ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಸೆಡಾನ್ ಆವೃತಿ ಹೇಗಿರಲಿದೆ ಗೊತ್ತೆ ?
ಕಳೆದ ಜುಲೈ ತಿಂಗಳಿನಲ್ಲಿ ಹೊಸ ಫೋಕ್ಸ್‌ವ್ಯಾಗನ್ ಪೊಲೊ ತನ್ನ ಜಾಗತಿಕ ಪಾದಾರ್ಪಣೆಯನ್ನು ಮಾಡಿದ್ದು, ಈ ಯಶಸ್ವಿ ಕಾರಿನ ಸೆಡಾನ್ ಆವೃತಿಯನ್ನು ಜರ್ಮನಿಯ ಕಾರು ತಯಾರಕ ಕಂಪನಿಯು ಬಿಡುಗಡೆಗೊಳಿಸಿದೆ.
ಕಳೆದ ಜುಲೈ ತಿಂಗಳಿನಲ್ಲಿ ಹೊಸ ಫೋಕ್ಸ್‌ವ್ಯಾಗನ್ ಪೊಲೊ ತನ್ನ ಜಾಗತಿಕ ಪಾದಾರ್ಪಣೆಯನ್ನು ಮಾಡಿದ್ದು, ಈ ಯಶಸ್ವಿ ಕಾರಿನ ಸೆಡಾನ್ ಆವೃತಿಯನ್ನು ಜರ್ಮನಿಯ ಕಾರು ತಯಾರಕ ಕಂಪನಿಯು ಬಿಡುಗಡೆಗೊಳಿಸಿದೆ.

ಫೋಕ್ಸ್‌ವ್ಯಾಗನ್ ಸೆಡಾನ್ ಆವೃತಿಯ ಟೀಸರ್ ಸ್ಕೆಚ್ ಅನಾವರಣಗೊಂಡಿದ್ದು, ಇದು ಸೆಡಾನ್ ಸಿಲೂಯೆಟ್ ಕಲ್ಪನೆಯನ್ನು ನೀಡುತ್ತದೆ. ಮುಂಬರುವ ಫೋಕ್ಸ್‌ವ್ಯಾಗನ್ ಹ್ಯಾಚ್ ಬ್ಯಾಕ್, ಕ್ರಾಸ್-ಹ್ಯಾಚ್‌ಗಳು, ಸೆಡಾನ್‌ಗಳು ಮತ್ತು ಎಸ್‌ಯುವಿಗಳು MQB A0 ಚಾರ್ಸಿ ಪಡೆಯಲಿದ್ದು, ಈ ಹೊಸ ಪೊಲೊ ಸೆಡಾನ್ ಕಾರೂ ಸಹ ಇದೇ ಚಾರ್ಸಿ ಬಳಸಿಕೊಳ್ಳುತ್ತದೆ.

ಟೀಸರ್ ಸ್ಕೆಚ್ ಗಮನಿಸಿದಂತೆ, ಫೋಕ್ಸ್‌ವ್ಯಾಗನ್ ಹೊಸ ಸೆಡಾನ್ ಕಾರು ಸ್ಟೈಲಿಶ್ ಆಗಿರುವಂತಹ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ, ಹೊಸ ಹೆಡ್‌ಲ್ಯಾಂಪ್‌ಗಳ ಮತ್ತು ಮುಂಭಾಗದ ಬಂಪರ್ ದಪ್ಪ ವಿನ್ಯಾಸ ಪಡೆದುಕೊಂಡಿದೆ.

ಹಿಂಭಾಗದಲ್ಲಿ, ಟೈಲ್ ದೀಪಗಳು ಮತ್ತು ಬಂಪರ್ ಹೊಸ ವಿನ್ಯಾಸವನ್ನು ಹೊಂದಿವೆ ಹಾಗು ಪ್ರತಿಷ್ಠಿತ ಸಂಸ್ಥೆಯ ಈ ಸೆಡಾನ್ ಕಾರಿನ ಹಿಂಭಾಗದ ಆಕಾರವು ಕೌಟುಂಬಿಕ ಶೈಲಿಯನ್ನು ಹೋಲುತ್ತದೆ.

ಹೊಸ ಪೊಲೊ ಹ್ಯಾಚ್ ಬ್ಯಾಕ್ ಆಧರಿಸಿರುವ ಈ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು, ಭಾರತದಲ್ಲಿ ಅಮಿಯೊ ಕಾಂಪ್ಯಾಕ್ಟ್ ಸೆಡಾನ್ ಮಾದರಿಯಂತೆ ಕಾಣುತ್ತದೆ. ಕಾರಿನ ಕ್ಯಾಬಿನ್ ಒಳಗೆ, ಘಟಕಗಳು ಮತ್ತು ಸಲಕರಣೆಗಳು ಹೊಸ ಜನರೇಷನ್ ಪೊಲೊಗೆ ಹೋಲುಕೆ ಹೊಂದಿದೆ ಮತ್ತು ಡ್ಯುಯಲ್-ಸ್ಕ್ರೀನ್ ಡ್ಯಾಶ್ ಬೋರ್ಡ್ ಆಯ್ಕೆಯನ್ನು ಈ ಸೆಡಾನ್‌ನಲ್ಲಿ ನೀಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

1.0-ಲೀಟರ್, ಮೂರು-ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 200 ಎನ್ಎಂ ತಿರುಗುಬಲದಲ್ಲಿ 126 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ ಹಾಗು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಭಾರತದಲ್ಲಿ ಬಿಡುಗಡೆಗೊಳ್ಳುವುದು ಅನುಮಾನವಾಗಿದ್ದು, ಆದರೆ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾ ಭಾರತವನ್ನು ಉದ್ದೇಶವಾಗಿಟ್ಟುಕೊಂಡು ಕಡಿಮೆ ದರದ ಹೊಸ 'ಇಕೊ' ಪ್ಲಾಟ್ ಫಾರಂ ಅಭಿವೃದ್ಧಿಪಡಿಸುತ್ತಿವೆ. ಈ ಪ್ಲಾಟ್ ಫಾರಂ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾದ ಹಲವಾರು ಹೊಸ ವಾಹನಗಳಿಗೆ ಮತ್ತು ವಿಶ್ವದ ಇತರ ಉದಯೋನ್ಮುಖ ಮಾರುಕಟ್ಟೆಗಳಿಗೆ ಸಹಕರಿಸುತ್ತದೆ.

ಹೊಸ ಪೊಲೊ ಹ್ಯಾಚ್‌ಬ್ಯಾಕ್ ಆಧರಿಸಿರುವ ಫೋಕ್ಸ್‌ವ್ಯಾಗನ್ ವಿರ್ಟಸ್, ಭಾರತದಲ್ಲಿ ಆಮಿಯೊ ಕಾಂಪ್ಯಾಕ್ಟ್ ಸೆಡಾನ್‌ನಂತೆ ಕಾಣಲಿದ್ದು, ಈ ಕಾರು ಬಿಡುಗಡೆಗೊಂಡ ನಂತರ ಭಾರತದಲ್ಲಿ ವಿರ್ಟಸ್ ವೆಂಟೊ ಮತ್ತು ಹೊಸ ಪಸ್ಸಟ್ ನಡುವೆ ಸ್ಥಾನ ಪಡೆಯುವ ನಿರೀಕ್ಷೆ ಇದೆ.


Click it and Unblock the Notifications








