ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ವೋಲ್ವೋ ಇಂಡಿಯಾ ಎಸ್60 ಪೋಲ್‌ಸ್ಟಾರ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಕಾರಿನ ಬಗ್ಗೆ ಹೆಚ್ಚಿನ ವೈಶಿಷ್ಟ್ಯತೆಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.

By Girish

ಸ್ವೀಡೆನ್ ದೇಶದ ದೈತ್ಯ ಆಟೋ ತಯಾರಕ ಕಂಪನಿ ವೋಲ್ವೋ ತನ್ನ ಹೊಚ್ಚ ಹೊಸ ಎಸ್60 ಪೋಲ್‌ಸ್ಟಾರ್ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಅತ್ಯುತ್ತಮ ತಾಂತ್ರಿಕತೆ ಪಡೆದಿರುವ ಈ ಕಾರನ್ನು ಜನರು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ತನ್ನ ಅತ್ಯುತ್ತಮ ಕಾರುಗಳಲ್ಲಿ ಈ ಪೋಲ್ ಸ್ಟಾರ್ ಕೂಡ ಒಂದು ಎಂಬ ಹೇಳಿಕೆಯೊಂದಿಗೆ ಬಿಡುಗಡೆಗೊಳಿಸಿರುವ ಈ ಕಾರು, ಐಷಾರಾಮಿ ಕಾರು ತಯಾರಕ ಸಂಸ್ಥೆ ಮರ್ಸಿಡಿಸ್ ಬೆಂಝ್‌ನ ಎಎಂಜಿ ಬ್ರಾಂಡ್‌ನಂತೆ ಕಾರ್ಯ ನಿರ್ವಹಿಸಲಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಭಾರತದ ಮಾರುಕಟ್ಟೆಯಲ್ಲಿ ಸ್ವೀಡಿಷ್ ಕಂಪನಿಯಿಂದ ಮೊದಲ ಬಾರಿಗೆ ಪರ್ಫಾರ್ಮೆನ್ಸ್ ಕಾರೊಂದನ್ನು ಬಿಡುಗಡೆಗೊಳಿಸಿದ್ದು, ಇದರಿಂದಾಗಿ ಕಾರಿನ ಬ್ರಾಂಡ್ ಮೌಲ್ಯ ಹೆಚ್ಚಾಗಲಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ವೋಲ್ವೋ ಅನಾವರಣಗೊಳಿಸಿರುವ ಈ ಪೋಲ್ ಸ್ಟಾರ್ ಕಾರು ಈಗಾಗಲೇ ಬಿಡುಗಡೆಗೊಂಡು ಯಶಸ್ವಿಯಾಗಿರುವ ಎಸ್60 ಕಾರಿನ ಸರಣಿಯೊಂದಿಗೆ ಮಾರಾಟವಾಗಲಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸದಾಗಿ ಬಿಡುಗಡೆಗೊಂಡಿರುವ ಈ ವೋಲ್ವೋ ಎಸ್60 ಪೋಲ್‌ಸ್ಟಾರ್ 2 ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದ್ದು, 470 ಏನ್ಎಂ ತಿರುಗುಬಲದಲ್ಲಿ 362ಯಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಅತ್ಯುತ್ತಮ ಗುಣ ಮಟ್ಟದ ವಾಹನ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಸ್ವೀಡನ್ ಕಾರು ತಯಾರಕ ಕಂಪನಿ ವೊಲ್ವೊನ ಈ ಎಸ್60 ಪೋಲ್‌ಸ್ಟಾರ್ ಕಾರು ಪೆಡಲ್ ಶಿಫ್ಟರ್ ಹೊಂದಿರುವ 8-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಎಸ್60 ಪೋಲ್‌ಸ್ಟಾರ್ ಕಾರು ಅತ್ಯಂತ ದೊಡ್ಡದಾದ ಗಾಳಿ ಕಿಂಡಿ ಹೊಂದಿದ್ದು, ಟರ್ಬೊಚಾರ್ಜರ್ ಮತ್ತು ವಿದ್ಯುಚ್ಛಕ್ತಿ ನಿಯಂತ್ರಿತ ಏರ್ ಪ್ಲಾಪ್ಸ್ ಪಡೆದುಕೊಂಡಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಇನ್ನು ಸಾಮಾನ್ಯ ಜನತೆ ಈ ಕಾರಿನ ಬಗ್ಗೆ ಯೋಚನೆ ಕೂಡ ಮಾಡದೆ ಇರುವ ರೀತಿಯಲ್ಲಿ ದುಬಾರಿ ಮೌಲ್ಯ ಪಡೆದುಕೊಂಡಿದ್ದು , ಕಾರಿನ ಬೆಲೆ ರೂ. 52.5 ಲಕ್ಷ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದ್ದು.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಬಲಿಷ್ಠ ಅಶ್ವಶಕ್ತಿ ಉತ್ಪಾದಿಸುವ ಈ ಕಾರು ಕೇವಲ 4.7 ಸೆಕೆಂಡುಗಳಲ್ಲಿ 0 ಕಿಲೋಮೀಟರಿನಿಂದ 100 ಕಿಲೋಮೀಟರ್ ವೇಗ ಪಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಪ್ರತಿ ಘಂಟೆಗೆ ಸರಿ ಸುಮಾರು 250 ಕಿ.ಮೀ ವೇಗದಲ್ಲಿ ಓಡಿಸುವಷ್ಟು ಕಾರು ಶಕ್ತವಾಗಿದ್ದು, ಬಹಳಷ್ಟು ತಾಂತ್ರಿಕವಾಗಿ ಆಧುನಿಕಗೊಂಡಿರುವ ಈ ಕಾರು ಹೆಚ್ಚಿನ ಶ್ರೀಮಂತ ವರ್ಗಕ್ಕೆ ಇಷ್ಟವಾಗಲಿದೆ ಎನ್ನಬಹುದು.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

S60 ಯ ಅದನ್ನು ಪೋಲ್ ಸ್ಟಾರ್ ಅಮಾನತು ಕಾರಿನ ಗುಣಮಟ್ಟದ ರೂಪಾಂತರ ಹೋಲಿಸಿದರೆ 80 ರಷ್ಟು ಗಟ್ಟಿಯಾದ ಆಗಿದೆ. ಕಾರಿನಲ್ಲಿ ಸುಧಾರಿತ ಸ್ಟೀರಿಂಗ್ ನಿಯಂತ್ರಣ ಭಾವನೆ ಮೂಡಿಸುವ ಸಲುವಾಗಿ ಕಾರ್ಬನ್ ಫೈಬರ್ ಬಾಗುವ ಕಟ್ಟುಪಟ್ಟಿಗಳು ನೀಡಲಾಗಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಸಾಮಾನ್ಯ ಆವೃತಿಯ ಕಾರಿಗೆ ಹೋಲಿಸಿದರೆ ಎಸ್60 ಪೋಲ್‌ಸ್ಟಾರ್ ಕಾರಿನ ಸಸ್ಪೆನ್‌ಷನ್ ಶೇಕಡಾ 80 ರಷ್ಟು ಗಡಸುತನ ಕಡಿಮೆಯಾಗಿದ್ದು, ಇದರಿಂದಾಗಿ ಕಾರು ಹೆಚ್ಚು ಆರಾಮಧಾಯಕವಾಗಿ ಸಾಗಲಿದೆ.

ವೋಲ್ವೋ 'ಎಸ್60 ಪೋಲ್‌ಸ್ಟಾರ್' ಕಾರು ಭಾರತೀಯ ಮಾರುಕಟ್ಟೆಗೆ ಎಂಟ್ರಿ

ಕಾರಿನ ಒಳಭಾಗದಲ್ಲಿ ಕ್ರೀಡಾ ಆಸನಗಳನ್ನು ಇರಿಸಲಾಗಿದ್ದು, ಚರ್ಮದ ಹೊದಿಕೆ ಪಡೆದುಕೊಂಡಿದೆ ಹಾಗು ಕಾರ್ಬನ್-ಫೈಬರ್ ಇನ್ಸರ್ಟ್ ಹೊಂದಿದೆ. ಇನ್ಫೋಟೈನ್ಮೆಂಟ್ ಪರದೆ, ಛ್ರೋಮ್ ಫಿನಿಷ್ ಹೊಂದಿರುವ ಗೇರ್ ಲಿವರ್ ಈ ಪೋಲ್ ಸ್ಟಾರ್ ಕಾರು ಪಡೆದಿದೆ.

Most Read Articles

Kannada
Read more on ವೋಲ್ವೋ volvo
English summary
Read in Kannada about VOLVO S60 PoleStar Launched in India. Get more details about new VOLVO S60 PoleStar's price, mileage, specifications and more.
Story first published: Friday, April 14, 2017, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X