ಬಿಡುಗಡೆಗೆ ಸಿದ್ಧಗೊಂಡ ವೊಲ್ವೋ ಬಹುನಿರೀಕ್ಷಿತ ಎಕ್ಸ್‌ಸಿ 40 ಪ್ರಿಮಿಯಂ ಎಸ್‌ಯುವಿ
ಸಣ್ಣ ಪ್ರಿಮಿಯಂ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರಿನ ಮಾಹಿತಿಗಳು ಇಲ್ಲಿವೆ.
ಸಣ್ಣ ಪ್ರಿಮಿಯಂ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಹೊಸ ಕಾರಿನ ಮಾಹಿತಿಗಳು ಇಲ್ಲಿವೆ.

ಸ್ವೀಡಿಷ್ ಕಾರು ತಯಾರಕ ಸಂಸ್ಥೆಯಾಗಿರುವ ವೊಲ್ಪೋ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಣ್ಣ ಪ್ರಿಮಿಯಂ ಎಸ್‌ಯುವಿ ಎಕ್ಸ್‌ಸಿ 40 ಕಾರು ಬಿಡುಗಡೆಗೊಳಿಸುತ್ತಿದ್ದು, ಚಾಲಕರನಿಗೆ ಇದೊಂದು ಅತ್ಯುತ್ತಮ ಕಾರು ಮಾದರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹಲವಾರು ಬಾಹ್ಯ ಮತ್ತು ಆಂತರಿಕ ಬಣ್ಣ ಸಂಯೋಜನೆಯೊಂದಿಗೆ ಅಭಿವೃದ್ಧಿಯಾಗಿರುವ ವೊಲ್ವೋ ಎಕ್ಸ್‌ಸಿ 40 ಕಾರು, ಐಷಾರಾಮಿ ವಿನ್ಯಾಸಗಳಿಂದಾಗಿ ಆಕರ್ಷಣೆಯ ಕೇಂದ್ರವಾಗಿದೆ ತಪ್ಪಾಗಲಾರದು.
Recommended Video


ಇನ್ನೊಂದು ವಿಶೇಷ ಅಂದ್ರೆ ಎಕ್ಸ್40 ಕಾರು ತಯಾರಿಕೆ ವಿಚಾರದಲ್ಲಿ ಕಾರು ವಿನ್ಯಾಸಕಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ವೊಲ್ಪೋ, ಚಾಲಕನಿಗೆ ಇದೊಂದು ಅತ್ಯುತ್ತಮ ಮಾದರಿಯಾಗುವ ರೀತಿಯಲ್ಲಿ ಕಾರು ಉತ್ಪಾದನೆಗೆ ಸೂಚನೆ ನೀಡಿತ್ತು.

ಈ ಹಿನ್ನೆಲೆ ಹೊಸ ಕಾರಿನ ಬಗ್ಗೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ವೊಲ್ವೋ ಸಂಸ್ಥೆಯು, ಎಕ್ಸ್‌ಸಿ40 ಕಾರಿನ ಚಾಲನೆ ವೇಳೆ ಚಾಲಕರು ತಮ್ಮ ವ್ಯಕ್ತಿತ್ವ ತೆರೆದುಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಹೊಸ ಕಾರನ್ನು ಸಿದ್ಧಗೊಳಿಸುತ್ತಿದೆ.

ಇನ್ನು ಕಾರಿನ ಒಳಭಾಗದಲ್ಲಿ ಬೆಚ್ಚಗಿನ ಲಾವಾ ಆರೆಂಜ್ ಕಾರ್ಪೆಟ್, ಆಕ್ಸೈಡ್ ರೆಡ್, ನಗರ ವಿನ್ಯಾಸಗಳು ಮತ್ತು ಕಾರ್ಟೋಗ್ರಫಿಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳು ಎಕ್ಸ್‌ಸಿ 40 ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಬಹುದಿನಗಳಿಂದ ಇಂತದೊಂದು ವಿಶಿಷ್ಠ ವಿನ್ಯಾಸದ ಕಾರು ಒಂದನ್ನು ಬಿಡುಗಡೆ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದ್ದ ವೊಲ್ವೋ ಈ ಭಾರೀ ಎಕ್ಸ್‌ಸಿ 40ನೊಂದಿಗೆ ತನ್ನ ಕನಸಿನ ಯೋಜನೆ ಸಹಕಾರಗೊಳಿಸುತ್ತಿದ್ದು, ಐಷಾರಾಮಿ ಮಾದರಿಗಳಲ್ಲಿ ಇದೊಂದು ಅತ್ಯುತ್ತಮ ಕಾರು ಆವೃತ್ತಿಯಾಗುವ ತವಕದಲ್ಲಿದೆ.


Click it and Unblock the Notifications








