ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಸ್ವೀಡನ್‌ನ ಕಾರು ತಯಾರಕ ಕಂಪನಿಯಾದ ವೊಲ್ವೋ ತನ್ನ ಜಾಗತಿಕ ಸುರಕ್ಷತಾ ಯೋಜನೆಯಡಿಯಲ್ಲಿ ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಅದರಂತೆ ಕಂಪನಿಯು ತನ್ನ ಹೊಸ ಕಾರುಗಳಲ್ಲಿ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 180 ಕಿ.ಮೀಗಳಿಗೆ ಸೀಮಿತಗೊಳಿಸುವುದಾಗಿ ತಿಳಿಸಿದೆ.

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಇನ್ನು ಮುಂದೆ ಬಿಡುಗಡೆಗೊಳಿಸಲಿರುವ ಎಲ್ಲಾ ಕಾರುಗಳಲ್ಲಿ ವೇಗವನ್ನು ನಿಗದಿಪಡಿಸುವುದಾಗಿ ವೊಲ್ವೋ ಕಂಪನಿಯು ತಿಳಿಸಿದೆ. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಸಲುವಾಗಿ ವೊಲ್ವೋ ಕಂಪನಿಯು ಕಳೆದ ವರ್ಷ ತನ್ನ ಕಾರುಗಳಿಗಾಗಿ ಸುರಕ್ಷತಾ ಪ್ರಸ್ತಾಪವನ್ನು ಬಿಡುಗಡೆಗೊಳಿಸಿತ್ತು.

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಪ್ರಸ್ತಾವನೆಯಡಿಯಲ್ಲಿ, ಕಾರುಗಳ ಗರಿಷ್ಠ ವೇಗವನ್ನು ಪ್ರತಿ ಗಂಟೆಗೆ 180 ಕಿ.ಮೀಗಳಿಗೆ ನಿಗದಿಪಡಿಸಲಾಗುವುದು. ಎಲ್ಲಾ ಮಾದರಿಯ ವೊಲ್ವೋ ಕಾರುಗಳ ಮೇಲೆ ಈ ಮಿತಿಯನ್ನು ನಿಗದಿಪಡಿಸಲಾಗುವುದು ಎಂಬುದನ್ನು ಗಮನಿಸಬೇಕು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ವರ್ಷದಿಂದ ಬಿಡುಗಡೆಯಾಗುವ ಕಾರುಗಳಲ್ಲಿ ವೇಗದ ಮಿತಿಯನ್ನು ನಿಗದಿಪಡಿಸಲಾಗುವುದು. ಸದ್ಯಕ್ಕೆ ವೊಲ್ವೋದ ವಿವಿಧ ಕಾರುಗಳ ಗರಿಷ್ಠ ವೇಗದ ಮಿತಿಯು ಪ್ರತಿ ಗಂಟೆಗೆ 190 ಕಿ.ಮೀನಿಂದ 250 ಕಿ.ಮೀಗಳಾಗಿದೆ.

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸುಮಾರು 13.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಈ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ವಾಹನಗಳ ಅತಿಯಾದ ವೇಗ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಮುಂದಿನ ದಿನಗಳಲ್ಲಿ ತಮ್ಮ ಕಂಪನಿಯ ಕಾರುಗಳಿಂದಾಗುವ ರಸ್ತೆ ಅಪಘಾತಗಳಲ್ಲಿ ಒಂದೇ ಒಂದು ಸಾವು ಸಂಭವಿಸಬಾರದು ಎಂಬ ಕಾರಣಕ್ಕೆ ವೊಲ್ವೋ ತನ್ನ ಪ್ರತಿಯೊಂದು ಕಾರುಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಹೊಸ ಕಾರುಗಳಲ್ಲಿ ಕೇರ್-ಕೀ ಫೀಚರ್ ಅನ್ನು ಪರಿಚಯಿಸಿದೆ.

ಕಾರುಗಳ ಟಾಪ್ ಸ್ಪೀಡ್ ಸೀಮಿತಗೊಳಿಸಿದ ಖ್ಯಾತ ಕಾರು ತಯಾರಕ ಕಂಪನಿ

ಈ ಫೀಚರ್‌ನಲ್ಲಿ ಕಾರಿನ ಮಾಲೀಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಕಾರಿನ ಗರಿಷ್ಠ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಕಡಿಮೆ ಅನುಭವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಈ ಕಾರನ್ನು ಚಾಲನೆ ಮಾಡಿದಾಗ ಈ ಫೀಚರ್ ಉಪಯೋಗಕ್ಕೆ ಬರಲಿದೆ.

Most Read Articles

Kannada
English summary
Volvo cars top speed limited to 180 kmph. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X