾ ಕಂಪನಿಯು ತನ್ನ ಜನಪ್ರಿಯ ಕಾರುಗಳಾದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ನವೀಕರಿಸಿ ಭಾರತದಲ್ಲಿ ಬಿಡುಗಡೆ ಮಾಡಿದೆ.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಹೆಚ್ಚುವರಿ ಉಪಕರಣಗಳೊಂದಿಗೆ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳು ಭಾರತದಲ್ಲಿ ಬಿಡುಗಡೆಗೊಂಡಿದ್ದು, ಹಬ್ಬದ ಸಮಯದಲ್ಲಿ ಹೊಚ್ಚ ಹೊಸ ಕಾರುಗಳನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳುವ ಅವಕಾಶವನ್ನು ಟೊಯೊಟಾ ಕಂಪನಿ ನೀಡಿದೆ ಎನ್ನಬಹುದು.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಆರಂಭದಲ್ಲಿ, ಇನ್ನೊವಾ ಕ್ರಿಸ್ಟ ಕಾರಿನ ಇಂಚಿನ ರಿಮ್ ಬಗ್ಗೆ ಗ್ರಾಹಕರಿಂದ ಹೆಚ್ಚಿನ ಮಟ್ಟದಲ್ಲಿ ವಿರೋಧ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಟೊಯೊಟಾ ಸಂಸ್ಥೆಯು ತನ್ನ ಈ ಕಾರಿನ ರಿಮ್‌ಗಳನ್ನು 16 ಇಂಚಿಗೆ ಬದಲಾವಣೆ ಮಾಡಿದೆ.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಭಾರಿ ಹೊರೆ ಮತ್ತು ಕೆಟ್ಟ ರಸ್ತೆಯ ಪರಿಸ್ಥಿತಿಗಳಲ್ಲಿ ಟೈಯರ್ ಹಾನಿಯಾಗುವ ಬಗ್ಗೆ ಗ್ರಾಹಕರು ದೂರಿದ್ದನ್ನು ನಾವು ಸ್ಮರಿಸಬಹುದಾಗಿದೆ ಹಾಗು ಹೊಸ 17 ಇಂಚಿನ ಮಿಶ್ರಲೋಹದ ಟೈಯರ್‌ಗಳು ಗಟ್ಟಿಯಾದ ಪಾರ್ಶ್ವಗೋಡೆಯನ್ನು ಪಡೆದುಕೊಂಡಿವೆ.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಉನ್ನತ ಮಾದರಿಯ ಇನ್ನೊವಾ ಕ್ರಿಸ್ಟ ಕಾರಿನಲ್ಲಿ ಮಾತ್ರ ಈ 17 ಇಂಚಿನ ಮಿಶ್ರಲೋಹದ ಟೈಯರ್‌ಗಳನ್ನು ನೀಡಲಾಗಿದ್ದು, ಇನ್ನೊವಾ ಟೂರಿಂಗ್ ಸ್ಪೋರ್ಟ್ ಆವೃತಿಯಲ್ಲಿ 17 ಇಂಚಿನ ರಿಮ್ಸ್ ಉಳಿಸಿಕೊಳ್ಳಲಾಗಿದೆ.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಇನ್ನೊವಾ ಕ್ರಿಸ್ಟ ಮತ್ತು ಫಾರ್ಚುನರ್ ಕಾರುಗಳು ಸ್ವಯಂಚಾಲಿತ ಸ್ಟಾರ್ಟ್ ಮತ್ತು ಸ್ಟಾಪ್ ವೈಶಿಷ್ಟ್ಯವನ್ನು ಪಡೆದುಕೊಂಡಿವೆ. ವಾಹನವು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚಿನ ಸಮಯ ಚಾಲನಾ ಸ್ಥಿತಿಯಲ್ಲಿ ಇದ್ದಾಗ, ಈ ವೈಶಿಷ್ಟ್ಯವು ಸ್ವಯಂಚಾಲಿತವಾಗಿ ಎಂಜಿನ್ ನಿಲ್ಲಿಸುವ ಸೌಲಭ್ಯ ಪಡೆದುಕೊಂಡಿದೆ.

ನವೀಕರಿಸಿದ ಇನ್ನೊವಾ ಮತ್ತು ಫಾರ್ಚುನರ್ ಕಾರುಗಳನ್ನು ಬಿಡುಗಡೆಗೊಳಿಸಿದ ಟೊಯೊಟಾ

ಎಂಟು ಆಸನಗಳನ್ನು ಪಡೆದ ಇನೋವಾ ಕ್ರಿಸ್ಟ ಜಿಎಕ್ಸ್ ಆವೃತಿಯು ಹಿಂಬದಿಯ ಆಸನಗಳಲ್ಲಿ ಆರ್ಮ್‌ರೆಸ್ಟ್, ಡ್ರೈವರ್-ಸೀಟ್ ಎತ್ತರ ಹೊಂದಾಣಿಕೆ ಮತ್ತು ಹಿಂಭಾಗದಲ್ಲಿ ಏರ್-ಕಂಡೀಷನಿಂಗ್ ದ್ವಾರಗಳಂತಹ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗುತ್ತಿದೆ.

Read more on ಟೊಯೊಟಾ toyota
English summary
Toyota India has updated its best-selling Innova Crysta and Fortuner SUV with new features and additional equipment ahead of the festive season.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark