ಮುಂಬೈ ಪ್ರವಾಹದಲ್ಲಿ ಕೆಟ್ಟು ನಿಂತು ಕಾರುಗಳಿಗೆ ಫೋಕ್ಸ್‌ವ್ಯಾಗನ್‌ನಿಂದ ಉಚಿತ ಸೇವೆ
ಕಳೆದ ಒಂದು ವಾರದಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಕಾರುಗಳು ಮೂಲೆ ಸೇರಿವೆ.
ಕಳೆದ ಒಂದು ವಾರದಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಕಾರುಗಳು ಮೂಲೆ ಸೇರಿದ್ದು, ತನ್ನ ಗ್ರಾಹಕರ ಸಹಾಯಕ್ಕೆ ದಾವಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಪ್ರವಾಹ ಬಾಧಿತ ಕಾರುಗಳಿಗೆ ಉಚಿತ ಸೇವೆ ನೀಡುತ್ತಿದೆ.

ಕಳೆದ ಕೆಲ ದಿನಗಳಿಂದ ಮುಂಬೈನಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯ ಪ್ರಮಾಣ ತಗ್ಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಸಾವಿರಾರು ಕಾರು ಮಾದರಿಗಳು ಕೆಟ್ಟು ನಿಂತಿವೆ. ಹೀಗಾಗಿ ತನ್ನ ಉತ್ಪಾದಿತ ಕಾರು ಮಾದರಿಗಳಿಗೆ ಪ್ರವಾಹ ಬಾಧಿತ ಉಚಿತ ಸೇವೆ ನೀಡುವುದಾಗಿ ಫೋಕ್ಸ್‌ವ್ಯಾಗನ್ ಹೇಳಿಕೊಂಡಿದೆ.

ಪ್ರವಾಹದಲ್ಲಿ ಸಿಲುಕಿದ್ದ ಬಹುತೇಕ ಕಾರುಗಳ ಎಂಜಿನ್ ನಿಷ್ಕ್ರೀಯಗೊಂಡಿದ್ದು, ಫ್ಯೂಲ್ ಟ್ಯಾಂಕ್‌ಗಳಲ್ಲೂ ಕೂಡಾ ನೀರು ಹೊಕ್ಕಿದೆ. ಪರಿಣಾಮ ಕಾರುಗಳು ಸಂಪೂರ್ಣ ಕೆಟ್ಟು ನಿಂತಿದ್ದು, ಬಿಡಿಭಾಗಗಳ ಖರೀದಿಗೆ ಗ್ರಾಹಕರು ಪರದಾಟು ಪರಿಸ್ಥಿತಿ ನಿರ್ಮಾಣವಾಗಿದೆ.
Recommended Video


ಕಾರಿನ ಒಳಭಾಗದಲ್ಲಿ ಮಳೆ ನೀರು ಹೊಕ್ಕಿದ ಪರಿಣಾಮ ಲೆದರ್ ಸೀಟುಗಳು ಹಾಳಾಗಿದ್ದು, ಕೆಲವು ಬಿಡಿಭಾಗಗಳ ಕಾರ್ಯ ಕೂಡಾ ಸ್ಥಗಿತಗೊಂಡಿದೆ. ಈ ಹಿನ್ನೆಲೆ ಗ್ರಾಹಕರ ಸಹಾಯಕ್ಕೆ ದಾವಿಸಿರುವ ಫೋಕ್ಸ್‌ವ್ಯಾಗನ್ ನಿಷ್ಕ್ರೀಯ ಎಂಜಿನ್‌ಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.

ಇದಕ್ಕಾಗಿ ವಿಶೇಷ ತಂತ್ರಜ್ಞರ ತಂಡಗಳನ್ನು ರಚನೆ ಮಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹಾಯವಾಣಿಗಳನ್ನು ತೆರೆದಿದ್ದು, 1800 102 1155/1800 419 1155 ಈ ನಂಬರ್ ಮೂಲಕ ಕೆಟ್ಟ ಕಾರುಗಳ ಬಗ್ಗೆ ಮಾಹಿತಿ ಪಡೆದು ಸಮಸ್ಯೆಯನ್ನು ಬಗೆಹರಿಸಲಿದೆ.

ಈ ಕುರಿತು ಮಾತನಾಡಿರುವ ಫೋಕ್ಸ್‌ವ್ಯಾಗನ್ ಇಂಡಿಯಾ ಹಿರಿಯ ಅಧಿಕಾರಿ ಸ್ಟೀಫನ್ ನ್ಯಾಪ್, "ಮುಂಬೈ ಮಹಾಮಳೆಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಫೋರ್ಕ್ಸ್‌ವ್ಯಾಗನ್ ಗ್ರಾಹಕರಿಗೆ ವೃತ್ತಿಪರ ತಂಡದೊಂದಿಗೆ ಸಕಾಲಿಕ ಸೇವೆ ನೀಡುವ ಯೋಜನೆ ಹೊಂದಿದ್ದೇವೆ" ಎಂದಿದ್ದಾರೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಪ್ರವಾಹದಲ್ಲಿ ಸಿಲುಕಿದ ಪರಿಣಾಮ ಮುಂಬೈನಲ್ಲಿ ಸಾವಿರಾರು ಕಾರುಗಳು ಕೆಟ್ಟು ನಿಂತಿದ್ದು, ಕಾರುಗಳ ರಿಫೇರಿಗಾಗಿ ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ತನ್ನ ಸಹಾಯಕ್ಕೆ ದಾವಿಸಿರುವ ಫೋಕ್ಸ್‌ವ್ಯಾಗನ್ ಸಹಾಯಹಸ್ತವನ್ನು ನಿಜಕ್ಕೂ ಮೆಚ್ಚುವಂತದ್ದು.


Click it and Unblock the Notifications








