ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

Written By:

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಫೋಕ್ಸ್‌ವ್ಯಾಗನ್ ಮುಂದಾಗಿದ್ದು, ಈ ಕಾರುಗಳ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಿ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ತನ್ನ ಪ್ರತಿಷ್ಠಿತ ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಅನಾವರಣ ಮಾಡಲು ಮುಂದಾಗಿದ್ದು, ಬಲ್ಲ ಮೂಲಗಳ ಪ್ರಕಾರ ಭಾರತದಲ್ಲಿ ಫೋಕ್ಸ್‌ವಾಗನ್ ಪೊಲೊ ಹೈಲೈನ್ ಪ್ಲಸ್ ಕಾರು ರೂ. 7.24 ಲಕ್ಷ ದಿಂದ ಆರಂಭಗೊಳ್ಳಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳು ಹೊಚ್ಚ ಹೊಸ ಅಲಾಯ್ ವೀಲ್‌ಗಳನ್ನು ಪಡೆದುಕೊಳ್ಳಲಿದ್ದು, ನೂತನ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪಡೆದುಕೊಳ್ಳಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಬಿಡುಗಡೆಗೊಳ್ಳಲಿರುವ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳು ಹೈಲೈನ್ ಮಾದರಿಗಿಂತ ಹೆಚ್ಚಿನ ಮಟ್ಟ ಮತ್ತು ಜಿಟಿ ಮಾದರಿಗಿಂತ ಕೆಳಗೆ ತನ್ನ ಸ್ಥಾನಗಳನ್ನು ಪಡೆದುಕೊಳ್ಳಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಮಾದರಿಗಳಲ್ಲಿ ಲಭ್ಯವಿದ್ದು, ಎರಡೂ ಮಾದರಿಗಳು ಮ್ಯಾನುಯಲ್ ಗೇರ್ ಬಾಕ್ಸ್ ಪಡೆದುಕೊಳ್ಳಲಿವೆ ಎಂಬ ವಿಚಾರ ತಿಳಿದುಬಂದಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಪೊಲೊ ಹೈಲೈನ್ ಪ್ಲಸ್ ಕಾರು 15 ಇಂಚಿನ ಅಲಾಯ್ ಚಕ್ರ, ರಿವೆರ್ಸ್ ಕ್ಯಾಮೆರಾ, ಉನ್ನತೀಕರಿಸಿರುವ ಟಚ್‌ಸ್ಕ್ರೀನ್ ಪರದೆಯನ್ನು ಪಡೆದುಕೊಳ್ಳಲಿದ್ದು, ಹಿಂದಿನ ಮಾದರಿಗೆ ಹೋಲಿಸಿದರೆ ನವೀನ ಆಯ್ಕೆಗಳನ್ನು ಒದಗಿಸಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಆಟೋಕಾರ್ ಇಂಡಿಯಾ ಮಾಹಿತಿಯ ಪ್ರಕಾರ ಫೋಕ್ಸ್‌ವ್ಯಾಗನ್ ಅಮಿನೊ ಹೈಲೈನ್ ಪ್ಲಸ್ ಕಾರು ಕೂಡ ರಿವೆರ್ಸ್ ಕ್ಯಾಮೆರಾ, ಉನ್ನತೀಕರಿಸಿರುವ ಟಚ್‌ಸ್ಕ್ರೀನ್ ಪರದೆ ವ್ಯವಸ್ಥೆ ಹೊಂದಿರಲಿದೆ. ಆದರೆ 16 ಇಂಚಿನ ಮಿಶ್ರಲೋಹದ ಚಕ್ರಗಳು ಆಯ್ಕೆಯ ರೀತಿಯಲ್ಲಿ ಇರಲಿವೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಫೋಕ್ಸ್‌ವ್ಯಾಗನ್ ಪೊಲೊ ಮಾಹಿತಿ :

ಫೋಕ್ಸ್‌ವ್ಯಾಗನ್ ಪೊಲೊ ಕಾರು 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 110 ಏನ್‌ಎಂ ತಿರುಗುಬಲದಲ್ಲಿ 74 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಇನ್ನು, 1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 230 ಏನ್‌ಎಂ ತಿರುಗುಬಲದಲ್ಲಿ 89 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಎರಡೂ ಎಂಜಿನ್‌ಗಳು 5-ವೇಗದ ಗೇರ್ ಬಾಕ್ಸ್ ಪಡೆದುಕೊಳ್ಳಲಿವೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಫೋಕ್ಸ್‌ವ್ಯಾಗನ್ ಅಮಿನೊ ಮಾಹಿತಿ :

ಫೋಕ್ಸ್‌ವ್ಯಾಗನ್ ಅಮಿನೊ ಸಬ್ ಕಾಂಪ್ಯಾಕ್ಟ್ ಸೆಡಾನ್ ಕಾರು 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 110 ಏನ್‌ಎಂ ತಿರುಗುಬಲದಲ್ಲಿ 74 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಇನ್ನು, 1.5-ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 250 ಏನ್‌ಎಂ ತಿರುಗುಬಲದಲ್ಲಿ 109 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿದೆ. ಎರಡೂ ಎಂಜಿನ್‌ಗಳು 5-ವೇಗದ ಗೇರ್ ಬಾಕ್ಸ್ ಪಡೆದುಕೊಳ್ಳಲಿವೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ

ಫೋಕ್ಸ್‌ವ್ಯಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಎರಡೂ ಕಾರುಗಳು ವೈಶಿಷ್ಟ್ಯತೆಗಳನ್ನು ಮತ್ತು ಸುರಕ್ಷತಾ ಸಾಧನಗಳನ್ನು ಪಡೆದುಕೊಂಡಿದ್ದು, ಮಾರುತಿ ಬಲೆನೊ ಮತ್ತು ಡಿಜೈರ್ ಕಾರುಗಳಿಗೆ ಪೈಪೋಟಿ ನೀಡಲಿವೆ.

ಫೋಕ್ಸ್‌ವಾಗನ್ ಪೊಲೊ ಮತ್ತು ಅಮಿನೊ ಹೈಲೈನ್ ಪ್ಲಸ್ ಕಾರುಗಳ ಬಿಡುಗಡೆಗೆ ತಯಾರಿ
Variant Expected Price Ex-Showroom
Volkawagen Polo Highline Plus (Petrol) Rs 7.24 lakh
Volkawagen Polo Highline Plus (Diesel) Rs 8.78 lakh
Volkawagen Ameo Highline Plus (Petrol) Rs 7.35 - Rs 7.45 lakh
Volkawagen Ameo Highline Plus (Diesel) Rs 8.59 - Rs 8.69 lakh
English summary
Volkswagen Polo And Ameo Highline Plus expected to be launched in India. As per Autocar India prices for the Volkswagen Polo Highline Plus in India is expected to start from Rs 7.24 lakh.
Story first published: Saturday, July 22, 2017, 14:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark